WPL 2023 UPW vs RCB: ಯುಪಿ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ, ಎಲಿಮಿನೇಟರ್‌ ಹಂತಕ್ಕೇರಲು ಇನ್ನೂ ಇದೆ ಅವಕಾಶ!

WPL 2023 UPW vs RCB: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 13ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಆರ್​ಸಿಬಿ ತಂಡ ಮೊದಲ ಜಯ ಸಾಧಿಸಿದೆ.

First published:

  • 18

    WPL 2023 UPW vs RCB: ಯುಪಿ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ, ಎಲಿಮಿನೇಟರ್‌ ಹಂತಕ್ಕೇರಲು ಇನ್ನೂ ಇದೆ ಅವಕಾಶ!

    ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ RCB ತಂಡದ ಪಾಲಿಗೆ ಮರೀಚಿಕೆಯಾಗಿದ್ದ ಗೆಲುವು ಇಂದು ಅಂತಿಮವಾಗಿ ದೊರಕಿದೆ. WPL 2023ರ ಮೊದಲ ಗೆಲುವನ್ನು ಆರ್​ಸಿಬಿ ದಕ್ಕಿಸಿಕೊಂಡಿದೆ. ಆಡಿರುವ 6 ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಪಡೆ 1 ಗೆಲುವನ್ನು ದಾಖಲಿಸಿದೆ.

    MORE
    GALLERIES

  • 28

    WPL 2023 UPW vs RCB: ಯುಪಿ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ, ಎಲಿಮಿನೇಟರ್‌ ಹಂತಕ್ಕೇರಲು ಇನ್ನೂ ಇದೆ ಅವಕಾಶ!

    ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 13ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಆಯ್ದುಕೊಂಡಿತು.

    MORE
    GALLERIES

  • 38

    WPL 2023 UPW vs RCB: ಯುಪಿ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ, ಎಲಿಮಿನೇಟರ್‌ ಹಂತಕ್ಕೇರಲು ಇನ್ನೂ ಇದೆ ಅವಕಾಶ!

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಯುಪಿ ವಾರಿಯರ್ಸ್ ತಂಡವು 19.3 ಓವರ್​ಗಳಲ್ಲಿ 135 ರನ್​ಗಳಿಗೆ ತನ್ನೆಲ್ಲಾ 10 ವಿಕೆಟ್​ ಕಳೆದುಕೊಂಡಿತು. ಯುಪಿ ಪರ ಗ್ರ್ಯಾಸಿ ಹಾರೀಸ್​ 46 ರನ್​ ಗಳಿಸಿದ್ದರು.

    MORE
    GALLERIES

  • 48

    WPL 2023 UPW vs RCB: ಯುಪಿ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ, ಎಲಿಮಿನೇಟರ್‌ ಹಂತಕ್ಕೇರಲು ಇನ್ನೂ ಇದೆ ಅವಕಾಶ!

    ಬೆಂಗಳೂರು ಪರ ಸೋಫಿ ಡಿವೈನ್ ಮತ್ತು ಆಶಾ ಶೋಬನಾ ತಲಾ 2 ವಿಕೆಟ್, ಮೇಗನ್ ಶುಟ್ ಮತ್ತು ಶ್ರೇಯಾಂಕಾ ಪಾಟೀಲ್ 1 ವಿಕೆಟ್​ ಪಡೆದರೆ ಎಲ್ಲಿಸ್ ಪೆರ್ರಿ 3 ವಿಕೆಟ್​ ಪಡೆಯುವ ಮೂಲಕ ಯುಪಿ ಬ್ಯಾಟರ್​ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

    MORE
    GALLERIES

  • 58

    WPL 2023 UPW vs RCB: ಯುಪಿ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ, ಎಲಿಮಿನೇಟರ್‌ ಹಂತಕ್ಕೇರಲು ಇನ್ನೂ ಇದೆ ಅವಕಾಶ!

    ಯುಪಿ ವಿರುದ್ಧ ಅಂತಿಮವಾಗಿ ಆರ್​ಸಿಬಿ ಚೊಚ್ಚಲ ಗೆಲುವನ್ನು ದಾಖಲಿಸಿದೆ. ಆರ್​ಸಿಬಿ ತಂಡ 18 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 136 ರನ್​ ಗಳಿಸಿತು. ಆರ್​ಸಿಬಿ ಪರ ಕನ್ನಿಕಾ 46 ರನ್ ಮತ್ತು ರಿಚಾ ಘೋಷ್​ 31 ರನ್​ ಗಳಿಸುವ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    MORE
    GALLERIES

  • 68

    WPL 2023 UPW vs RCB: ಯುಪಿ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ, ಎಲಿಮಿನೇಟರ್‌ ಹಂತಕ್ಕೇರಲು ಇನ್ನೂ ಇದೆ ಅವಕಾಶ!

    ಇದರ ನಡುವೆ ಇಂದಿನ ಗೆಲುವಿನ ಜೊತೆ ಆರ್​ಸಿಬಿ ತಂಡ ಉಳಿದಿರುವ 2 ಪಂದ್ಯಗಳಲ್ಲಿ ಗೆದ್ದರೆ ಎಲಿಮಿನೇಟರ್​ ಹಂತಕ್ಕೇರಬಹುದು. ಇದು ಉಳಿದ ತಂಡಗಳ ಫಲಿತಾಂಶಗಳ ಮೇಲೆ ಅವಲಂಭಿತವಾಗಿದೆ. ಅಲ್ಲದೇ ಯುಪಿ ವಾರಿಯರ್ಸ್​ ತಂಡವು ಮುಂದಿನ ಎಲ್ಲಾ ಪಂದ್ಯಗಳನ್ನೂ ಸೋಲಬೇಕು.

    MORE
    GALLERIES

  • 78

    WPL 2023 UPW vs RCB: ಯುಪಿ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ, ಎಲಿಮಿನೇಟರ್‌ ಹಂತಕ್ಕೇರಲು ಇನ್ನೂ ಇದೆ ಅವಕಾಶ!

    ಜೊತೆಗೆ ಗುಜರಾತ್ ಜೈಂಟ್ಸ್ ಸಹ ಕನಿಷ್ಠ 2 ಪಂದ್ಯ ಸೋಲಬೇಕಿದೆ. ಆಗ ಮಾತ್ರ ಆರ್​ಸಿಬಿಗೆ ನೆಟ್​ ರನ್​ ರೇಟ್​ ಮೂಲಕ ಎಲಿಮಿನೇಟರ್ ಹಂತಕ್ಕೆ ತಲುಪಲಿದೆ. ಪಾಯಿಂಟ್ ಟೇಬಲ್​ನಲ್ಲಿ 2ನೇ ಹಾಗೂ 3ನೇ ಸ್ಥಾನದ ತಂಡ ಎಲಿಮಿನೇಟರ್ ಪಂದ್ಯ ಆಡಲಿದೆ.

    MORE
    GALLERIES

  • 88

    WPL 2023 UPW vs RCB: ಯುಪಿ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ, ಎಲಿಮಿನೇಟರ್‌ ಹಂತಕ್ಕೇರಲು ಇನ್ನೂ ಇದೆ ಅವಕಾಶ!

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್ ಸಿಂಗ್, ಕನಿಕಾ ಅಹುಜಾ.

    MORE
    GALLERIES