Mangaluru:  ಅನ್ಯ ಧರ್ಮದವರಿಂದ ಹಲ್ಲೆ ಆಯ್ತೆಂದು ಸುಳ್ಳು ಹೇಳಿದ 13ರ ಬಾಲಕ

ಕಳೆದ ಕೆಲ ತಿಂಗಳಿನಿಂದ ದೇಶದಲ್ಲಿ ಕೋಮು ಗಲಭೆಗಳು ನಡೆಯುತ್ತಲಿವೆ. ಹಾಗಾಗಿ ಎಲ್ಲಿ ಏನಾಗುತ್ತೆ ಅನ್ನೋ ಆತಂಕ ದೇಶವಾಸಿಗಳಲ್ಲಿದೆ. ಮತ್ತೊಂದು ವರ್ಗದ ಜನರು ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತಿದ್ದಾರೆ.

First published:

  • 19

    Mangaluru:  ಅನ್ಯ ಧರ್ಮದವರಿಂದ ಹಲ್ಲೆ ಆಯ್ತೆಂದು ಸುಳ್ಳು ಹೇಳಿದ 13ರ ಬಾಲಕ

    ಸಣ್ಣ ತಪ್ಪು ಮಾಹಿತಿಗಳು ದೊಡ್ಡ ಮಟ್ಟದ ಅಶಾಂತಿಗೆ ಕಾರಣವಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಇದೀಗ 13ರ ಬಾಲಕನೋರ್ವ ಹೇಳಿದ ಒಂದು ಸುಳ್ಳು ಮಂಗಳೂರಿನ ಸುರತ್ಕಲ್ ನಲ್ಲಿ ಉದ್ವಿಗ್ನತೆಯನ್ನುಂಟು ಮಾಡಿತ್ತು. ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Mangaluru:  ಅನ್ಯ ಧರ್ಮದವರಿಂದ ಹಲ್ಲೆ ಆಯ್ತೆಂದು ಸುಳ್ಳು ಹೇಳಿದ 13ರ ಬಾಲಕ

    ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಿವಾಸಿಯಾಗಿರುವ 13 ವರ್ಷದ ಬಾಲಕ ಹೇಳಿದ ಸುಳ್ಳು ಉದ್ವಿಗ್ನತೆಗೆ ಕಾರಣವಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Mangaluru:  ಅನ್ಯ ಧರ್ಮದವರಿಂದ ಹಲ್ಲೆ ಆಯ್ತೆಂದು ಸುಳ್ಳು ಹೇಳಿದ 13ರ ಬಾಲಕ

    ಸೋಮವಾರ ಮದರಸಾದಿಂದ ಹಿಂದಿರುಗುತ್ತಿದ್ದ ವೇಳೆ ಅನ್ಯಧರ್ಮದ ಇಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು 13 ವರ್ಷದ ಬಾಲಕ ಹೇಳಿದ್ದನು. ಆದರೆ ಪೊಲೀಸರ ವಿಚಾರಣೆ ವೇಳೆ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Mangaluru:  ಅನ್ಯ ಧರ್ಮದವರಿಂದ ಹಲ್ಲೆ ಆಯ್ತೆಂದು ಸುಳ್ಳು ಹೇಳಿದ 13ರ ಬಾಲಕ

    ಶಾಲೆ ಮತ್ತು ಮನೆಯಲ್ಲಿ ಎಲ್ಲರನ್ನು ತನ್ನತ್ತ ಆಕರ್ಷಿತರನ್ನಾಗಿ ಮಾಡಿಕೊಳ್ಳಲು ಬಾಲಕ ಸುಳ್ಳು ಹೇಳಿರೋದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Mangaluru:  ಅನ್ಯ ಧರ್ಮದವರಿಂದ ಹಲ್ಲೆ ಆಯ್ತೆಂದು ಸುಳ್ಳು ಹೇಳಿದ 13ರ ಬಾಲಕ

    ಮದರಸಾದಿಂದ ಮನೆಗೆ ಹಿಂದಿರುತ್ತಿರುವ ವೇಳೆ ಬಾಲಕ ಪೆನ್ ಬಳಸಿ ತನ್ನ ಅಂಗಿಯನ್ನ ತಾನೇ ಹರಿದುಕೊಂಡಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Mangaluru:  ಅನ್ಯ ಧರ್ಮದವರಿಂದ ಹಲ್ಲೆ ಆಯ್ತೆಂದು ಸುಳ್ಳು ಹೇಳಿದ 13ರ ಬಾಲಕ

    ಆರಂಭದಲ್ಲಿ ಪೊಲೀಸರು ಬಾಲಕನ ಹೇಳಿಕೆ ದಾಖಲಿಸಿದ್ದರು. ಆದ್ರೆ ಆತನ ಹೇಳಿಕೆಗೂ ಘಟನೆ ನಡೆದ ಎನ್ನಲಾದ ಸ್ಥಳದ ಸಿಸಿಟಿವಿ ದೃಶ್ಯಗಳು ಹೋಲಿಕೆ ಇರಲಿಲ್ಲ.

    MORE
    GALLERIES

  • 79

    Mangaluru:  ಅನ್ಯ ಧರ್ಮದವರಿಂದ ಹಲ್ಲೆ ಆಯ್ತೆಂದು ಸುಳ್ಳು ಹೇಳಿದ 13ರ ಬಾಲಕ

    ಬಾಲಕ ಬಡ ಕುಟುಂಬದವನಾಗಿದ್ದು, ಶಾಲೆಯಲ್ಲಿ ಸಹ ಹಿಂದುಳಿದಿದ್ದಾನೆ. ಈ ಕಾರಣದಿಂದ ಬಾಲಕ ಅವಮಾನಿತನಾಗಿದ್ದನು. ಇನ್ನೂ ಈ ಸಂಬಂಧ ಪೊಲೀಸರು ಬಾಲಕ ಮತ್ತು ಆತನ ಪೋಷಕರನ್ನು ಕರೆಸಿ ಈ ವಿಷಯದ ಕುರಿತಾಗಿ ಚರ್ಚೆ ನಡೆಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Mangaluru:  ಅನ್ಯ ಧರ್ಮದವರಿಂದ ಹಲ್ಲೆ ಆಯ್ತೆಂದು ಸುಳ್ಳು ಹೇಳಿದ 13ರ ಬಾಲಕ

    ಗುರುವಾರ ವಿಚಾರಣೆಗೆ ಕರೆಸಿದಾಗ ಪೊಲೀಸರು ಮತ್ತೆ ಮಕ್ಕಳ ಕಲ್ಯಾಣ ಸಮಿತಿ ಹಾಗೂ ವೈದ್ಯರ ಮುಂದೆ ಬಾಲಕನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Mangaluru:  ಅನ್ಯ ಧರ್ಮದವರಿಂದ ಹಲ್ಲೆ ಆಯ್ತೆಂದು ಸುಳ್ಳು ಹೇಳಿದ 13ರ ಬಾಲಕ

    ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ಪಾಲಕರು ಹಾಗೂ ಸಮಾಜದ ಮುಖಂಡರನ್ನು ಕರೆಸಿ ಸಮಸ್ಯೆ ಕುರಿತು ಚರ್ಚಿಸಿದ್ದಾರೆ. ಈ ವಿಷಯ ಸುರತ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES