IND vs AUS: ಇಂದು ಭಾರತ-ಆಸೀಸ್​ ಹೈವೋಲ್ಟೇಜ್ ಪಂದ್ಯ, ಗೆದ್ದರೆ ಫೈನಲ್​ ಟಿಕೆಟ್; ಇಲ್ಲಿದೆ ಭಾರತ ಪ್ಲೇಯಿಂಗ್ 11

Women's T20 World Cup 2023: ಇಂದು ಐಸಿಸಿ ಮಹಿಳಾ ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್​ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳು ಫೈನಲ್​ಗಾಗಿ ಸೆಣಸಾಡಲಿದೆ.

First published:

 • 19

  IND vs AUS: ಇಂದು ಭಾರತ-ಆಸೀಸ್​ ಹೈವೋಲ್ಟೇಜ್ ಪಂದ್ಯ, ಗೆದ್ದರೆ ಫೈನಲ್​ ಟಿಕೆಟ್; ಇಲ್ಲಿದೆ ಭಾರತ ಪ್ಲೇಯಿಂಗ್ 11

  ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳೆಯರ T20 ವಿಶ್ವಕಪ್ 2023 ಸೆಮಿಫೈನಲ್ ಹಂತ ತಲುಪಿದೆ. 10 ತಂಡಗಳೊಂದಿಗೆ ಆರಂಭವಾದ ಈ ಮೆಗಾ ಇವೆಂಟ್‌ನಲ್ಲಿ ಈಗ ಉಳಿದಿರುವುದು 4 ತಂಡಗಳು. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಗ್ರೂಪ್‌ 1ರಿಂದ ಹಾಗೂ ಗ್ರೂಫ್​ 2ರಿಂದ ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಸೆಮೀಸ್​​ಗೆ ತಲುಪಿದೆ.

  MORE
  GALLERIES

 • 29

  IND vs AUS: ಇಂದು ಭಾರತ-ಆಸೀಸ್​ ಹೈವೋಲ್ಟೇಜ್ ಪಂದ್ಯ, ಗೆದ್ದರೆ ಫೈನಲ್​ ಟಿಕೆಟ್; ಇಲ್ಲಿದೆ ಭಾರತ ಪ್ಲೇಯಿಂಗ್ 11

  ಇಂದು ಮೊದಲ ಸೆಮಿಫೈನಲ್ ಕೇಪ್ ಟೌನ್ ನಲ್ಲಿ ನಡೆಯಲಿದೆ. ಇದರಲ್ಲಿ ಟೀಂ ಇಂಡಿಯಾ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

  MORE
  GALLERIES

 • 39

  IND vs AUS: ಇಂದು ಭಾರತ-ಆಸೀಸ್​ ಹೈವೋಲ್ಟೇಜ್ ಪಂದ್ಯ, ಗೆದ್ದರೆ ಫೈನಲ್​ ಟಿಕೆಟ್; ಇಲ್ಲಿದೆ ಭಾರತ ಪ್ಲೇಯಿಂಗ್ 11

  2020ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದಾಗ, ಆಸ್ಟ್ರೇಲಿಯಾ ಭಾರತದ ವಿರುದ್ಧ ಗೆದ್ದಿತ್ತು. ಆದರೆ ಈ ಬಾರಿ ಈ ಎರಡು ತಂಡಗಳು ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗಲಿವೆ.

  MORE
  GALLERIES

 • 49

  IND vs AUS: ಇಂದು ಭಾರತ-ಆಸೀಸ್​ ಹೈವೋಲ್ಟೇಜ್ ಪಂದ್ಯ, ಗೆದ್ದರೆ ಫೈನಲ್​ ಟಿಕೆಟ್; ಇಲ್ಲಿದೆ ಭಾರತ ಪ್ಲೇಯಿಂಗ್ 11

  ಒಂದು ರೀತಿಯಲ್ಲಿ ಈ ಸೆಮಿಫೈನಲ್ ಪಂದ್ಯವನ್ನು ಫೈನಲ್ ಪಂದ್ಯ ಎಂದೇ ಪರಿಗಣಿಸಬಹುದು. ಗ್ರೂಪ್ ಹಂತದಲ್ಲಿ ಆಡಿದ 4 ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದಿತ್ತು. ಇನ್ನು ಭಾರತದ ವಿಚಾರಕ್ಕೆ ಬಂದರೆ ಇಂಗ್ಲೆಂಡ್ ವಿರುದ್ಧ ಸೋತು ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದೆ.

