Rewards for Police Informer: ಕ್ರೈಮ್ ಬಗ್ಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿ, 5 ಲಕ್ಷ ರೂಪಾಯಿ ಬಹುಮಾನ ಪಡೆಯಿರಿ!
ಬೆಂಗಳೂರು ಸೇಫ್ ಅಲ್ಲ, ಕರ್ನಾಟಕದಲ್ಲಿ ಕ್ರೈಮ್ ನಿಲ್ಲೋದಿಲ್ಲ ಅಂತ ಅಸಹಾಯಕರಾಗಿದ್ದೀರಾ? ನಿಮ್ಮ ಎದುರೇ ಅಪರಾಧ ನಡೆದ್ರೂ ತಡೆಯೋಕೆ ಆಗ್ತಿಲ್ಲ ಅಂತ ಬೇಸರವಾಗಿದ್ದೀರಾ? ಹಾಗಿದ್ರೆ ಪೊಲೀಸರಿಗೆ ಅದ್ರ ಬಗ್ಗೆ ಮಾಹಿತಿ ಕೊಡಿ, ಅಪರಾಧಿಗಳನ್ನ ಅವ್ರು ನೋಡ್ಕೋತಾರೆ, ನಿಮಗೆ 5 ಲಕ್ಷ ಬಹುಮಾನ ಕೊಡ್ತಾರೆ!
ನಿಮ್ಮ ಮನೆಯ ಸುತ್ತ ಮುತ್ತ ಅಪರಾಧ, ಅನ್ಯಾಯಗಳು ನಡೆಯುತ್ತಿವೆಯೇ? ಕಣ್ಮುಂದೆ ನಡೆಯುತ್ತಿದ್ರೂ ಏನೂ ಮಾಡೋಕೆ ಆಗ್ತಿಲ್ಲ ಎಂಬ ಬೇಸರ ಇದೆಯಾ? ಹಾಗಿದ್ರೆ ಪೊಲೀಸರಿಗೆ ಒಂದು ಮಾಹಿತಿ ಕೊಡಿ. ಅಪರಾಧಿಗಳನ್ನ ಅವ್ರ ನೋಡಿಕೊಳ್ತಾರೆ, ನಿಮಗೆ 5 ಲಕ್ಷ ಬಹುಮಾನ ಕೂಡ ಕೊಡ್ತಾರೆ! (ಸಾಂದರ್ಭಿಕ ಚಿತ್ರ)
2/ 7
ಪೊಲೀಸರಿಗೆ ಅಪರಾಧ ಕೃತ್ಯದ ಬಗ್ಗೆ ಮಾಹಿತಿ ನೀಡುವವರಿಗೆ ಜಾಕ್ ಪಾಟ್ ಹೊಡೆಯಲಿದೆ. ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ನೀಡಿದರೆ ಮಾಹಿತಿದಾರರಿಗೆ ಸಿಗಲಿದೆ ಭಾರಿ ಮೊತ್ತದ ರಿವಾರ್ಡ್! (ಸಾಂದರ್ಭಿಕ ಚಿತ್ರ)
3/ 7
ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ , ಕಳ್ಳಸಾಗಾಣಿಕೆ , ಮಾದಕ ವಸ್ತು ಸಾಗಾಣಿಕೆ, ಆಯುಧ ಕಳ್ಳಸಾಗಾಣಿಕೆ ಸೇರಿದಂತೆ ಹಲವು ಸಮಾಜ ಘಾತುಕ ಚಟುವಟಿಕೆಗಳ ಮಾಹಿತಿ ನೀಡಿದರೆ ಭಾರಿ ಬಹುಮಾನ ನೀಡಲು ಸರ್ಕಾರ ನಿರ್ಧರಿಸಿದೆ. (ಸಾಂದರ್ಭಿಕ ಚಿತ್ರ)
4/ 7
ರಾಷ್ಟ್ರೀಯ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಸರ್ಕಾರ ಈ ಆದೇಶ ಮಾಡಿದೆ. ಈ ಪ್ರಕಾರ ಪೊಲೀಸರಿಗೆ ಮಾಹಿತಿ ನೀಡುವ ಖಾಸಗಿ ಮಾಹಿತಿದಾರರಿಗೆ ಒಟ್ಟೂ 5 ಲಕ್ಷ ಬಹುಮಾನ ಸಿಗಲಿದೆ. (ಸರ್ಕಾರದ ಆದೇಶ ಪ್ರತಿ)
5/ 7
ಪ್ರಕರಣದ ತೀವ್ರತೆಯ ಆಧಾರದ ಮೇರೆಗೆ 20 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೂ ಬಹುಮಾನ ನೀಡಬಹುದು ಅಂತ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಈ ಬಹುಮಾನ ಅನ್ವಯಿಸುವುದಿಲ್ಲ. (ಸರ್ಕಾರದ ಆದೇಶ ಪ್ರತಿ)
6/ 7
ಖಾಸಗಿ ವ್ಯಕ್ತಿಗಳಿಗೆ ಮಾತ್ರ ಈ ಮೊತ್ತದ ಬಹುಮಾನ ಸಿಗಲಿದೆ. ಈ ರೀತಿ ಬಹುಮಾನ ಹೆಚ್ಚಳ ಮಾಡಿದರೆ ಸಾರ್ವಜನಿಕರು ಹಾಗೂ ಮಾಹಿತಿದಾರರು ಉದ್ಘೋಷಿತ ಅಪರಾಧಿಗಳ ಬಗ್ಗೆ ಮಾಹಿತಿ ನೀಡಬಹುದು ಅಂತ ಹೇಳಲಾಗಿದೆ. ಹೀಗಾಗಿ ಐದು ಲಕ್ಷದವರೆಗೆ ಬಹುಮಾನವನ್ನ ಘೋಷಣೆ ಮಾಡಬಹುದು ಅಂತ ಸರ್ಕಾರ ಹೇಳಿದೆ. (ಸಾಂದರ್ಭಿಕ ಚಿತ್ರ)
7/ 7
ಈ ಹಿಂದೆ ಎನ್ಐಎ, ಸಿಬಿಐ ಸೇರಿದಂತೆ ಹಲವು ಕೇಂದ್ರ ಸರ್ಕಾರದ ಅಧಿನ ಸಂಸ್ಥೆಗಳು ಮಾತ್ರ ಭಾರಿ ಮೊತ್ತದ ಬಹುಮಾನ ಘೋಷಣೆ ಮಾಡಿತ್ತು. ಈಗ ರಾಜ್ಯ ಸರ್ಕಾರ ಕೂಡ ಮಾಹಿತಿದಾರರಿಗೆ ಬಹುಮಾನದ ಮೊತ್ತ ಏರಿಸಿ ಕಾನೂನು ಸುವ್ಯವಸ್ಥೆಗೆ ಒತ್ತು ಕೊಡುವ ಯತ್ನ ಮಾಡುತ್ತಿದೆ. (ಸಾಂದರ್ಭಿಕ ಚಿತ್ರ)