ಇನ್ನು ನಾಲ್ಕನೇ ಪ್ರಯತ್ನದಲ್ಲಿ, ನೀರಜ್ ಶ್ರಮವನ್ನೆಲ್ಲಾ ಒಗ್ಗೂಡಿಸಿ ಬರೋಬ್ಬರಿ 88.13 ಮೀ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಪದಕ ಗೆಲ್ಲುವ ರೇಸ್‌ಗೆ ಪ್ರವೇಶಿಸಿದರು. ಆ ಬಳಿಕ ನಡೆದ ಐದು ಮತ್ತು ಆರನೇ ಸುತ್ತಿನಲ್ಲಿ ಚೋಪ್ರಾ ಎಸೆದ ಜಾವೆಲಿನ್ ಫೌಲ್ ಆಗಿತ್ತು. ಹೀಗಾಗಿ ಬೆಳ್ಳಿ ಪದಕಕ್ಕೆ ಸಂತೃಪ್ತಿ ಪಡೆಯುವಂತಾಯಿತು.