Sad News: ಪತಿ ಚಾಕೊಲೇಟ್ ತಂದು ಕೊಡಲಿಲ್ಲವೆಂದು ಮನನೊಂದ ಪತ್ನಿ ಆತ್ಮಹತ್ಯೆ!
ಬೆಂಗಳೂರು: ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿನ್ನೆ ಮುಂಬೈನಲ್ಲಿ ಬಾಲಕನೊಬ್ಬ ತಲೆಕೂದಲು ಚಿಕ್ಕದಾಗಿ ಕತ್ತರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಇಂತಹದ್ದೇ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು.. ಗೃಹಿಣಿಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
2/ 7
ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಆತ್ಮಹತ್ಯೆ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ನಂದಿನಿ (30) ಎಂದು ಗುರುತಿಸಲಾಗಿದೆ.
3/ 7
ನಂದಿನಿ ತನ್ನ ಗಂಡ ಕೆಲಸಕ್ಕೆ ಹೋಗುವ ಮುನ್ನ ತನಗೆ ಚಾಕಲೇಟ್ ತಂದು ಕೊಡುವಂತೆ ಹೇಳಿದ್ದಳು. ಆದರೆ ಪತಿ ಮಧ್ಯಾಹ್ನವಾದರೂ ಚಾಕಲೇಟ್ ತಂದು ಕೊಡದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
4/ 7
ಸಂಜೆ ಕೆಲಸ ಮುಗಿಸಿ ಗಂಡ ತನ್ನ ಹೆಂಡತಿ ನಂದಿನಿಗೆ ಫೋನ್ ಮಾಡಿದ್ದಾರೆ. ಆದರೆ ಆಕೆ ಕರೆ ಸ್ವೀಕಾರ ಮಾಡಿಲ್ಲ. ಹೀಗಾಗಿ ಮನೆಗೆ ಬಂದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
5/ 7
ತನ್ನ ಹೆಂಡತಿಯ ಶವವನ್ನು ನೋಡಿದ ಗಂಡ ಆಘಾತಕ್ಕೆ ಒಳಗಾಗಿದ್ದು, ಆಕೆಯನ್ನು ಎಬ್ಬಿಸುವ ಪ್ರಯತ್ನ ಮಾಡಿದರೂ ಆಕೆ ಸ್ಪಂದಿಸದೇ ಇದ್ದಾಗ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
6/ 7
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವೈದ್ಯಕೀಯ ವರದಿ ಸಿಕ್ಕ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ರವಾನೆ ಮಾಡಲಿದ್ದಾರೆ.
7/ 7
ಘಟನೆ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
First published:
17