ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಭರವಸೆ ಜೀವಂತವಾಗಿದೆ. ಸದ್ಯ 14 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿ ಮುಂದುವರಿದಿದೆ. ರಾಜಸ್ಥಾನವು ಪ್ಲೇಆಫ್ ತಲುಪಬೇಕಾದರೆ, ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳು ತಮ್ಮ ಅಂತಿಮ ಪಂದ್ಯಗಳಲ್ಲಿ ಭಾರಿ ಅಂತರದಿಂದ ಸೋಲನುಭವಿಸಬೇಕಾಗುತ್ತದೆ. ಕೆಕೆಆರ್ ಗೆದ್ದರೂ ಅಲ್ಪ ಅಂತರದಲ್ಲಿ ಗೆಲ್ಲಬೇಕು.