ಇದುವರೆಗೆ ಆಸ್ಟ್ರೇಲಿಯ ವಿರುದ್ಧದ ಈ ಸರಣಿಯಲ್ಲಿ ರವೀಂದ್ರ ಜಡೇಜಾ 3 ಬಾರಿ ನೋ ಬಾಲ್‌ನಿಂದ ಪ್ರಮುಖ ವಿಕೆಟ್ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದರು. ಮೊದಲ ಪಂದ್ಯದಲ್ಲಿ, ಅವರು ಸ್ಟೀವ್ ಸ್ಮಿತ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು ಆದರೆ ಅದು ನೋ ಬಾಲ್ ಆಗಿತ್ತು. ಪೀಟರ್ ಹ್ಯಾಂಡ್ಸ್ ಕಾಂಬ್ ವಿರುದ್ಧವೂ ರವೀಂದ್ರ ಜಡೇಜಾ ಅದೇ ತಪ್ಪನ್ನು ಮಾಡಿದ್ದರು. ಇಂದೋರ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮಾರ್ನಸ್ ಲಬುಶೆನ್ ಕೂಡ ಜಡೇಜಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. ಆದರೆ ಆ ಬಾಲ್ ನೋ ಬಾಲ್ ಆಗಿತ್ತು.