ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಪ್ರೊ. ದೊಡ್ಡರಂಗೇಗೌಡ ಹಾವೇರಿಗೆ ಬಂದಿದ್ದಾರೆ. ಈ ವೇಳೆ ಮಾತನಾಡಿದ ದೊಡ್ಡರಂಗೇಗೌಡರು, ಹಾವೇರಿ ಇದೊಂದು ತಪೋಭೂಮಿ. ಇದು ಕನಕದಾಸರು ನಡೆದಾಡಿದ ನೆಲ. ಎಮ್ಮೆ ಮೇಲೆ ಓಡಾಡಿ ಕಾದಂಬರಿ ಹಾಗೂ ಸಾಹಿತ್ಯ ಪ್ರಚಾರ ಮಾಡಿರುವ ಸಾಹಿತಿಗಳ ಭೂಮಿ ಇದು ಎಂದರು.
2/ 7
ಶರೀಫ್ ಮತ್ತು ಗೋವಿಂದಭಟ್ಟರ ಗದ್ದುಗೆ ದರ್ಶನ ಮಾಡಿದ್ದೇನೆ. ಜಾತ್ರೆ ಜಾತ್ರೆ ಎಂದು ಸಮ್ಮೇಳನವನ್ನ ಟೀಕೆ ಮಾಡುತ್ತಾರೆ. ಆದ್ರೆ ಇದು ಸಾಹಿತಿಗಳ ಸಮ್ಮಿಲನದ ಜಾತ್ರೆ ಎಂದು ತಿರುಗೇಟು ನೀಡಿದರು.
3/ 7
ಇಲ್ಲಿ ಕನ್ನಡ ಮುಖ್ಯ. ಕನ್ನಡ ನಮ್ಮೆಲ್ಲರಕ್ಕಿಂತ ದೊಡ್ಡದು. ನಾನು ಎಡಪಂಥಿಯನೂ ಅಲ್ಲ, ಬಲ ಪಂಥಿಯನೂ ಅಲ್ಲ. ನಾನು ಕನ್ನಡ ಪಂಥಿಯ. ಸಾಹಿತ್ಯ ಸಮ್ಮೆಳನದಲ್ಲಿ ರಾಜಕೀಯ ಮಾಡುವುದು ಬೇಡ. ಇದೊಂದು ಪವಿತ್ರವಾದ ಕನ್ನಡ ಕಾರ್ಯಕ್ರಮ ಅಂತ ಹೇಳಿದರು.
4/ 7
86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಧ್ವಜಾರೋಹಣ ಮಾಡಿದರು. ಸುಮಾರು 50-70 ಸಾವಿರ ಕನ್ನಡಾಭಿಮಾನಿಗಳು ಸಮ್ಮೇಳನ ವೀಕ್ಷಿಸಿಲು ವೇದಿಕೆ ಸಿದ್ಧ ಮಾಡಲಾಗಿದೆ.
5/ 7
ವೇದಿಕೆ ಮುಂಭಾಗ ಸುಮಾರು 25 ಎಕರೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಮಳಿಗೆಗಳನ್ನು ನಿರ್ಮಿಸಲಾಗಿದೆ. ಕನಕದಾಸರ ಹುಟ್ಟೂರು ಬಾಡ ಗ್ರಾಮದ ಕೋಟಿ ಶೈಲಿಯ ದ್ವಾರ ನಿರ್ಮಾಣಗೊಂಡಿದ್ರೆ, ಜರ್ಮನ್ ಟೆಕ್ನಾಲಜಿ ಬಳಸಿ ವೇದಿಕೆ ನಿರ್ಮಾಣ ಮಾಡಲಾಗಿದೆ.
6/ 7
ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ ಸಮ್ಮೆಳನ ಇದಾಗಿದೆ. ನಿನ್ನೆ ರಾತ್ರಿ ಸಮ್ಮೆಳನ ಅಧ್ಯಕ್ಷರು ನಗರಕ್ಕೆ ಆಗಮಿಸಿದ್ದಾರೆ. ಇವತ್ತಿನಿಂದ ನಡೆಯುವ ಸಮ್ಮೆಳನ ಕನ್ಬಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯ ಸಂದೇಶ ಈ ಸಮ್ಮೆಳನ ನೀಡಲಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
7/ 7
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ವಿಚಾರವನ್ನು ಅರ್ಥ ಗರ್ಭಿತವಾಗಿ ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ದೊಡ್ಡ ಕಾರ್ಯಕ್ರಮದಲ್ಲಿ ವ್ಯತ್ಯಾಸ ಇರುವುದು ಸಹಜ. ಇದನ್ನು ಚರ್ಚೆ ಮೂಲಕ ಬಗೆಹರಿಸಬೇಕು ಹೊರತುಪರ್ಯಾಯ ಸಮ್ಮೆಳನ ಮಾಡುವುದು ಒಳ್ಳೆಯ ಬೆಳಗಣಿಗೆ ಅಲ್ಲ ಎಂದು ಸಚಿವ ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.