  MORE
  GALLERIES

 • 59

  IND vs AUS: ಇಂದು ಭಾರತ-ಆಸೀಸ್​ ಹೈವೋಲ್ಟೇಜ್ ಪಂದ್ಯ, ಗೆದ್ದರೆ ಫೈನಲ್​ ಟಿಕೆಟ್; ಇಲ್ಲಿದೆ ಭಾರತ ಪ್ಲೇಯಿಂಗ್ 11

  ಆಸ್ಟ್ರೇಲಿಯ ವಿರುದ್ಧ ಗೆಲ್ಲಲು ಭಾರತ ಭರ್ಜರಿ ಪ್ರದರ್ಶನ ನೀಡಬೇಕಿದೆ. ಆದರೆ ಸ್ಪಿನ್ ಭಾರತದ ಶಕ್ತಿಯಾಗಿದೆ. ಆದರೆ ಈ ಟೂರ್ನಿಯಲ್ಲಿ ಭಾರತದ ಸ್ಪಿನ್ನರ್‌ಗಳು ಅಷ್ಟಾಗಿ ಮಿಂಚುತ್ತಿಲ್ಲ. ನಾಯಕಿ ಹರ್ಮನ್ ಪ್ರೀತ್ ಕೌರ್ ಕಳಪೆ ಫಾರ್ಮ್‌ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸಹ ಭಾರತದ ಬ್ಯಾಟಿಂಗ್​ ಉತ್ತಮವಾಗಿಲ್ಲ.

  MORE
  GALLERIES

 • 69

  IND vs AUS: ಇಂದು ಭಾರತ-ಆಸೀಸ್​ ಹೈವೋಲ್ಟೇಜ್ ಪಂದ್ಯ, ಗೆದ್ದರೆ ಫೈನಲ್​ ಟಿಕೆಟ್; ಇಲ್ಲಿದೆ ಭಾರತ ಪ್ಲೇಯಿಂಗ್ 11

  ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಇಬ್ಬರೂ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಗೆಲ್ಲಬೇಕಾದರೆ ಟೀಂ ಇಂಡಿಯಾ ಸ್ಪಿನ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮಿಂಚಲೇ ಬೇಕಾಗಿದೆ.

  MORE
  GALLERIES

 • 79

  IND vs AUS: ಇಂದು ಭಾರತ-ಆಸೀಸ್​ ಹೈವೋಲ್ಟೇಜ್ ಪಂದ್ಯ, ಗೆದ್ದರೆ ಫೈನಲ್​ ಟಿಕೆಟ್; ಇಲ್ಲಿದೆ ಭಾರತ ಪ್ಲೇಯಿಂಗ್ 11

  ಇತ್ತೀಚೆಗೆ ನಡೆದ ಟಿ20 ಸರಣಿಯಲ್ಲಿ ಭಾರತವನ್ನು ಆಸ್ಟ್ರೇಲಿಯಾ ಸೋಲಿಸಿತ್ತು. ಕಳೆದ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಟೀಂ ಇಂಡಿಯಾ ಫೈನಲ್‌ನಲ್ಲಿ ಆಸೀಸ್ ಎದುರು ಸೋತಿತ್ತು.

  MORE
  GALLERIES

 • 89

  IND vs AUS: ಇಂದು ಭಾರತ-ಆಸೀಸ್​ ಹೈವೋಲ್ಟೇಜ್ ಪಂದ್ಯ, ಗೆದ್ದರೆ ಫೈನಲ್​ ಟಿಕೆಟ್; ಇಲ್ಲಿದೆ ಭಾರತ ಪ್ಲೇಯಿಂಗ್ 11

  ಇಂದು ಪಂದ್ಯವು ಕೇಪ್​ಟೌನ್​ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಸಂಜೆ 6.30ಕ್ಕೆ ಆರಂಭವಾಗಲಿದೆ. ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ಸ್ ನೇರ ಪ್ರಸಾರ ಮಾಡಲಾಗುತ್ತದೆ.

  MORE
  GALLERIES

 • 99

  IND vs AUS: ಇಂದು ಭಾರತ-ಆಸೀಸ್​ ಹೈವೋಲ್ಟೇಜ್ ಪಂದ್ಯ, ಗೆದ್ದರೆ ಫೈನಲ್​ ಟಿಕೆಟ್; ಇಲ್ಲಿದೆ ಭಾರತ ಪ್ಲೇಯಿಂಗ್ 11

  ಭಾರತ ಸಂಭಾವ್ಯ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ದೇವಿಕಾ ವೈದ್ಯ, ಪೂಜಾ ವಸ್ತ್ರಾಕರ್, ಶಿಖಾ ಪಾಂಡೆ, ರೇಣುಕಾ ಸಿಂಗ್ ಮತ್ತು ರಾಜೇಶ್ವರಿ ಗಾಯಕ್ವಾಡ್.

  MORE
  GALLERIES