WTC Final 2023: ಲಾರ್ಡ್ ಶಾರ್ದೂಲ್​​ ಆಟಕ್ಕೆ ಇಬ್ಬರು ದಿಗ್ಗಜರ ದಾಖಲೆ ಉಡೀಸ್​! ಬ್ರಾಡ್ಮನ್-ಬಾರ್ಡರ್​ ರೆಕಾರ್ಡ್​ ಪೀಸ್​ ಪೀಸ್​

Shardul Thakur Fifty: ಈ ಭರ್ಜರಿ ಬ್ಯಾಟಿಂಗ್​ ಮೂಲಕ ಶಾರ್ದೂಲ್ ಠಾಕೂರ್ ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ಡಾನ್ ಬ್ರಾಡ್ಮನ್ ಮತ್ತು ಆಸೀಸ್​ ಮಾಜಿ ನಾಯಕ ಅಲನ್ ಬಾರ್ಡರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

First published:

  • 17

    WTC Final 2023: ಲಾರ್ಡ್ ಶಾರ್ದೂಲ್​​ ಆಟಕ್ಕೆ ಇಬ್ಬರು ದಿಗ್ಗಜರ ದಾಖಲೆ ಉಡೀಸ್​! ಬ್ರಾಡ್ಮನ್-ಬಾರ್ಡರ್​ ರೆಕಾರ್ಡ್​ ಪೀಸ್​ ಪೀಸ್​

    ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರ ಬ್ಯಾಟಿಂಗ್ ದಿನದಿಂದ ದಿನಕ್ಕೆ ಉತ್ತಮವಾಗುತ್ತಿದೆ. ಅದರಲ್ಲೂ ಟೆಸ್ಟ್ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಮಾಡುತ್ತಿರುವ ರೀತಿ ಎಲ್ಲೆಡೆ ಚರ್ಚೆಯಾಗುತ್ತಿದೆ. ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಶಾರ್ದೂಲ್ ತಮ್ಮ ಬ್ಯಾಟಿಂಗ್‌ ಉತ್ತಮವಾಗಿ ಆಡಿದರು.

    MORE
    GALLERIES

  • 27

    WTC Final 2023: ಲಾರ್ಡ್ ಶಾರ್ದೂಲ್​​ ಆಟಕ್ಕೆ ಇಬ್ಬರು ದಿಗ್ಗಜರ ದಾಖಲೆ ಉಡೀಸ್​! ಬ್ರಾಡ್ಮನ್-ಬಾರ್ಡರ್​ ರೆಕಾರ್ಡ್​ ಪೀಸ್​ ಪೀಸ್​

    ಕಷ್ಟದ ಸಮಯದಲ್ಲಿ ಶಾರ್ದೂಲ್ ಅವರ ಹೋರಾಟದ ಅರ್ಧಶತಕವು ಭಾರತವನ್ನು ಫಾಲೋ-ಆನ್‌ನಿಂದ ರಕ್ಷಿಸಿತು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ 469 ರನ್‌ಗಳಿಗೆ ಉತ್ತರವಾಗಿ ಭಾರತ 296 ರನ್ ಗಳಿಸಿತು. ಕಾಂಗರೂಗಳು ಮೊದಲ ಇನಿಂಗ್ಸ್‌ನಲ್ಲಿ 173 ರನ್‌ಗಳ ಮುನ್ನಡೆ ಸಾಧಿಸಿದ್ದಾರೆ.

    MORE
    GALLERIES

  • 37

    WTC Final 2023: ಲಾರ್ಡ್ ಶಾರ್ದೂಲ್​​ ಆಟಕ್ಕೆ ಇಬ್ಬರು ದಿಗ್ಗಜರ ದಾಖಲೆ ಉಡೀಸ್​! ಬ್ರಾಡ್ಮನ್-ಬಾರ್ಡರ್​ ರೆಕಾರ್ಡ್​ ಪೀಸ್​ ಪೀಸ್​

    ಶಾರ್ದೂಲ್ ಠಾಕೂರ್ 108 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆ ಅವರು 6 ಬೌಂಡರಿಗಳನ್ನು ಬಾರಿಸಿದರು. 51 ರನ್ ಗಳಿಸಿ ಔಟಾದರು. ಶಾರ್ದೂಲ್ ಅವರ ಟೆಸ್ಟ್ ವೃತ್ತಿ ಬದುಕಿನ ನಾಲ್ಕನೇ ಅರ್ಧಶತಕ ಇದಾಗಿದೆ. ವೇಗದ ಬೌಲಿಂಗ್ ಆಲ್ ರೌಂಡರ್ ಶಾರ್ದೂಲ್ ಭಾರತ ಪರ ಈ ಹಿಂದೆ ಹಲವು ಬಾರಿ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ.

