ACB Raid: ರಾಯಚೂರಿನ ಎಇಇ ಅಶೋಕ್ ರೆಡ್ಡಿ ಮನೆಯ ಕಸದ ಡಬ್ಬಿಯಲ್ಲಿ ಚಿನ್ನಾಭರಣ ಪತ್ತೆ
ಇಂದು ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ ಶಾಕ್ ನೀಡಿದೆ. 18 ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ರಾಜ್ಯಾದ್ಯಂತ 75 ಕಡೆ 200ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈಗಾಗಲೇ ಶೋಧ ಕಾರ್ಯ ನಡೆಯುತ್ತಿದ್ದು, ನಗದು, ಚಿನ್ನಾಭರಣ ಪತ್ತೆಯಾಗಿರುವ ಫೋಟೋಗಳು ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿವೆ.
ರಾಯಚೂರಿನ ದೇವದುರ್ಗದ ಎಇಇ ಅಶೋಕ್ ರೆಡ್ಡಿ ಪಾಟೀಲ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಕಸದ ಬುಟ್ಟಿಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.
2/ 8
ಅಶೋಕ್ ರೆಡ್ಡಿ ಪಾಟೀಲ್ ಮನೆ ಮೇಲೆ 7 ಲಕ್ಷ ನಗದು, 41 ತೊಲೆ 8 ಗ್ರಾಂ ಚಿನ್ನ, 60 ತೊಲೆ ಬೆಳ್ಳಿ ವಸ್ತು ಪತ್ತೆಯಾಗಿದೆ. ಅಶೋಕ್ ರೆಡ್ಡಿ ನಿವಾಸದಲ್ಲಿ ಶೋಧ ಕಾರ್ಯ ಮುಂದುವರಿದಿದೆ.
3/ 8
ಎಸಿಬಿ ದಾಳಿ ಹಿನ್ನೆಲೆ ಮಾಧ್ಯಮ ಸಿಬ್ಬಂದಿ ವರದಿ ಬಿತ್ತರ ಮಾಡುತ್ತಿದ್ರೆ, ಅಶೋಕ್ ರೆಡ್ಡಿ ಆಕ್ರೋಶ ಹಾಕಿರುವ ಘಟನೆಯೂ ನಡೆದಿದೆ. ಅಕ್ರಮ ಸಂಪತ್ತು ಪತ್ತೆಯಾಗುತ್ತಿದ್ದಂತೆ ತನ್ನ ಆಕ್ರೋಶವನ್ನು ಮಾಧ್ಯಮಗಳ ಮೇಲೆ ಹಾಕಿದ್ದಾರೆ.
4/ 8
ಮಂಗಳೂರಿನ ಮೆಸ್ಕಾಂ ಎಇಇ ದಯಾಳ್ ಸುಂದರ್ ನಿವಾಸದಲ್ಲಿ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆ. ದಯಾಳ್ ಸುಂದರ್ ಮಂಗಳೂರು ಮತ್ತು ಮೈಸೂರಿನಲ್ಲಿ ಆಸ್ತಿ ಮಾಡಿಕೊಂಡಿದ್ದಾರೆ,
5/ 8
ಮೈಸೂರಿನಲ್ಲಿ 2 ಸೈಟ್, ಹುಣಸೂರಿನಲ್ಲಿ ಒಂದು ಸೈಟ್ ಮತ್ತು 2 ಎಕರೆ ಕೃಷಿ ಭೂಮಿಯ ದಾಖಲೆ ಪತ್ರಗಳು ಪತ್ತೆಯಾಗಿವೆ. ಸದ್ಯ ಕೋಟ್ಯಂತರ ಮೌಲ್ಯದ ಜಾಗದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. (ಮಹಾಲಕ್ಷ್ಮಿ ಲೇಔಟ್ ಬಿ ಕೆ ಶಿವಕುಮಾರ್ ಮನೆಯಲ್ಲಿ ಪತ್ತೆಯಾದ ಚಿನ್ನ, ಬೆಳ್ಳಿ ವಸ್ತುಗಳು)
6/ 8
ಮಂಗಳೂರಿನ ಕದ್ರಿ ಕಂಬಳ ಬಳಿ ಡಬಲ್ ಬೆಡ್ ರೂ ಫ್ಲಾಟ್ ಪತ್ತೆ, ಮಂಗಳೂರಿನ ಬೆಂದೂರ್ ವೆಲ್ ನ ಬಾಡಿಗೆ ಮನೆಯಲ್ಲಿ 4 ಕೆ.ಜಿ ಬೆಳ್ಳಿ, 300 ಗ್ರಾಂ ಚಿನ್ನ ಹಾಗೂ ನಗದು ಪತ್ತೆಯಾಗಿದೆ.
7/ 8
ಕಳೆದ ಹತ್ತು ವರ್ಷಗಳಿಂದ ಮಂಗಳೂರಿನ ಮೆಸ್ಕಾಂ ಇಲಾಖೆಯಲ್ಲಿ ದಯಾಳ್ ಸುಂದರ್ ಸೇವೆ ಸಲ್ಲಿಸುತ್ತಿದ್ದು, ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಅನುಮಾಗಳು ವ್ಯಕ್ತವಾಗಿವೆ.
8/ 8
ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ರಸ್ತೆ ಸುರಕ್ಷತೆಯ ಅಧಿಕಾರಿ ಸಿ.ಜೆ ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣಗಳು ಮತ್ತು ಆಸ್ತಿ ಪತ್ರಗಳು ಪತ್ತೆಯಾಗಿವೆ.
First published:
18