ರಾಹುಲ್ ಚಹಾರ್: 2021ರ ಟಿ20 ವಿಶ್ವಕಪ್ನಲ್ಲಿ ರಾಹುಲ್ ಚಹಾರ್ ಭಾರತದ ಪ್ರಮುಖ ಲೆಗ್ ಸ್ಪಿನ್ನರ್ ಆಗಿದ್ದರು. ಆದರೆ 2022ರಲ್ಲಿ ಭಾರತ ಪರ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಾಗಲಿಲ್ಲ. ಚಹರ್ ಒಂದು ಪಂದ್ಯದಲ್ಲಿ ಹಾಗೂ ಮೂರು ODI ವಿಕೆಟ್ಗಳನ್ನು ಮತ್ತು ಆರು ಪಂದ್ಯಗಳಲ್ಲಿ ಏಳು T20I ವಿಕೆಟ್ಗಳನ್ನು ಪಡೆದರು. ಆದರೆ ರಾಹುಲ್ ಚಹಾರ್ ಆಯ್ಕೆಗಾರರ ಗಮನ ಸೆಳೆಯಲು ಸಾಧ್ಯವಾಗಲಿಲ್ಲ.
T.ನಟರಾಜನ್: ಭಾರತವು 2022ರಲ್ಲಿ ಅನೇಕ ವೇಗದ ಬೌಲರ್ಗಳನ್ನು ಪ್ರಯತ್ನಿಸಿದೆ. ಆದರೆ ಆಯ್ಕೆಗಾರರು ಎಡಗೈ ವೇಗಿ ಟಿ ನಟರಾಜನ್ಗೆ ಒಂದೇ ಒಂದು ಅವಕಾಶ ನೀಡಲಿಲ್ಲ. ಎಡಗೈ ವೇಗಿ 2021ರಲ್ಲಿ ಟೆಸ್ಟ್ಗೆ ಪಾದಾರ್ಪಣೆ ಮಾಡಿದರು. ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಸ್ಮರಣೀಯ ಜಯದಲ್ಲಿ ಮೂರು ವಿಕೆಟ್ಗಳನ್ನು ಪಡೆದರು. ನಟರಾಜನ್ ಅವರು ODI ಮತ್ತು T20 ಗಳಲ್ಲಿ ಉತ್ತಮ ಅಂಕಿಅಂಶಗಳನ್ನು ದಾಖಲಿಸಿದ್ದಾರೆ. ಆದರೆ ಫಿಟ್ನೆಸ್ ಸಮಸ್ಯೆಯಿಂದಾಗಿ ಆಯ್ಕೆಗಾರರು ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಿಲ್ಲ.
ವೆಂಕಟೇಶ್ ಅಯ್ಯರ್: ಹಾರ್ದಿಕ್ ಪಾಂಡ್ಯ 2021ರ ಕೊನೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ವಿರಾಮ ಪಡೆದಿದ್ದರು. ಇದರಿಂದ ಟೀಂ ಇಂಢಿಯಾದಲ್ಲಿ ವೆಂಕಟೇಶ್ ಅಯ್ಯರ್ ಸ್ಥಾಣ ಪಡೆದರು. ಅಯ್ಯರ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಮ್ಮ ಚೊಚ್ಚಲ ODI ಪಂದ್ಯವನ್ನು ಮಾಡಿದರು. ಈ ವರ್ಷ 6 ಟಿ20 ಪಂದ್ಯಗಳನ್ನು ಆಡಿರುವ ಅಯ್ಯರ್ 179.63 ಸ್ಟ್ರೈಕ್ ರೇಟ್ನಲ್ಲಿ 97 ರನ್ ಗಳಿಸಿದ್ದರು. ಅಚ್ಚರಿಯ ಸಂಗತಿಯೆಂದರೆ, ಅಯ್ಯರ್ಗೆ ಟಿ20 ಆಡುವ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅವರ ಕೊನೆಯ T20I ಪಂದ್ಯ ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧವಾಗಿತ್ತು. ಐಪಿಎಲ್ 2022 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅಯ್ಯರ್ ಪ್ರಭಾವ ಬೀರಿದರು. ಈ ಕ್ರಮದಲ್ಲಿ ಅವರು ರಾಷ್ಟ್ರೀಯ ತಂಡವನ್ನು ಪ್ರವೇಶಿಸಿದರು. ಆದರೆ ಹಾರ್ದಿಕ್ ಪಾಂಡ್ಯ ಅದ್ಭುತ ಪುನರಾಗಮನದೊಂದಿಗೆ ವೆಂಕಟೇಶ್ ಅಯ್ಯರ್ ಅವಕಾಶಗಳು ಕ್ಷೀಣಿಸಿದವು.