Delivery in Bus: ಗರ್ಭಿಣಿ ಪಾಲಿಗೆ ದೇವರಾದ ಮಹಿಳಾ ಕಂಡಕ್ಟರ್! ಸುಸೂತ್ರವಾಗಿ ಹೆರಿಗೆ ಮಾಡಿಸಿದ ಸಾಹಸಿ!

ಆಕೆ ಜಾಸ್ತಿ ಓದಿದವಳೇನೂ ಅಲ್ಲ. ಆಕೆ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಾ ಇದ್ದಳು. ಆದರೆ ಇಂದು ಆ ಮಹಿಳೆ ವೈದ್ಯರೊಬ್ಬರು ಮಾಡಬೇಕಾದ ಕೆಲಸ ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ!

First published:

 • 17

  Delivery in Bus: ಗರ್ಭಿಣಿ ಪಾಲಿಗೆ ದೇವರಾದ ಮಹಿಳಾ ಕಂಡಕ್ಟರ್! ಸುಸೂತ್ರವಾಗಿ ಹೆರಿಗೆ ಮಾಡಿಸಿದ ಸಾಹಸಿ!

  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಮಾರ್ಗಮಧ್ಯದಲ್ಲಿಯೇ ಹೆರಿಗೆ ನೋವು ಶುರುವಾಗಿದೆ. ಆಗ ಬಸ್ಸಿನ ಮಹಿಳಾ ನಿರ್ವಾಹಕಿಯು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಇದೀಗ ಮಗು ಮತ್ತು ಮಹಿಳೆ ಆರೋಗ್ಯವಾಗಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Delivery in Bus: ಗರ್ಭಿಣಿ ಪಾಲಿಗೆ ದೇವರಾದ ಮಹಿಳಾ ಕಂಡಕ್ಟರ್! ಸುಸೂತ್ರವಾಗಿ ಹೆರಿಗೆ ಮಾಡಿಸಿದ ಸಾಹಸಿ!

  ಚಿಕ್ಕಮಗಳೂರು ಘಟಕದ ವಾಹನ ಸಂಖ್ಯೆ ಕೆ.ಎ-18, ಎಫ್-0865ರಲ್ಲಿ ಬೆಂಗಳೂರು- ಚಿಕ್ಕಮಗಳೂರು ಮಾರ್ಗ ಕಾರ್ಯಾಚರಣೆಯ ವೇಳೆ ಉದಯಪುರ ಸಮೀಪವಿರುವ ಕೃಷಿ ಕಾಲೇಜು ಹತ್ತಿರ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಓರ್ವ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

  MORE
  GALLERIES

 • 37

  Delivery in Bus: ಗರ್ಭಿಣಿ ಪಾಲಿಗೆ ದೇವರಾದ ಮಹಿಳಾ ಕಂಡಕ್ಟರ್! ಸುಸೂತ್ರವಾಗಿ ಹೆರಿಗೆ ಮಾಡಿಸಿದ ಸಾಹಸಿ!

  ಆದರೆ ಇಲ್ಲಿ ಹತ್ತಿರ ಯಾವುದೇ ಆಸ್ಪತ್ರೆ ಇರಲಿಲ್ಲ. ಹೀಗಾಗಿ ಅಲ್ಲಿದ್ದವರೆಲ್ಲ ಏನು ಮಾಡಬೇಕೆಂದೇ ತೋಚದೇಸ ಕಂಗಾಲಾಗಿದ್ದಾರೆ. ಆಗ ಆಕೆಯ ಸಹಾಯಕ್ಕೆ ಧಾವಿಸಿ ಬಂದವರು ಬಸ್ಸಿನಲ್ಲಿದ್ದ ಮಹಿಳಾ ನಿರ್ವಾಹಕಿ ಎಸ್. ವಸಂತಮ್ಮ.

  MORE
  GALLERIES

 • 47

  Delivery in Bus: ಗರ್ಭಿಣಿ ಪಾಲಿಗೆ ದೇವರಾದ ಮಹಿಳಾ ಕಂಡಕ್ಟರ್! ಸುಸೂತ್ರವಾಗಿ ಹೆರಿಗೆ ಮಾಡಿಸಿದ ಸಾಹಸಿ!

  ಹಿಂದೆ ಮುಂದೆ ನೋಡದ ವಸಂತಮ್ಮ, ತಾವೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ವಾಹನವನ್ನು ನಿಲ್ಲಿಸಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಹಾಯ ಮಾಡಿದ್ದಾರೆ.

  MORE
  GALLERIES

 • 57

  Delivery in Bus: ಗರ್ಭಿಣಿ ಪಾಲಿಗೆ ದೇವರಾದ ಮಹಿಳಾ ಕಂಡಕ್ಟರ್! ಸುಸೂತ್ರವಾಗಿ ಹೆರಿಗೆ ಮಾಡಿಸಿದ ಸಾಹಸಿ!

  ಚಾಲಕಿ-ಕಂ-ನಿರ್ವಾಹಕಿಯಾದ ವಸಂತಮ್ಮ ಗರ್ಭಿಣಿಗೆ ಬಸ್ಸಿನಲ್ಲಿಯೇ ಹೆರಿಗೆಯನ್ನು ಮಾಡಿಸಿದ್ದಾರೆ. ನಂತರ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಶಾಂತಿಗ್ರಾಮ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆಯನ್ನು ದೊರಕಿಸಿರುತ್ತಾರೆ. ಈಗ ಮಹಿಳೆ ಮತ್ತು ಮಗು ಆರೋಗ್ಯವಾಗಿದ್ದಾರೆ.

  MORE
  GALLERIES

 • 67

  Delivery in Bus: ಗರ್ಭಿಣಿ ಪಾಲಿಗೆ ದೇವರಾದ ಮಹಿಳಾ ಕಂಡಕ್ಟರ್! ಸುಸೂತ್ರವಾಗಿ ಹೆರಿಗೆ ಮಾಡಿಸಿದ ಸಾಹಸಿ!

  ಇನ್ನು ಮಹಿಳೆಯು ಆರ್ಥಿಕವಾಗಿ ದುರ್ಬಲಳಾಗಿದ್ದ ಕಾರಣ ನಿಗಮದ ಚಾಲನಾ ಸಿಬ್ಬಂದಿ ಮಹಿಳೆಯ ತುರ್ತು ಖರ್ಚಿಗಾಗಿ ಎಲ್ಲಾ ಪ್ರಯಾಣಿಕರಿಂದ ಒಟ್ಟು 1500 ರೂಪಾಯಿಗಳನ್ನು ಸಂಗ್ರಹಿಸಿ ಮಹಿಳೆಗೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Delivery in Bus: ಗರ್ಭಿಣಿ ಪಾಲಿಗೆ ದೇವರಾದ ಮಹಿಳಾ ಕಂಡಕ್ಟರ್! ಸುಸೂತ್ರವಾಗಿ ಹೆರಿಗೆ ಮಾಡಿಸಿದ ಸಾಹಸಿ!

  ಸಕಾಲದಲ್ಲಿ ಸಹಾಯ ಮಾಡಿ ಮಹಿಳೆ ಮತ್ತು ಮಗುವಿನ ಪ್ರಾಣ ಉಳಿಸಿದ್ದ ವಸಂತಮ್ಮ. ಇದೀಗ ವಸಂತಮ್ಮನವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾರಿಗೆ ಇಲಾಖೆ, ಸಿಬ್ಬಂದಿ ಕೂಡ ಶ್ಲಾಘಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES