Kannada Sahitya Sammelana: ಶುಕ್ರವಾರದಿಂದ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ
ಹಾವೇರಿ: ನಾಳೆಯಿಂದ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಜನವರಿ 6ರಿಂದ ಒಟ್ಟು ಮೂರು ದಿನ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇಡೀ ನಗರ ವಧುವಿನಂತೆ ಕಂಗೊಳಿಸುತ್ತಿದೆ.
ಜನವರಿ 6, 7 ಮತ್ತು 8ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅದ್ಧೂರಿಯಾಗಿ ಕನ್ನಡದ ಹಬ್ಬವನ್ನು ಆಚರಣೆ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
2/ 7
ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಹಾವೇರಿಯ ಹೊರವಲಯದ ಅಜ್ಜಯ್ಯ ಗುಡಿಯ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.
3/ 7
ಪ್ರಧಾನ ವೇದಿಕೆಯನ್ನು ಜರ್ಮನ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಪುಸ್ತಕ ಮಳಿಗೆ ಸೇರಿದಂತೆ ವಸ್ತು ಪ್ರದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
4/ 7
ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾಡಳಿಯ ಜಂಟಿಯಾಗಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ.
5/ 7
ಊಟದ ಮೆನು
ಸಾಹಿತ್ಯ ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಉತ್ತರ ಕರ್ನಾಟಕ ಶೈಲಿಯ ಅಡುಗೆ ಸುಮಾರು 4 ಸಾವಿರ ಬಾಣಸಿಗರಿಂದ ಸಿದ್ಧಪಡಿಸಲಾಗುತ್ತಿದೆ. ಮೂರು ದಿನದ ಸಾಹಿತ್ಯ ಸಮ್ಮೇಳನಕ್ಕೆ ನಾಲ್ಕರಿಂದ ಐದು ಲಕ್ಷ ಜನರು ಆಗಮಿಸುವ ನಿರೀಕ್ಷೆಗಳಿವೆ
6/ 7
ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಸಿರಾ (ಕೇಸರಿಬಾತ್) ಮತ್ತು ಬೆಲ್ಲದ ಟೀ . ಮಧ್ಯಾಹ್ನದ ಊಟಕ್ಕೆ ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯ, ಚಪಾತಿ, ವೈಟ್ ರೈಸ್, ಸಾಂಬಾರ್, ಉಪ್ಪಿನ ಕಾಯಿ, ಶೇಂಗಾ ಚಟ್ನಿ ಮತ್ತು ಮೊಸರನ್ನ
7/ 7
ರಾತ್ರಿ ಊಟಕ್ಕೆ ಹೆಸರು ಬೇಳೆ ಪಾಯಸ, ಪುಳಿಯೋಗರೆ, ವೈಟ್ ರೈಸ್, ಸಾಂಬಾರ್ ಮತ್ತು ಉಪ್ಪಿನಕಾಯಿ ನೀಡಲಾಗುವುದು. ಸಾಹಿತ್ಯಾಭಿಮಾನಿಗಳಿಗೆ ಮೂರು ದಿನವೂ ಬಗೆ ಬಗೆಯ ಊಟ ಸಿಗಲಿದೆ.