ತಜ್ಞರು ಈ ಬಗ್ಗೆ ಸವಿವರವಾಗಿ ಹೇಳಿದ್ರೂ ನಮ್ಮ ಜನರು ಮರಕ್ಕೆ ವಿಶೇಷ ಪೂಜೆ ಸಲ್ಲಿಸಲು ಆರಂಭಿಸುತ್ತಾರೆ. ಮರಕ್ಕೆ ಕುಂಕುಮ. ಅರಿಶಿನ ಹಚ್ಚಿ ಆರತಿ ಬೆಳಗಿ ಮರವನ್ನು ಪೂಜೆ ಮಾಡುತ್ತಾರೆ.
2/ 7
ಇದು ನಂಬಿಕೆ ವಿಷಯವಾಗಿರುವ ಕಾರಣ ತಜ್ಞರು ತಡೆಯಲು ಸಹ ಮುಂದಾಗುವದಿಲ್ಲ. ಗ್ರಾಮೀಣ ಪ್ರದೇಶದ ಮುಗ್ಧ ಜನರು ಇಂತಹ ವಿಸ್ಮಯ ಕಂಡ್ರೆ ಇದೊಂದು ಪವಾಡ ಎಂದು ತಿಳಿದುಕೊಳ್ಳುತ್ತಾರೆ.
3/ 7
ಆದ್ರೀಗ ಇಂತಹ ಘಟನೆ ರಾಜಧಾನಿ ಬೆಂಗಳೂರಿನ ಮಾಗಡಿ ರಸ್ತೆಯ ವಿದ್ಯಾರಣ್ಯ ನಗರದಲ್ಲಿ ನಡೆದಿದೆ. ಮರದಿಂದ ಕೆಂಪು ದ್ರವ ಹೊರ ಬರುತ್ತಿರೋದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
4/ 7
ಈ ಮರ ಕಳೆದ 40 ವರ್ಷಗಳಿಂದ ನಮ್ಮ ಮನೆಯ ಮುಂದಿದೆ. ಆದರೆ ಒಮ್ಮೆಯೂ ಈ ರೀತಿಯ ದ್ರವ ಹೊರ ಬಂದಿಲ್ಲ. ಇದನ್ನು ಬೂರ್ಗದ ಮರ ಎಂದು ಕರೆಯುತ್ತೇವೆ ಎಂದು ಸ್ಥಳೀಯ ನಿವಾಸಿ ಹೇಳುತ್ತಾರೆ.
5/ 7
ಈಗ ಮರದಿಂದ ಬರುತ್ತಿರುವ ಕೆಂಪು ದ್ರವ ನೋಡಲು ವಿದ್ಯಾರಣ್ಯ ನಗರ ವ್ಯಾಪ್ತಿಯ ಜನರು ಆಗಮಿಸುತ್ತಿದ್ದಾರೆ. ಇನ್ನು ಸ್ಥಳೀಯ ಹಿರಿಯರು ಮರಕ್ಕೆ ಸೀರೆ ಸುತ್ತಿ ಪೂಜೆ ಸಲ್ಲಿಸಿದ್ದಾರೆ.
6/ 7
ಮರದಿಂದ ಕೆಂಪು ದ್ರವಕ್ಕೆ ಬರುತ್ತಿರಲು ವೈಜ್ಞಾನಿಕ ಕಾರಣ ಇರಬಹುದು. ಆದ್ರೆ ಈ ಬಗ್ಗೆ ನಮಗೆ ಗೊತ್ತಿಲ್ಲ. ಇಂತಹ ವಿಸ್ಮಯ ನೋಡ್ತಿರೋದು ಇದೇ ಮೊದಲು. ಯಾರಾದ್ರೂ ತಜ್ಞರು ಬಂದು ಮರದ ಬಗ್ಗೆ ಮಾಹಿತಿ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.
7/ 7
ಇನ್ನು ಮರದ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮರ ನೋಡಲು ಬರುತ್ತಿರುವ ಜನರು ಕಲ್ಲು ಮತ್ತು ಚೂಪಾದ ವಸ್ತುಗಳಿಂದ ತೊಗಟೆ ತೆಗೆಯುವ ಮೂಲಕ ಮರಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ.