IND vs AUS: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ವಿಕೆಟ್​, ವಿಶ್ವಕಪ್​ನಲ್ಲಿ ಭಾರತದ ಸೋಲಿಗೆ ಇದೇ ಕಾರಣ

IND vs AUS: ಹರ್ಮನ್‌ಪ್ರೀತ್ ಕೌರ್ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರೂ ಆಸೀಸ್ ಪಂದ್ಯದಲ್ಲಿ ಹೋರಾಟ ನಡೆಸಿದರು. ಜೆಮಿಮಾ ರಾಡ್ರಿಗಸ್ ಮಿಂಚಿದರೂ ಟೀಂ ಇಂಡಿಯಾ ಗೆಲ್ಲಲು ಸಾಧ್ಯವಾಗಲಿಲ್ಲ.

First published:

  • 19

    IND vs AUS: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ವಿಕೆಟ್​, ವಿಶ್ವಕಪ್​ನಲ್ಲಿ ಭಾರತದ ಸೋಲಿಗೆ ಇದೇ ಕಾರಣ

    ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಟೀಂ ಇಂಡಿಯಾ ಸೋತಿದೆ. ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುತ್ತೇವೆ ಎಂದು ಅನಿಸಿದರೂ ಕೊನೆಗೆ ಪಂದ್ಯ ಸೋತು ವಿಶ್ವಕಪ್​ನಿಂದ ಹೊರಬಿದ್ದಿದೆ.

    MORE
    GALLERIES

  • 29

    IND vs AUS: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ವಿಕೆಟ್​, ವಿಶ್ವಕಪ್​ನಲ್ಲಿ ಭಾರತದ ಸೋಲಿಗೆ ಇದೇ ಕಾರಣ

    ಈ ಬಾರಿಯೂ ಆಸ್ಟ್ರೇಲಿಯಾ ಮತ್ತೊಮ್ಮೆ ಫೈನಲ್ ಪ್ರವೇಶಿಸಿತು. ಗುರುವಾರ ನಡೆದ ಮಹಿಳೆಯರ T20 ವಿಶ್ವಕಪ್ 2023ರ ಮೊದಲ ಸೆಮಿಫೈನಲ್‌ನಲ್ಲಿ, ಆಸ್ಟ್ರೇಲಿಯಾ ತಂಡ 5 ರನ್‌ಗಳ ಜಯ ದಾಖಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿತು.

    MORE
    GALLERIES

  • 39

    IND vs AUS: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ವಿಕೆಟ್​, ವಿಶ್ವಕಪ್​ನಲ್ಲಿ ಭಾರತದ ಸೋಲಿಗೆ ಇದೇ ಕಾರಣ

    ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರೂ ಈ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ (34 ಎಸೆತಗಳಲ್ಲಿ 52 ರನ್; 6 ಬೌಂಡರಿ, 1 ಸಿಕ್ಸರ್) ಹೋರಾಟ ವ್ಯರ್ಥವಾಯಿತು. ಜೆಮಿಮಾ ರಾಡ್ರಿಗಸ್ (24 ಎಸೆತಗಳಲ್ಲಿ 43 ರನ್; 6 ಬೌಂಡರಿ) ಮಿಂಚಿದರೂ ಟೀಂ ಇಂಡಿಯಾ ಸೋತಿತು.

    MORE
    GALLERIES

  • 49

    IND vs AUS: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ವಿಕೆಟ್​, ವಿಶ್ವಕಪ್​ನಲ್ಲಿ ಭಾರತದ ಸೋಲಿಗೆ ಇದೇ ಕಾರಣ

    173 ರನ್‌ಗಳ ಬೃಹತ್ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ (9) ಮತ್ತು ಸ್ಮೃತಿ ಮಂಧಾನ (2) ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಇಬ್ಬರೂ ಬೇಗ ವಿಕೆಟ್​ ಒಪ್ಪಿಸಿದರು. ಬಳಿಕ ಯಾಸ್ತಿಕಾ ಭಾಟಿಯಾ (4) ರನೌಟ್ ಆದರು.

    MORE
    GALLERIES

  • 59

    IND vs AUS: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ವಿಕೆಟ್​, ವಿಶ್ವಕಪ್​ನಲ್ಲಿ ಭಾರತದ ಸೋಲಿಗೆ ಇದೇ ಕಾರಣ

    ಈ ಹಂತದಲ್ಲಿ ಜೆಮಿಮಾ ರಾಡ್ರಿಗಸ್ ಮತ್ತು ಹರ್ಮನ್ ಪ್ರೀತ್ ಕೌರ್ ಭರ್ಜರಿ ಬ್ಯಾಟಿಂಗ್​ ಮಾಡಿದರು. ಇದರೊಂದಿಗೆ ಭಾರತದ ಸ್ಕೋರ್ ಬೋರ್ಡ್ ಉತ್ತಮ ಮಟ್ಟಕ್ಕೆ ತಲುಪಿತ್ತು. ಇವರಿಬ್ಬರು 3ನೇ ವಿಕೆಟ್‌ಗೆ 69 ರನ್ ಸೇರಿಸಿದರು. ಅದರ ನಂತರ, ಜೆಮಿಮಾ ಅನಗತ್ಯ ಹೊಡೆತಕ್ಕೆಔಟ್​ ಆದರು. ನಂತರ ರಿಚಾ ಘೋಷ್ (14) ಜತೆಗೂಡಿ ಹರ್ಮನ್ ತಂಡವನ್ನು ಮುನ್ನಡೆಸಿದರು.

    MORE
    GALLERIES

  • 69

    IND vs AUS: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ವಿಕೆಟ್​, ವಿಶ್ವಕಪ್​ನಲ್ಲಿ ಭಾರತದ ಸೋಲಿಗೆ ಇದೇ ಕಾರಣ

    ಇವರಿಬ್ಬರೂ ಕ್ರೀಸ್‌ನಲ್ಲಿರುವುದರಿಂದ ಭಾರತ ಗೆಲ್ಲುವುದು ಕಂಡಿತ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ದುರಾದೃಷ್ಟ ಹರ್ಮನ್ ಪ್ರೀತ್ ಅವರನ್ನು ಹಿಂಬಾಲಿಸಿತು. 14 ಓವರ್‌ಗಳು ಪೂರ್ಣಗೊಂಡಾಗ ಟೀಂ ಇಂಡಿಯಾ 4 ವಿಕೆಟ್‌ಗೆ 124 ರನ್ ಗಳಿಸಿತ್ತು. ಹರ್ಮನ್ ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಕ್ರೀಸ್‌ನಲ್ಲಿದ್ದರು. ಭಾರತ ಗೆಲ್ಲಲು 36 ಎಸೆತಗಳಲ್ಲಿ 49 ರನ್ ಗಳಿಸಬೇಕಿತ್ತು.

    MORE
    GALLERIES

  • 79

    IND vs AUS: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ವಿಕೆಟ್​, ವಿಶ್ವಕಪ್​ನಲ್ಲಿ ಭಾರತದ ಸೋಲಿಗೆ ಇದೇ ಕಾರಣ

    ಹರ್ಮನ್‌ಪ್ರೀತ್ ಕೌರ್ 15ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದರು. ಈ ಅನುಕ್ರಮದಲ್ಲಿ ಹರ್ಮನ್ ಅರ್ಧಶತಕ ಪೂರೈಸಿದರು. ಆದರೆ 4ನೇ ಎಸೆತದಲ್ಲಿ ಹರ್ಮನ್ ಡೀಪ್ ಮಿಡ್ ವಿಕೆಟ್ ಕಡೆಗೆ ಸ್ವೀಪ್ ಶಾಟ್ ಆಡಿದರು.

    MORE
    GALLERIES

  • 89

    IND vs AUS: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ವಿಕೆಟ್​, ವಿಶ್ವಕಪ್​ನಲ್ಲಿ ಭಾರತದ ಸೋಲಿಗೆ ಇದೇ ಕಾರಣ

    ಅದೇ ಸಮಯದಲ್ಲಿ ಹರ್ಮನ್ ಪ್ರೀತ್ ಕೌರ್ ಎರಡನೇ ರನ್ ಗಳಿಸಲು ಯತ್ನಿಸಿದರು. ಚೆಂಡು ಬರುವ ಮುನ್ನವೇ ಬಹುತೇಕ ಕ್ರೀಸ್ ತಲುಪಿದ್ದರು. ಕ್ರೀಸ್ ತಲುಪುತ್ತಿದ್ದಂತೆ ಹರ್ಮನ್ ಬ್ಯಾಟ್ ಮೈದಾನಕ್ಕೆ ಕಚ್ಚಿಕೊಂಡಿತು. ಹಾಗಾಗಿ ಕ್ರೀಸ್‌ಗೆ ಬ್ಯಾಟ್‌ ತಗುಲಲಿಲ್ಲ. ಇದರಿಂದಾಗಿ ಕೌರ್​ ವಿಕೆಟ್​ ಒಪ್ಪಿಸಿದರು.

    MORE
    GALLERIES

  • 99

    IND vs AUS: ಪಂದ್ಯದ ಗತಿಯನ್ನೇ ಬದಲಿಸಿದ ಆ ಒಂದು ವಿಕೆಟ್​, ವಿಶ್ವಕಪ್​ನಲ್ಲಿ ಭಾರತದ ಸೋಲಿಗೆ ಇದೇ ಕಾರಣ

    ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಹೀಲಿ ವಿಕೆಟ್ ಪಡೆದರು. ಅದು ಟೀಂ ಇಂಡಿಯಾ ಪಾಳಯದಲ್ಲಿ ಶಾಕ್ ಆಗಿತ್ತು. ಟಿವಿ ರಿಪ್ಲೇ ಹರ್ಮನ್ ರನ್ ಔಟ್ ತೋರಿಸಿತು. ಅನಿರೀಕ್ಷಿತವಾಗಿ ಹರ್ಮನ್ ಪ್ರೀತ್ ಕೌರ್ ರನ್ ಔಟ್ ಆದರು. ನಿರ್ಣಾಯಕ ಸಮಯದಲ್ಲಿ ಔಟ್​ ಆದ್ದರಿಂದ ಹರ್ಮನ್ ಕೋಪದಿಂದ ಬ್ಯಾಟ್ ಅನ್ನು ಎಸೆದರು. ಇದೇ ರನ್​ ಔಟ್​ ಪಂದ್ಯದ ಗತಿಯನ್ನೇ ಬದಲಿಸಿತು.

    MORE
    GALLERIES