ಬೆಳಗಾವಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ಎಲ್ಲಾ ಜಿಲ್ಲೆಗಳ ಪ್ರಮುಖ ಮಾರ್ಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಚುನಾವಣಾ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಈ ನಡುವೆ ಬೆಳಗಾವಿಯ ಕರ್ನಾಟಕ ಚೌಕ್ ಬಳಿಯ ಚೆಕ್ ಪೋಸ್ಟ್ ಬಳಿ ವ್ಯಕ್ತಿಯೋರ್ವ ಯಾವುದೇ ದಾಖಲೆ ಇಲ್ಲದೆ 26 ಲಕ್ಷ ರೂಪಾಯಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಘಟನೆ ಬೆಳಕಿಗೆ ಬಂದಿದೆ ಕೂಡಲೇ ಪೊಲೀಸರು ಹಣ ಸೀಜ್ ಮಾಡಿದ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
ಹಣದ ಮೂಲದ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿ, ತಮ್ಮ ಪತ್ನಿಯೊಂದಿಗೆ ಜಗಳವಾಡಿಕೊಂಡು ಮನೆಯಿಂದ ಹೊರ ಬಂದಿರುವುದು ತಿಳಿದು ಬಂದಿದೆ. ಅಲ್ಲದೆ ಬರುವ ವೇಳೆ 26 ಲಕ್ಷ ರೂಪಾಯಿ ನಗದು ಹಣವನ್ನು ತಂದಿದ್ದ ಆತ, ಗೋವಾದ ಕ್ಯಾಸಿನೋಗೆ ತೆರಳಲು ಮುಂದಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಹಣ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮುಂಬೈ ಮೂಲದ ಗುತ್ತಿಗೆದಾರ ಬಾದಲ್ ನರ್ಬಾಜೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ
ಇನ್ನು, ಶಿವಮೊಗ್ಗದಲ್ಲಿ ಭರ್ಜರಿ ಭೇಟಿಯಾಡಿರುವ ಪೊಲೀಸರು 4.50 ಕೋಟಿ ರೂಪಾಯಿ ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ. ತುಂಗಾನಗರ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ ಬೊಲೆರೋದಲ್ಲಿ ಸಾಗಿಸುತ್ತಿದ್ದ 1.40 ಕೋಟಿ ರೂಪಾಯಿ, ಸಾಗರ ಗ್ರಾಮಾಂತರ ಚೆಕ್ ಪೋಸ್ಟ್ ನಲ್ಲಿ 20 ಲಕ್ಷ ರೂಪಾಯಿ, ವಿನೋಬನಗರ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ 26 ಕ್ವಿಂಟಾಲ್ ಅಕ್ಕಿ ಹಾಗೇ ಶಿಕಾರಿಪುರದಲ್ಲಿ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ.
75 ಸಾವಿರ ಮೌಲ್ಯದ 82 ಲೀಟರ್ ಮಧ್ಯ ಸೀಜ್
ಚುನಾವಣಾ ನೀತಿ ಸಂಹಿತಿ ಜಾರಿ ಹಿನ್ನಲೆ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಸ್ಕ್ಯಾಡ್ ಟೀಂ ಭರ್ಜರಿ ಭೇಟೆಯಾಡಿದೆ. ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ನಲ್ಲಿ ಪೋಲಿಸರ ತಪಾಸಣೆ ವೇಳೆ 75 ಸಾವಿರ ಮೌಲ್ಯದ 82 ಲೀಟರ್ ಮಧ್ಯ 2 ಲಕ್ಷ ಮೌಲ್ಯದ ಮಾದಕ ವಸ್ತುಗಳು ಹಾಗೂ 14 ಲಕ್ಷದ 50 ಸಾವಿರ ರೂಪಾಯಿ ಹಣ ಸೀಜ್ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
ಕಳೆದ ನಾಲ್ಕು ದಿನಗಳಲ್ಲಿ 172 ಪ್ರಕರಣ ದಾಖಲು
ಚುನಾವಣೆ ಘೋಷಣೆ ಬೆನ್ನಲ್ಲೇ ಹೆಚ್ಚಾಯ್ತು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಸಂಬಂಧ ರಾಜ್ಯದಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ 172 ಪ್ರಕರಣಗಳನ್ನು ದಾಖಲು ಮಾಡಿಕೊಂಡು ಕೋಟಿ ಕೋಟಿ ಹಣ ಸೀಜ್ ಮಾಡಿದ್ದಾರೆ. ಫ್ಲೈಯಿಂಗ್ ಸ್ಕ್ವಾಡ್, SSTs ಟೀಂ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. (ಸಾಂದರ್ಭಿಕ ಚಿತ್ರ)
21,76, 950 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ
ಇದುವರೆಗೂ ಬರೋಬ್ಬರಿ 7,07,79,207 ಕೋಟಿ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. 5.80 ಲಕ್ಷ ರೂಪಾಯಿ ಮೌಲ್ಯದ 1,156.11 ಲೀಟರ್ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ. 21,76, 950 ಲಕ್ಷ ರೂಪಾಯಿ ಮೌಲ್ಯದ 39.25 ಕೆ.ಜಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಅಲ್ಲದೆ 9,58,68,772 ಕೋಟಿ ರೂಪಾಯಿ ಮೌಲ್ಯದ ಹಂಚಲು ತಂದಿದ್ದ ಸಾಮಗ್ರಿಗಳ ವಶಕ್ಕೆ ಪಡೆಯಲಿದೆ.
ಒಟ್ಟಾರೆಯಾಗಿ 39,38,44,847 ಕೋಟಿ ಮೌಲ್ಯದ ಮದ್ಯ, ಡ್ರಗ್ಸ್, ಹಾಗೂ ಹಣ ವಶ
ಉಳಿದಂತೆ ಆದಾಯ ತೆರಿಗೆ ಇಲಾಖೆಯಿಂದ 3.90 ಕೋಟಿ ರೂಪಾಯಿ ಹಣ, ಅಬಕಾರಿ ಇಲಾಖೆಯಿಂದ 11,66,14,868 ಕೋಟಿ ಮೌಲ್ಯದ ಮದ್ಯ ವಶ ಪಡಿಸಿಕೊಳ್ಳಲಾಗಿದೆ. ಸೆಕ್ಷನ್ 15 ಅಡಿಯಲ್ಲಿ 737 ಪ್ರಕರಣ ದಾಖಲು ದಾಖಲು ಮಾಡಿಕೊಳ್ಳಲಾಗಿದೆ. ಚುನಾವಣೆ ಘೋಷಣೆ ಬಳಿಕ ಒಟ್ಟಾರೆಯಾಗಿ 39,38,44,847 ಕೋಟಿ ಮೌಲ್ಯದ ಮದ್ಯ, ಡ್ರಗ್ಸ್, ಹಾಗೂ ಹಣ ವಶ ಪಡಿಸಿಕೊಂಡಿರುವುದಾಗಿ ರಾಜ್ಯ ಚುನಾವಣಾ ಆಯೋಗದಿಂದ ಮಾಹಿತಿ ನೀಡಿದೆ.