ACB Raid ವೇಳೆ ಯಾರ ಮನೆಯಲ್ಲಿ ಎಷ್ಟು ಚಿನ್ನ-ಬೆಳ್ಳಿ-ಹಣ ಸಿಕ್ಕಿದೆ? ಇಲ್ಲಿದೆ ನೋಡಿ ಧನಕನಕಗಳ Photos
ACB Raid in Karnataka Today: ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ( ACB-ಭ್ರಷ್ಟಾಚರ ನಿಗ್ರಹ ದಳ) ಶಾಕ್ ನೀಡಿದೆ. ರಾಜ್ಯದ 60 ಕಡೆ 100 ಅಧಿಕಾರಿಗಳು ‘ಮತ್ತು 300 ಸಿಬ್ಬಂದಿಯ ನೇತೃತ್ವದಲ್ಲಿ ದಾಳಿ (ACB Raid) ನಡೆದಿದೆ.
ದಾಳಿ ವೇಳೆ ಪತ್ತೆಯಾದ ಚಿನ್ನಾಭರಣ, ಹಣದ ಕಂತೆಗಳು ಜನಸಾಮಾನ್ಯರ ಹುಬ್ಬೇರಿಸುವಂತಿದೆ. ಸರ್ಕಾರಿ ಅಧಿಕಾರಿಗಳ ಧನಕನಕಗಳ ಬಂಡಾರ ಕಂಡು ಎಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
2/ 8
ರೆವಿನ್ಯೂ ಇನ್ಸ್ ಪೆಕ್ಟರ್ ಲಕ್ಷ್ಮೀನರಸಿಂಹಯ್ಯ ಮನೆಯಲ್ಲಿ ಪತ್ತೆಯಾದ ನಗದು ಹಣ, ಚಿನ್ನ ಬೆಳ್ಳಿ ವಸ್ತುಗಳು ಭಂಡಾರ ಇದು.
3/ 8
ಅಧಿಕಾರಿ ಮಾಯಣ್ಣ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ-ಬೆಳ್ಳಿ ಪತ್ತೆಯಾಗಿದೆ. ಅಕ್ಕಸಾಲಿಗರಿಂದ ಚಿನ್ನ ಬೆಳ್ಳಿ ವಸ್ತುಗಳ ಮಾಪನ ಮಾಡಲಾಯಿತು.
4/ 8
ಎಸಿಬಿ ಅಧಿಕಾರಿಗಳ ದಾಳಿ ವೇಳೆ ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಟಿ ಎಸ್ ರುದ್ರೇಶಪ್ಪ ಮನೆಯಲ್ಲಿ ಏಳು ಕೆಜಿ ಚಿನ್ನ ಪತ್ತೆ ಆಗಿದೆ.
5/ 8
ಗೋಕಾಕ್ ನಲ್ಲಿರುವ ಸಿನಿಯರ್ ಮೋಟಾರ್ ವೆಹಿಕಲ್ ಇನ್ಸ್ ಪೆಕ್ಟರ್ ಸದಾಶಿವ ಮರಲಿಂಗಣ್ಣನವರ್ ಅವರ ಮನೆಯಲ್ಲಿ ಪತ್ತೆಯಾದ ಚಿನ್ನದ ಬಿಸ್ಕೆಟ್, ಚಿನ್ನಾಭರಣ, ಹಣ.
6/ 8
ಅಂದಾಜು 1 ಕೆಜಿ 135 ಗ್ರಾಂ ಕೆಜಿ ಚಿನ್ನದ ಆಭರಣ ಪತ್ತೆಯಾಗಿದೆ.
7/ 8
ಎಲ್ ಸಿ ನಾಗರಾಜು ಮನೆಯಲ್ಲಿ ಈಗಾಗಲೇ ಸುಮಾರು 40 ಲಕ್ಷ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಲಕ್ಷ ಲಕ್ಷ ನೋಟಿನ ಕಟ್ಟುಗಳನ್ನ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಸುಮಾರು 20 ಜನ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಯುತ್ತಿದೆ.
8/ 8
ದೊಡ್ಡಬಳ್ಳಾಪುರ ರೆವಿನ್ಯೂ ಇನ್ಸ್ಪೆಕ್ಟರ್ ಮನೆಯಲ್ಲಿ ಪತ್ತೆಯಾದ ನಗದು.