Zameer ನಿವಾಸದ ಮುಂದೆ ಹೈಡ್ರಾಮಾ; ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ACB ದಾಳಿ

ಇಂದು ಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಸೇರಿದಂತೆ ಐದು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಜಮೀರ್ ಅವರ ಅಭಿಮಾನಿಗಳು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ.

First published:

  • 18

    Zameer ನಿವಾಸದ ಮುಂದೆ ಹೈಡ್ರಾಮಾ; ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ACB ದಾಳಿ

    ಪೊಲೀಸರು ಸೂಚನೆ ನೀಡಿದ್ರೂ ಬೆಂಬಲಿಗರು  ತೆರಳದೇ ಪ್ರಧಾನಿ ಮೋದಿ  ಮತ್ತು  ಬಿಜಪಿ ವಿರುದ್ಧ ದಿಕ್ಕಾರ ಕೂಗುತ್ತಿದ್ದಾರೆ. ಬೆಂಬಲಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುನ್ನೇಚ್ಚರಿಕೆ ಕ್ರಮವಾಗಿ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

    MORE
    GALLERIES

  • 28

    Zameer ನಿವಾಸದ ಮುಂದೆ ಹೈಡ್ರಾಮಾ; ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ACB ದಾಳಿ

    ಎಸಿಬಿ ರಚನೆ ಬಳಿಕ ಇದೇ ಮೊದಲ ಬಾರಿಗೆ ಎಂಎಲ್ಎ ಮನೆ ಮೇಲೆ ರೇಡ್ ಮಾಡಲಾಗಿದೆ. ಎಸಿಬಿ ರಚನೆ ಬಳಿಕ ಅಧಿಕಾರಿಗಳ ಮೇಲಷ್ಟೆ ದಾಳಿ ಮಾಡಲಾಗ್ತಿತ್ತು. ಇದೀಗ ಶಾಸಕ ಜಮೀರ್ ಮನೆ ಮೇಲೆ ದಾಳಿ ನಡೆಸಿದೆ. ಈ ಹಿಂದೆ ಕೆಲವು ಪ್ರಕರಣಗಳಲ್ಲಿ ಶಾಸಕರ ವಿಚಾರಣೆ ಮಾಡಿತ್ತು.

    MORE
    GALLERIES

  • 38

    Zameer ನಿವಾಸದ ಮುಂದೆ ಹೈಡ್ರಾಮಾ; ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ACB ದಾಳಿ

    2021 ಅಗಸ್ಟ್ 5 ರಂದು ಜಮೀರ್ ಅಹಮದ್ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ರು. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ, ಭವ್ಯ ಮನೆ ನಿರ್ಮಾಣ, ಇದೇ ವೇಳೆ ಐಎಂಎ ಕೇಸಲ್ಲಿ ಜಮೀರ್ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಮೀರ್ ಅಹಮದ್ ಮನೆ ಮೇಲೆ ದಾಳಿ ನಡೆದಿತ್ತು.

    MORE
    GALLERIES

  • 48

    Zameer ನಿವಾಸದ ಮುಂದೆ ಹೈಡ್ರಾಮಾ; ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ACB ದಾಳಿ

    ಸುಮಾರು 24 ಗಂಟೆಗಳ ಕಾಲ ಜಮೀರ್ ಮನೆಯಲ್ಲಿ ಶೋಧ ನಡೆಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಳಿಕ ಈ ಬಗ್ಗೆ ತನಿಖೆ ನಡೆಸಿ ಎಸಿಬಿಗೆ ಒಂದು ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಇಡಿ ರಿಪೋರ್ಟ್ ಬೆನ್ನಲ್ಲೆ ಜಮೀರ್ ಅಹಮದ್ ಮನೆ, ಕಚೇರಿ, ಪ್ಲಾಟ್ ಸೇರಿ ಐದು ಕಡೆ ಎಸಿಬಿ ದಾಳಿ ನಡೆಸಿದೆ.