    MORE
    GALLERIES

  • 47

    WTC Final 2023: ಲಾರ್ಡ್ ಶಾರ್ದೂಲ್​​ ಆಟಕ್ಕೆ ಇಬ್ಬರು ದಿಗ್ಗಜರ ದಾಖಲೆ ಉಡೀಸ್​! ಬ್ರಾಡ್ಮನ್-ಬಾರ್ಡರ್​ ರೆಕಾರ್ಡ್​ ಪೀಸ್​ ಪೀಸ್​

    ಲಾರ್ಡ್ ಶಾರ್ದೂಲ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಈ ಆಲ್ ರೌಂಡರ್ ಅಜಿಂಕ್ಯ ರಹಾನೆ ಜೊತೆಗೂಡಿ ಶತಕದ ಜೊತೆಯಾಟವನ್ನು ರೂಪಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಾಳ್ಮೆಯ ಬ್ಯಾಟಿಂಗ್‌ನಲ್ಲಿ ಕಾಂಗರೂ ಬೌಲರ್‌ಗಳ ಬೆವರಿಳಿಸಿದರು.

    MORE
    GALLERIES

  • 57

    WTC Final 2023: ಲಾರ್ಡ್ ಶಾರ್ದೂಲ್​​ ಆಟಕ್ಕೆ ಇಬ್ಬರು ದಿಗ್ಗಜರ ದಾಖಲೆ ಉಡೀಸ್​! ಬ್ರಾಡ್ಮನ್-ಬಾರ್ಡರ್​ ರೆಕಾರ್ಡ್​ ಪೀಸ್​ ಪೀಸ್​

    ಶಾರ್ದೂಲ್ ಠಾಕೂರ್ ಮತ್ತು ಅಜಿಂಕ್ಯ ರಹಾನೆ 09 ರನ್ ಜೊತೆಯಾಟ ನಡೆಸಿದರು. ಈ ಅವಧಿಯಲ್ಲಿ ಇಬ್ಬರೂ 145 ಎಸೆತಗಳನ್ನು ಎದುರಿಸಿದರು. ರಹಾನೆ 129 ಎಸೆತಗಳಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡ 89 ರನ್ ಗಳಿಸಿದರು.

    MORE
    GALLERIES

  • 67

    WTC Final 2023: ಲಾರ್ಡ್ ಶಾರ್ದೂಲ್​​ ಆಟಕ್ಕೆ ಇಬ್ಬರು ದಿಗ್ಗಜರ ದಾಖಲೆ ಉಡೀಸ್​! ಬ್ರಾಡ್ಮನ್-ಬಾರ್ಡರ್​ ರೆಕಾರ್ಡ್​ ಪೀಸ್​ ಪೀಸ್​

    ಶಾರ್ದೂಲ್ ಠಾಕೂರ್ ಈ ಹಿಂದೆ 2021 ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲೂ ಕಠಿಣ ಪರಿಸ್ಥಿತಿಯಲ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಶಾರ್ದೂಲ್ ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯದಲ್ಲಿ 115 ಎಸೆತಗಳಲ್ಲಿ 67 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

    MORE
    GALLERIES

  • 77

    WTC Final 2023: ಲಾರ್ಡ್ ಶಾರ್ದೂಲ್​​ ಆಟಕ್ಕೆ ಇಬ್ಬರು ದಿಗ್ಗಜರ ದಾಖಲೆ ಉಡೀಸ್​! ಬ್ರಾಡ್ಮನ್-ಬಾರ್ಡರ್​ ರೆಕಾರ್ಡ್​ ಪೀಸ್​ ಪೀಸ್​

    ಈ ಭರ್ಜರಿ ಬ್ಯಾಟಿಂಗ್​ ಮೂಲಕ ಶಾರ್ದೂಲ್ ಠಾಕೂರ್ ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ಡಾನ್ ಬ್ರಾಡ್ಮನ್ ಮತ್ತು ಆಸೀಸ್​ ಮಾಜಿ ನಾಯಕ ಅಲನ್ ಬಾರ್ಡರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಆಟಗಾರರಂತೆ, ಶಾರ್ದೂಲ್ ಓವಲ್‌ನಲ್ಲಿ 3 ಮೂರು ಅರ್ಧಶತಕ ಸಿಡಿಸಿದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡರು.

    MORE
    GALLERIES