ಬೀದಿನಾಯಿಗಳ ಹಾವಳಿ ಇದೇ ಮೊದಲೇನಲ್ಲಾ. ಪದೇ ಪದೇ ಮನೆಯ ಮುಂದೆ ಆಟವಾಡುತ್ತಿರುವ ಮಕ್ಕಳು, ಮುಂಜಾನೆ, ಸಂಜೆ ವೇಳೆ ವಾಕಿಂಗ್ ಹೋಗುತ್ತಿರುವವರ ಮೇಲೂ ದಾಳಿ ಮಾಡಿವೆ. ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಿ ಎಂದು ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಯಾರೂ ಕೂಡ ಇತ್ತ ಗಮನಹರಿಸಿಲ್ಲ. ಇವರ ಬೇಜವಾಬ್ದಾರಿಯಿಂದಲೇ ಇಂತಹ ಘಟನೆಗಳು ಮರುಕಳುಸುತ್ತಿವೆ ಎಂದು ಅಧಿಕಾರಿಗಳಿಗೆ ನಗರವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಹಾಸನ ನಗರವೊಂದರಲ್ಲೇ ಸುಮಾರು ಮೂರರಿಂದ ನಾಲ್ಕು ಸಾವಿರ ನಾಯಿಗಳಿವೆ. ಕೋಳಿ, ಮಾಂಸ, ನಾನ್ ವೆಜ್ ಹೋಟೆಲ್ ನವರು ಜನನಿಬಿಡ ಪ್ರದೇಶದಲ್ಲೇ ತ್ಯಾಜ್ಯವನ್ನು ಬಿಸಾಡುತ್ತಿದ್ದಾರೆ. ಇದರ ಜೊತೆಗೆ ಜನರು ಕೂಡ ಕಸ ಇತ್ಯಾದಿ ಪದಾರ್ಥಗಳನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿರುವುದರಿಂದ ನಾಯಿಗಳ ಉಪಟಳ ಹೆಚ್ಚಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಾಯಿಗಳ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಲೆ ಇದೆ.