ಈ ಕ್ರೀಡಾಂಗಣವನ್ನು ವಿಶ್ವದರ್ಜೆಯನ್ನಾಗಿ ಮಾಡಲಾಗುತ್ತಿದೆ. ವಿವಿಧ ಆಟಗಳಿಗೆ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾನದಂಡಗಳ ಪ್ರಕಾರ ಇದನ್ನು ನಿರ್ಮಿಸಲಾಗುತ್ತಿದೆ. ಕ್ರೀಡಾ ಸಂಕೀರ್ಣವು ಅಂತರರಾಷ್ಟ್ರೀಯ ಮಟ್ಟದ ಈಜುಕೊಳವನ್ನು ಹೊಂದಿದೆ ಮತ್ತು ಬ್ಯಾಸ್ಕೆಟ್ಬಾಲ್, ಹ್ಯಾಂಡ್ಬಾಲ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ವಾಲಿಬಾಲ್, ಭಾರ ಎತ್ತುವಿಕೆ, ಜಿಮ್, ಕುಸ್ತಿ, ಕರಾಟೆ ಮುಂತಾದ ಕ್ರೀಡಾ ಸೌಲಭ್ಯಗಳನ್ನು ಹೊಂದಿದೆ.