Smriti Mandhana: ನಮಸ್ಕಾರ ಬೆಂಗಳೂರು! ಸ್ಮೃತಿ ಮಂಧಾನ ಟ್ವೀಟ್​ಗೆ RCB ಫ್ಯಾನ್ಸ್ ಫಿದಾ

WPL Auction 2023: ಮಹಿಳಾ ಐಪಿಎಲ್​ 2023ರ ಹರಾಜು ನಡೆದಿದ್ದು, ಆಟರ್ಗಾತಿಯರ ಮೇಲೆ ಪ್ರಾಂಚೈಸಿಗಳು ಕೋಟಿ ಕೋಟಿ ಹಣ ಸುರಿದಿದೆ. ಅದೇ ರೀತಿ ಮಂಧಾನಾಗೆ ಆರ್​ಸಿಬಿ ಗಾಳ ಹಾಕಿದ್ದು, ಬೆಂಗಳೂರು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

First published:

 • 17

  Smriti Mandhana: ನಮಸ್ಕಾರ ಬೆಂಗಳೂರು! ಸ್ಮೃತಿ ಮಂಧಾನ ಟ್ವೀಟ್​ಗೆ RCB ಫ್ಯಾನ್ಸ್ ಫಿದಾ

  ಟೀಂ ಇಂಡಿಯಾ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮಹಿಳಾ ಐಪಿಎಲ್​ 2023ರ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗುವ ಮೂಲಕ ದಾಖಲೆ ಬರೆದಿದ್ದಾರೆ.

  MORE
  GALLERIES

 • 27

  Smriti Mandhana: ನಮಸ್ಕಾರ ಬೆಂಗಳೂರು! ಸ್ಮೃತಿ ಮಂಧಾನ ಟ್ವೀಟ್​ಗೆ RCB ಫ್ಯಾನ್ಸ್ ಫಿದಾ

  ಸ್ಮೃತಿ ಮಂಧಾನ ಅವರನ್ನು ಐಪಿಎಲ್​ನ ಜನಪ್ರಿಯ ಪ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. ಈ ಮೂಲಕ ಆರ್​ಸಿಬಿ ಅಭಿಮಾನಿಗಳ ಆಸೆ ಈಡೇರಿದೆ ಎಂದು ಹೇಳಬಹುದು.

  MORE
  GALLERIES

 • 37

  Smriti Mandhana: ನಮಸ್ಕಾರ ಬೆಂಗಳೂರು! ಸ್ಮೃತಿ ಮಂಧಾನ ಟ್ವೀಟ್​ಗೆ RCB ಫ್ಯಾನ್ಸ್ ಫಿದಾ

  ಇನ್ನು, ಸ್ಮೃತಿ ಮಂಧಾನ ಅವರನ್ನು ಆರ್​ಸಿಬಿ ತಂಡ ಬರೋಬ್ಬರಿ 3.40 ಕೋಟಿಗೆ ಖರೀದಿಸಿದೆ. ಇದಾದ ಬಳಿಕ ಮಂಧಾನ ಅವರು ಬೆಂಗಳೂರು ತಂಡಕ್ಕೆ ವಿಶೇಷವಾಗಿ ಧನ್ಯವಾದವನ್ನು ಹೇಳಿದ್ದಾರೆ.

  MORE
  GALLERIES

 • 47

  Smriti Mandhana: ನಮಸ್ಕಾರ ಬೆಂಗಳೂರು! ಸ್ಮೃತಿ ಮಂಧಾನ ಟ್ವೀಟ್​ಗೆ RCB ಫ್ಯಾನ್ಸ್ ಫಿದಾ

  ಸ್ಮೃತಿ ಮಂಧಾನ ಅವರು ಆರ್​ಸಿಬಿ ತಂಡಕ್ಕೆ ಆಯ್ಕೆ ಆದ ಬೆನ್ನಲ್ಲೇ ‘ನಮಸ್ಕಾರ ಬೆಂಗಳೂರು‘ ಎಂದು ಹಳದಿ-ಕೆಂಪು ಹಾರ್ಟ್ ಎಮೋಜಿ ಮೂಲಕ ಟ್ವೀಟ್​ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರ್​ಸಿಬಿ ಟ್ವೀಟ್​ಗೆ ಅವರು ಈ ಮೂಲಕ ಪ್ರತಿಕ್ರಿಯಿಸಿದ್ದಾರೆ.

  MORE
  GALLERIES

 • 57

  Smriti Mandhana: ನಮಸ್ಕಾರ ಬೆಂಗಳೂರು! ಸ್ಮೃತಿ ಮಂಧಾನ ಟ್ವೀಟ್​ಗೆ RCB ಫ್ಯಾನ್ಸ್ ಫಿದಾ

  ಮಂಧಾನ ಅವರ ಟ್ವೀಟ್​ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಜೆರ್ಸಿ ನಂಬರ್​ 18 ಎಂದಿಗೂ ನಮ್ಮವರೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಿದ್ದಾರೆ.

  MORE
  GALLERIES

 • 67

  Smriti Mandhana: ನಮಸ್ಕಾರ ಬೆಂಗಳೂರು! ಸ್ಮೃತಿ ಮಂಧಾನ ಟ್ವೀಟ್​ಗೆ RCB ಫ್ಯಾನ್ಸ್ ಫಿದಾ

  ಮಹಿಳಾ ಐಪಿಎಲ್​ನಲ್ಲಿ ಆಯ್ಕೆ ಆದ ಬಳಿಕ ನ್ಯೂಸ್​ 18 ಜೊತೆ ಮಾತನಾಡಿದ ಮಂಧಾನ ಅವರು, ‘ಹಲವು ವರ್ಷಗಳಿಂದ ನಾನು ಐಪಿಎಲ್ ಹರಾಜು ಪ್ರಕ್ರಿಯೆ ನೋಡುತ್ತಿದ್ದೆ, ಆದರೆ ಈ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್​ನ ಭಾಗವಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ‘ ಎಂದು ತಿಳಿಸಿದ್ದಾರೆ.

  MORE
  GALLERIES

 • 77

  Smriti Mandhana: ನಮಸ್ಕಾರ ಬೆಂಗಳೂರು! ಸ್ಮೃತಿ ಮಂಧಾನ ಟ್ವೀಟ್​ಗೆ RCB ಫ್ಯಾನ್ಸ್ ಫಿದಾ

  ಅಲ್ಲದೇ, ಇಂದಿನ ಹರಾಜು ಪ್ರಕ್ರಿಯೆ ಮಹಿಳಾ ಕ್ರಿಕೆಟ್‌ನ ಒಂದು ದೊಡ್ಡ ಕ್ಷಣವಾಗಿದೆ. ಈ ಹರಾಜು ಡಬ್ಲ್ಯುಪಿಎಲ್‌ನ ಐತಿಹಾಸಿಕ ಕ್ಷಣ ಎಂದು ನಾನು ಭಾವಿಸುತ್ತೇನೆ ಎಂದು ಮಂಧಾನ ಹೇಳಿಕೊಂಡಿದ್ದಾರೆ.

  MORE
  GALLERIES