ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು ನಡೆದ ಹರಾಜಿನಲ್ಲಿ ಪಾಲ್ಗೊಂಡಿದ್ದವು. ಗುಜರಾತ್ ಟೈಟಾನ್ಸ್ ತಂಡ ಪುರುಷರ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇದೀಗ ಮಹಿಳಾ ಐಪಿಎಲ್ ಟೂರ್ನಿಯಲ್ಲೂ ಗುಜರಾತ್ ಜೈಂಟ್ಸ್ ಕೂಡ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟು ವಿಶ್ವದ ಸ್ಟಾರ್ ಆಟಗಾರ್ತಿಯರಿಗೆ ಮಣೆಯಾಕಿದೆ.
ಭಾರತ ಮಹಿಳಾ ತಂಡದ ಹಿರಿಯ ಆಟಗಾರ್ತಿ ಸ್ನೇಹ್ ರಾಣಾ 75 ಲಕ್ಷ ರೂಪಾಯಿ, ಸಬ್ಬಿನೇನಿ ಮೆಘಾನಗೆ 30 ಲಕ್ಷ ರೂಪಾಯಿ, ಮಾನ್ಸಿ ಜೋಶಿ 30 ಲಕ್ಷ ರೂಪಾಯಿ, ದಯಾಲನ್ ಹೇಮಲತಾ 30 ಲಕ್ಷ ರೂಪಾಯಿ, ಮೋನಿಕಾ ಪಟೇಲ್ 30 ಲಕ್ಷ ರೂಪಾಯಿ ಹಾಗೂ ತನುಜಾ ಕನ್ವರ್‌ಗೆ 50 ಲಕ್ಷ ರೂಪಾಯಿ, ಸುಶ್ಮಾ ವರ್ಮಾಗೆ 60 ಲಕ್ಷ ರೂಪಾಯಿ, ಅಶ್ವಿನಿ ಕುಮಾರಿ 35 ಹಾಗೂ ಪುರಾಣಿಕ್ ಸಿಸೋಡಿಯಾಗೆ 10 ಲಕ್ಷ ರೂಪಾಯಿ ನೀಡಿ ಖರೀದಿಸಲಾಗಿದೆ