ಮಂಗಳವಾರ ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ, ಕರ್ನಾಟಕದಲ್ಲಿ ನಡೆದ ರಾಜಕೀಯ ಬೆಳವಣಿಗೆಳೇ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ ಎಂದರು. ಇಲ್ಲಿಯಂತೆ ಶಿವಸೇನೆಯ ಶಾಸಕರನ್ನು ಖರೀದಿ ಮಾಡಲಾಗಿದೆ ಎಂದು ಆರೋಪಿಸಿದರು.
2/ 7
ನಮ್ಮ ರಾಜ್ಯದ ಕೆಲ ಶಾಸಕರಿಗೆ 30 ಕೋಟಿ ರೂ.ಗೆ ಒಂದು ಮಂಚ ನೀಡಿದ್ದರು. ಆ ಮಂಚದ ಸಿಡಿಗಳಿವೆ. ಆದ್ರೆ ಅವರೆಲ್ಲ ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡು ಬಂದಿದ್ದಾರೆ.
3/ 7
ಈ ಹಿಂದೆ ಸಭಾಪತಿಗಳಿಗೆ ಸಿಡಿಯಲ್ಲಿ ಏನಿದೆ ನೋಡಿ ಸರ್ ಅಂತ ಹೇಳಿದ್ದೆ. ತಡೆಯಾಜ್ಞೆ ನೀಡಿದ ನ್ಯಾಯಾಧೀಶರಾದ್ರೂ ಆ ಸಿಡಿ ನೋಡಬೇಕಲ್ವಾ? ಎಂದರು.
4/ 7
ಸದಾನಂದಗೌಡರು ಈ ಸಂಬಂಧ ಸ್ಟೇ ತೆಗೆದುಕೊಂಡಿದ್ದಾರೆ. ಇದರ ಜೊತೆಗೆ ರಾಜ್ಯದಮ 12 ಸಚಿವರು ಸ್ಟೇ ತಂದಿದ್ದಾರೆ. ಆದ್ರೆ ಚುನಾವಣೆ ವೇಳೆಗೆ ಸಿಡಿಗಳು ಹೊರ ಬರಲಿವೆ ಎಂದು ಬಾಂಬ್ ಸಿಡಿಸಿದರು.
5/ 7
ಬರುತ್ತೆ ಸಿಡಿ ಬರುತ್ತೆ. ವಿಧಾನಸಭೆ ಚುನಾವಣೆಯಲ್ಲಿ 17 ರಿಂದ 18 ಸಿಡಿಗಳು ಸ್ಫೋಟಗೊಳ್ಳಲಿವೆ. ಇದರಲ್ಲಿ ಸಚಿವ ಗೋಪಾಲಯ್ಯ ಯಾವುದೇ ಸ್ಟೇ ತೆಗೆದುಕೊಂಡಿಲ್ಲ. ಅವರ ಹೈಟ್, ವೇಟ್ ಗೇ ಏನೂ ಮಾಡೋಕೆ ಅಗಲ್ಲ ಎಂದರು.
6/ 7
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಹೊರ ಬಂದ ಬೆನ್ನಲ್ಲೇ ಸಂಪುಟದ ಸಚಿವರಾದ ಬಿ.ಸಿ.ಪಾಟೀಲ್. ಶಿವರಾಂ ಹೆಬ್ಬಾರ್, ನಾರಾಯಣಗೌಡ, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಸುಧಾಕರ್ ಸ್ಟೇ ತಂದಿದ್ದಾರೆ.
7/ 7
ಇತ್ತ ಸಿಡಿ ಹೊರ ಬಂದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣದಲ್ಲಿ SIT ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿತ್ತು. ಆದ್ರೆ ಇದನ್ನು ಪ್ರಶ್ನಿಸಿ ಸಂತ್ರಸ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.