Manvitha Kamath: ‘ಟಗರು ಪುಟ್ಟಿ’ಗೆ ಡಬಲ್ ಡಿಗ್ರಿ ಕಿರೀಟ; ಫೋಟೋಶೂಟ್​ನಲ್ಲಿ ಮಿಂಚಿದ ಮಾನ್ವಿತಾ

ಚಿಕ್ಕವಯಸ್ಸಲ್ಲೇ ಸ್ಯಾಂಡಲ್​ವುಡ್​ಗೆ​​ (Sandalwood) ಎಂಟ್ರಿ ಕೊಟ್ಟು ಮಿಂಚುತ್ತಿರೋ ನಟಿ ಮಾನ್ವಿತಾ ಕಾಮತ್, ಇದೀಗ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. CMS ಜೈನ್ ವಿಶ್ವವಿದ್ಯಾಲಯದಿಂದ ಮಾಧ್ಯಮ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

First published:

  • 18

    Manvitha Kamath: ‘ಟಗರು ಪುಟ್ಟಿ’ಗೆ ಡಬಲ್ ಡಿಗ್ರಿ ಕಿರೀಟ; ಫೋಟೋಶೂಟ್​ನಲ್ಲಿ ಮಿಂಚಿದ ಮಾನ್ವಿತಾ

    ಸ್ನಾತಕೋತ್ತರ ಪಡೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತನ್ನ ಸ್ನೇಹಿತರು ಹಾಗೂ ಶಿಕ್ಷಕರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 28

    Manvitha Kamath: ‘ಟಗರು ಪುಟ್ಟಿ’ಗೆ ಡಬಲ್ ಡಿಗ್ರಿ ಕಿರೀಟ; ಫೋಟೋಶೂಟ್​ನಲ್ಲಿ ಮಿಂಚಿದ ಮಾನ್ವಿತಾ

    ಫಿಲ್ಮಂ ಶೂಟಿಂಗ್ನಲ್ಲಿ ಬ್ಯುಸಿ ಆಗಿರೋ ಮಾನ್ವಿತಾ ಕಾಮತ್ ಸಾಮಾಜಿಕ ಜಾಲತಾಣಗಳಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಸಿನಿಮಾ ಸ್ಟೇಟಸ್ಗಳ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ತಾರೆ.

    MORE
    GALLERIES

  • 38

    Manvitha Kamath: ‘ಟಗರು ಪುಟ್ಟಿ’ಗೆ ಡಬಲ್ ಡಿಗ್ರಿ ಕಿರೀಟ; ಫೋಟೋಶೂಟ್​ನಲ್ಲಿ ಮಿಂಚಿದ ಮಾನ್ವಿತಾ

    ಕೆಂಡಸಂಪಿಗೆ ಮಾನ್ವಿತಾ ಕಾಮತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಯುವನಟಿಯಾಗಿದ್ದಾರೆ. ಮಂಗಳೂರಿನಲ್ಲಿ ಪತ್ರಿಕೋದ್ಯಮ ಮತ್ತು ಇಂಗ್ಲೀಷ್ ಸಾಹತ್ಯದಲ್ಲಿ ಪದವಿ ಪಡೆದ ಇವರು ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸುತ್ತಾರೆ.

    MORE
    GALLERIES

  • 48

    Manvitha Kamath: ‘ಟಗರು ಪುಟ್ಟಿ’ಗೆ ಡಬಲ್ ಡಿಗ್ರಿ ಕಿರೀಟ; ಫೋಟೋಶೂಟ್​ನಲ್ಲಿ ಮಿಂಚಿದ ಮಾನ್ವಿತಾ

    ದುನಿಯಾ ಸೂರಿಯವರ `ಕೆಂಡಸಂಪಿಗೆ' ಚಿತ್ರದ ಅಡಿಷನ್ ನಲ್ಲಿ ನಾಯಕಿ ಪಾತ್ರಕ್ಕೆ ಆಯ್ಕೆಯಾದ ಮಾನ್ವಿತಾ ತಮ್ಮ ಮೊದಲ ಚಿತ್ರ ಕೆಂಡಸಂಪಿಗೆಯಲ್ಲಿನ ಅಭಿನಯಕ್ಕೆ ಸೈಮಾ ಪ್ರಶಸ್ತಿ ಪಡೆದಿದ್ದಾರೆ.

    MORE
    GALLERIES

  • 58

    Manvitha Kamath: ‘ಟಗರು ಪುಟ್ಟಿ’ಗೆ ಡಬಲ್ ಡಿಗ್ರಿ ಕಿರೀಟ; ಫೋಟೋಶೂಟ್​ನಲ್ಲಿ ಮಿಂಚಿದ ಮಾನ್ವಿತಾ

    `ಚೌಕ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು `ಕನಕ',`ಟಗರು' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. `ಟಗರು' ಚಿತ್ರದಲ್ಲಿನ ಇವರ ಅಭಿನಯಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರು ಮೆಚ್ಚಿ ಕೊಂಡಾಡಿದ್ರು

    MORE
    GALLERIES

  • 68

    Manvitha Kamath: ‘ಟಗರು ಪುಟ್ಟಿ’ಗೆ ಡಬಲ್ ಡಿಗ್ರಿ ಕಿರೀಟ; ಫೋಟೋಶೂಟ್​ನಲ್ಲಿ ಮಿಂಚಿದ ಮಾನ್ವಿತಾ

    ಮಾನ್ವಿತಾಗೆ ನಟನೆಯ ಜೊತೆಗೆ ಬರವಣಿಗೆಯಲ್ಲೂ ಆಸಕ್ತಿ ಹೊಂದಿರೋದಾಗಿ ಹೇಳಿದ್ರು. 'ನನ್ನ ತಂದೆ ಬರಹಗಾರರು. ಅವರು ಕನ್ನಡ-ಇಂಗ್ಲಿಷ್ನಲ್ಲಿ ತುಂಬ ಬರೆಯುತ್ತಿದ್ದರು. ನನಗೂ ಅದೇ ಗುಣ ಬಂದಿದೆ. ಸಿನಿಮಾಗಳಿಗೂ ಬರೆಯಬಹುದು ಎಂಬುದನ್ನು ನಾನು ಈಚೆಗೆ ಅರಿತೆ. ನಿರ್ದೇಶನ ಮಾಡಬೇಕೆನ್ನುವ ಆಸೆ ಕೂಡ ಇದೆ.

    MORE
    GALLERIES

  • 78

    Manvitha Kamath: ‘ಟಗರು ಪುಟ್ಟಿ’ಗೆ ಡಬಲ್ ಡಿಗ್ರಿ ಕಿರೀಟ; ಫೋಟೋಶೂಟ್​ನಲ್ಲಿ ಮಿಂಚಿದ ಮಾನ್ವಿತಾ

    ಆದರೆ, ಅದಕ್ಕೆ ಇನ್ನಷ್ಟು ಅಭ್ಯಾಸದ ಅಗತ್ಯತೆ ಇದೆ. ಸದ್ಯಕ್ಕಂತೂ ಬರವಣಿಗೆ ಮೇಲೆ ಹೆಚ್ಚು ಗಮನ ನೀಡಿದ್ದೇನೆ. ಪೂರ್ಣ ಪ್ರಮಾಣದ ಸಿನಿಮಾಕ್ಕೆ ತಕ್ಕಂತೆ ಸ್ಕ್ರಿಪ್ಟ್ ಸಿದ್ಧಗೊಳ್ಳುತ್ತಿದ್ದಂತೆಯೇ, ನಿರ್ಮಾಪಕರಿಗೆ ಕಥೆ ಹೇಳಲಿದ್ದೇನೆ.

    MORE
    GALLERIES

  • 88

    Manvitha Kamath: ‘ಟಗರು ಪುಟ್ಟಿ’ಗೆ ಡಬಲ್ ಡಿಗ್ರಿ ಕಿರೀಟ; ಫೋಟೋಶೂಟ್​ನಲ್ಲಿ ಮಿಂಚಿದ ಮಾನ್ವಿತಾ

    ಚಿತ್ರರಂಗದ ಒಂದಷ್ಟು ಜನರೊಂದಿಗೆ ಬರವಣಿಗೆ ಕುರಿತು ಚರ್ಚೆ ಮಾಡುತ್ತಿದ್ದೇನೆ. ಸಿನಿಮಾ ಅನ್ನೋದು ಬರೀ ನನ್ನ ಪ್ಯಾಷನ್ ಅಷ್ಟೇ ಅಲ್ಲ, ನನ್ನ ಜೀವನವೇ ಅದಾಗಿದೆ. ಸಿನಿಮಾವನ್ನು ನಾನು ತುಂಬ ಗಂಭೀರವಾಗಿ ತೆಗೆದುಕೊಂಡಿದ್ದೇನೆ' ಎಂದು ಮಾನ್ವಿತಾ ಹೇಳಿದ್ರು.

    MORE
    GALLERIES