    MORE
    GALLERIES

  • 58

    Zameer ನಿವಾಸದ ಮುಂದೆ ಹೈಡ್ರಾಮಾ; ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ACB ದಾಳಿ

    ಒಟ್ಟು 5 ಕಡೆ ದಾಳಿ ನಡೆದಿದೆ. ಕಂಟೋನ್ಮೆಂಟ್ ರೋಡ್ ಶಾಸಕರಾದ ಶ್ರೀ ಜಮೀರ್ ಅಹಮದ್ ಖಾನ್ ನಿವಾಸ, ಸಿಲ್ವರ್ ಓಕ್ ಅಪಾರ್ಟ್ಮೆಂಟ್ ನಲ್ಲಿರುವ ಫ್ಲಾಟ್, ಸದಾಶಿವನಗರದಲ್ಲಿರುವ ಅತಿಥಿ ಗೃಹ, ಬನಶಂಕರಿಯಲ್ಲಿರುವ ಜಿ ಕೆ ಅಸೋಸಿಯೇಟ್ಸ್ ಕಚೇರಿ ಮತ್ತು ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆಯೂ ದಾಳಿ ನಡೆದಿದೆ.

    MORE
    GALLERIES

  • 68

    Zameer ನಿವಾಸದ ಮುಂದೆ ಹೈಡ್ರಾಮಾ; ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ACB ದಾಳಿ

    ಸದಾಶಿವನಗರದ ಜಮೀರ್ ಫ್ಲ್ಯಾಟ್ ಮೇಲೆ  ಡಿವೈಎಸ್ ಪಿ ವಿಜಯ್ ಹಡಗಲಿ ಅಂಡ್ ಟೀಂ ದಾಳಿ ನಡೆಸಿದೆ. ಈ ಹಿಂದೆ ಇದೇ ಪ್ಲಾಟ್ ನ್ನ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದರು. ಇಬ್ಬರ ಸಂಬಂಧ ಹಳಸಿದ ನಂತರ ಫ್ಲ್ಯಾಟ್ ವಾಪಸ್ ಪಡೆದುಕೊಂಡಿದ್ದರು.

    MORE
    GALLERIES

  • 78

    Zameer ನಿವಾಸದ ಮುಂದೆ ಹೈಡ್ರಾಮಾ; ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ACB ದಾಳಿ

    ಇನ್ನು ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ನಲ್ಲಿ  ಕಚೇರಿಯ ಸಿಸಿಟಿವಿ ಕನೆಕ್ಷನ್ ಕಟ್ ಮಾಡಿ ಎಸಿಬಿ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ. ಕಚೇರಿಯ ಸೀಲಿಂಗ್ ಪಿಓಪಿಯನ್ನು ಕೆಲವು ಕಡೆ ತೆಗದು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

    MORE
    GALLERIES

  • 88

    Zameer ನಿವಾಸದ ಮುಂದೆ ಹೈಡ್ರಾಮಾ; ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ACB ದಾಳಿ

    ಕಚೇರಿ ಬಳಿಕ ನ್ಯಾಷನಲ್ ಟ್ರಾವೆಲ್ಸ್ ಗೋಡೌನ್ ಗೂ ಅಧಿಕಾರಿಗಳ ಎಂಟ್ರಿ ಕೊಟ್ಟು ಕಡತಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಗೋಡೌನ್ ನಲ್ಲಿ ಆರ್ಥಿಕ ವ್ಯವಹಾರಗಳಿಗೆ ಸಂಬಂಧಪಟ್ಟ ಕಡತಗಳನ್ನು ಇರಿಸಲಾಗಿದೆ.ಸಿಬ್ಬಂದಿಗಳನ್ನು ಕರೆದುಕೊಂಡು ಅವರ ಸಮ್ಮುಖದಲ್ಲೇ ಗೋಡೌನ್ ಪರಿಶೀಲನೆ  ನಡೆಸಲಾಗುತ್ತಿದೆ.

    MORE
    GALLERIES