ಸುಮಾರು 3 ವರ್ಷಗಳ ಕಾಲ ಶತಕದ ಬರ ಎದುರಿಸಿದ್ದ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳಿದ್ದಾರೆ. ಅವರು ODI ಮತ್ತು T20 ಮಾದರಿಯಲ್ಲಿ ಶತಕಗಳ ಬರವನ್ನು ಕೊನೆಗೊಳಿಸಿದ್ದಾರೆ, ಆದರೆ ಇನ್ನೂ ಟೆಸ್ಟ್ ಮಾದರಿಯಲ್ಲಿ ಅವರಿಂದ ಶತಕದ ಅಗತ್ಯವಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸಮಯದಲ್ಲಿ ವಿರಾಟ್ ಈ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಹರಾಜಿನಲ್ಲಿ ಸ್ಮೃತಿ ಮಂಧಾನ ಅತಿ ಹೆಚ್ಚು ಬಿಡ್ ಆದ ಆಟಗಾರ್ತಿ ಎನಿಸಿಕೊಂಡರು. ಈ ವೇಳೆ ಸ್ಟಾರ್ ಆಟಗಾರ್ತಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ನಾವು ಇಂಗ್ಲೆಂಡ್ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಡೇನಿಯಲ್ ವೇಟ್ ಬಗ್ಗೆ ಮಾತನಾಡುತ್ತಿದ್ದೇವೆ. ಡೇನಿಯಲ್ ವಿರಾಟ್ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಲು ಬಯಸಿದ್ದರಂತೆ.