Viral Video: ಅಭ್ಯರ್ಥಿಗಳಿಂದ ಹಣ ಪಡೆದು ಜನರಿಗೆ ನೀಡದ ಮುಖಂಡ; ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ!

ಚಿಕ್ಕಮಗಳೂರು: ಇದು ಚುನಾವಣೆಯ ಕಾಲ. ಪ್ರತಿದಿನ ಏನೇ ಆದ್ರೂ ಸುದ್ದಿಯಾಗುತ್ತೆ. ಮತದಾರರ ಮನವೊಲಿಸಲು ಅಭ್ಯರ್ಥಿಗಳು ಹಣ ಹಂಚೋದು, ಗಿಫ್ಟ್ ನೀಡೋದು ಮಾಡ್ರಾ ಇರ್ತಾರೆ. ಇದೀಗ ಇದೇ ಕಾರಣಕ್ಕೆ ತರೀಕೆರೆಯಲ್ಲೊಂದು ಜಗಳವೇ ನಡೆದಿದೆ.

First published:

  • 17

    Viral Video: ಅಭ್ಯರ್ಥಿಗಳಿಂದ ಹಣ ಪಡೆದು ಜನರಿಗೆ ನೀಡದ ಮುಖಂಡ; ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ!

    ಹೌದು.. ಅಭ್ಯರ್ಥಿಗಳಿಂದ ಹಣ ಪಡೆದು ಗ್ರಾಮದ ಜನರಿಗೆ ನೀಡದೇ ತಾನೇ ಇಟ್ಟುಕೊಂಡಿದ್ದಾನೆ ಎನ್ನಲಾದ ಗ್ರಾಮದ ಮುಖಂಡನಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಬಾರಿಸಿದ ಘಟನೆ ನಡೆದಿದೆ.

    MORE
    GALLERIES

  • 27

    Viral Video: ಅಭ್ಯರ್ಥಿಗಳಿಂದ ಹಣ ಪಡೆದು ಜನರಿಗೆ ನೀಡದ ಮುಖಂಡ; ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ!

    ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಪಿರಮೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಹಣ ನೀಡುತ್ತೇನೆ ಎಂದು ವಂಚಿಸಿದ ಮಂಜು ಎಂಬಾತನಿಗೆ ಕ್ಲಾಸ್‌ ತೆಗೆದುಕೊಂಡು ಮನಸ್ಸಿಗೆ ಬಂದಂತೆ ಕೋಲಿನಿಂದ ಬಾರಿಸಿದ್ದಾರೆ.

    MORE
    GALLERIES

  • 37

    Viral Video: ಅಭ್ಯರ್ಥಿಗಳಿಂದ ಹಣ ಪಡೆದು ಜನರಿಗೆ ನೀಡದ ಮುಖಂಡ; ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ!

    ಬಿಜೆಪಿ ಅಭ್ಯರ್ಥಿ ಸುರೇಶ್ ಮತ್ತು ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಹಮ್ಮಿಕೊಂಡಿದ್ದ ರೋಡ್‌ಶೋನಲ್ಲಿ ಭಾಗವಹಿಸಿದರೆ ದುಡ್ಡು ಕೊಡೋದಾಗಿ ಮಂಜು ಗ್ರಾಮಸ್ಥರಿಗೆ ಹೇಳಿ ಕರೆದೊಯ್ದಿದ್ದ.

    MORE
    GALLERIES

  • 47

    Viral Video: ಅಭ್ಯರ್ಥಿಗಳಿಂದ ಹಣ ಪಡೆದು ಜನರಿಗೆ ನೀಡದ ಮುಖಂಡ; ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ!

    ಆದರೆ ಕಾರ್ಯಕ್ರಮ ಮುಗಿದರೂ ಗ್ರಾಮದ ಯಾರಿಗೂ ಆತ ದುಡ್ಡು ನೀಡಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಆತನನ್ನು ರಸ್ತೆಯಲ್ಲೇ ತಡೆದು ಪ್ರಶ್ನಿಸಿದ್ದು. ಈ ವೇಳೆ ರೊಚ್ಚಿಗೆದ್ದ ಮಹಿಳೆ ಆತನಿಗೆ ಬೈಕ್‌ನಲ್ಲಿ ಕುಳಿತಿದ್ದಾಗಲೇ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.

    MORE
    GALLERIES

  • 57

    Viral Video: ಅಭ್ಯರ್ಥಿಗಳಿಂದ ಹಣ ಪಡೆದು ಜನರಿಗೆ ನೀಡದ ಮುಖಂಡ; ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ!

    ಮಹಿಳೆ ಬೈಕ್‌ನಲ್ಲಿ ಕುಳಿತಿದ್ದ ಮಂಜುಗೆ ಕೋಲಿನಿಂದ ಮನಬಂದಂತೆ ಹೊಡೆದಾಗ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಒಮ್ಮೆ ತಡೆಯಲು ಯತ್ನಿಸಿದ್ದು, ಆದರೂ ಕೋಪದಿಂದ ಇದ್ದ ಮಹಿಳೆ ಆತನಿಗೆ ಹಲ್ಲೆ ಮಾಡೋದನ್ನು ನಿಲ್ಲಿಸಿಲ್ಲ.

    MORE
    GALLERIES

  • 67

    Viral Video: ಅಭ್ಯರ್ಥಿಗಳಿಂದ ಹಣ ಪಡೆದು ಜನರಿಗೆ ನೀಡದ ಮುಖಂಡ; ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ!

    ಹಣ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮಂಜುನನ್ನು ಪ್ರಶ್ನಿಸಿದಾಗ ಆತ ಕಾರಣ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಗ್ರಾಮಸ್ಥರು ಆತನ ಮೇಲೆ ಹಲ್ಲೆ ಮಾಡಿದ್ದಾರೆ.

    MORE
    GALLERIES

  • 77

    Viral Video: ಅಭ್ಯರ್ಥಿಗಳಿಂದ ಹಣ ಪಡೆದು ಜನರಿಗೆ ನೀಡದ ಮುಖಂಡ; ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ!

    ಇದೀಗ ಹಣ ನೀಡದ ವಿಚಾರಕ್ಕೆ ಸಂಬಂಧಿಸಿ ನಡೆದ ಈ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ತರಹೇವಾರಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

    MORE
    GALLERIES