ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 20 ರನ್ ಗಳಿಸಿದರು. ನಂತರ ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 17 ಮತ್ತು ಒಂದು ರನ್ ಗಳಿಸಿದರು. 31 ವರ್ಷದ ಕೆಎಲ್ ರಾಹುಲ್ ಅವರ ಟೆಸ್ಟ್ ದಾಖಲೆಯನ್ನು ಗಮನಿಸಿದರೆ, ಅವರು 47 ಟೆಸ್ಟ್‌ಗಳ 81 ಇನ್ನಿಂಗ್ಸ್‌ಗಳಲ್ಲಿ 33 ಸರಾಸರಿಯಲ್ಲಿ 2642 ರನ್ ಗಳಿಸಿದ್ದಾರೆ. 7 ಶತಕ ಹಾಗೂ 13 ಅರ್ಧ ಶತಕ ಬಾರಿಸಿದ್ದಾರೆ. 199 ರನ್ ಅತ್ಯುತ್ತಮ ಪ್ರದರ್ಶನವಾಗಿದೆ.