ಇದರ ಬಳಿಕ ಮತ್ತೊಮ್ಮೆ ವಿರಾಟ್ ಅಬ್ಬರ ಶುರುವಾಗಿದೆ. ಅದೂ ಟಿ20 ವಿಶ್ವಕಪ್ನಲ್ಲಿಯೂ ಮುಂದುವರೆಸಿದರು. ಅದರಂತೆ ಕಿಂಗ್ ಕೊಹ್ಲಿ ಪಾಕ್ ಎದುರು ಭರ್ಜರಿ ಬ್ಯಾಟಿಂಗ್ ಮಾಡಿದರು. ಸಂಕಷ್ಟದ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ 100 ರನ್ ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ವಿರಾಟ್ ಕೊಹ್ಲಿ 53 ಬೌಲ್ಗೆ 4 ಸಿಕ್ಸ್ 6 ಬೌಂಡರಿ ಮೂಲಕ 82 ರನ್ ಗಳಿಸಿ ಔಟಾಗದೇ ಉಳಿದರು.
ಟಿ20 ವಿಶ್ವಕಪ್ನಲ್ಲಿ ನೀಡಿದ ಭರ್ಜರಿ ಪ್ರದರ್ಶನದಿಂದ ಐಸಿಸಿ ಸಹ ಕೊಹ್ಲಿಗೆ ಗೌರವ ಸಲ್ಲಿಸಿತು. ನವೆಂಬರ್ 7ರಂದು ಐಸಿಸಿ ಅಕ್ಟೋಬರ್ ತಿಂಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಕೊಹ್ಲಿಗೆ ಗೌರವ ನೀಡಿದೆ. ಈ ಮೂಲಕ ಅನೇಕ ಏರಿಳಿತದ ವರ್ಷವನ್ನು ಕೊಹ್ಲಿ ಈ ವರ್ಷ ತಮ್ಮ ವೃತ್ತಿ ಜೀನವದಲ್ಲಿ ಕಂಡಿದ್ದಾರೆ. ನಾಳೆಯಿಂದ ಆರಂಭವಾಗುವ ವರ್ಷದ ಅಂತಿಮ ಸರಣಿಯಾದ ಬಾಂಗ್ಲಾದೇಶ ಸರಣಿಯಲ್ಲಿಯೂ ಅಬ್ಬರಿಸುವ ಸೂಚನೆ ನೀಡಿದ್ದಾರೆ.