ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಭಾರತೀಯ ಮೂಲದ ವಿನಿ ರಾಮನ್ ಅವರನ್ನು ವಿವಾಹವಾದರು. 34 ವರ್ಷದ ಮ್ಯಾಕ್ಸ್ವೆಲ್ ಭಾರತೀಯ ಸಂಪ್ರದಾಯಗಳ ಪ್ರಕಾರ ಮಾರ್ಚ್ 2022ರಲ್ಲಿ ವಿನ್ನಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮ್ಯಾಕ್ಸಿ ವಿನ್ನಿಯನ್ನು ಮಾರ್ಚ್ 18ರಂದು ಕ್ರಿಶ್ಚಿಯನ್ ಸಮಾರಂಭದಲ್ಲಿ ವಿವಾಹವಾದರು. ಆ ನಂತರ ಭಾರತಕ್ಕೆ ಬಂದು ತಮಿಳು ಸಂಪ್ರದಾಯದ ಪ್ರಕಾರ ವಿವಾಹವಾದರು.
ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಬುಲ್ಬುಲ್ ಸಹಾ ಅವರನ್ನು ವಿವಾಹವಾಗಿದ್ದಾರೆ. ಮೇ 2 ರಂದು, ಅವರು ತಮ್ಮ 28 ವರ್ಷ ಕಿರಿಯರಾದ ಬುಲ್ಬುಲ್ ಸಹಾ ಅವರನ್ನು ವಿವಾಹವಾದರು. ಅರುಣ್ ಗೆ ಇದು ಎರಡನೇ ಮದುವೆ. ಅವರು ಕೋಲ್ಕತ್ತಾದಲ್ಲಿ ವಿವಾಹವಾದರು. 66 ವರ್ಷದ ಅರುಣ್ ಲಾಲ್ ಮತ್ತು ಬುಲ್ಬುಲ್ ಅವರ ವಿವಾಹವು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಇವರ ಮದುವೆಯಲ್ಲಿ ಹಲವು ಮಾಜಿ ಕ್ರಿಕೆಟಿಗರೂ ಪಾಲ್ಗೊಂಡಿದ್ದರು.