T20 World Cup 2023: ಟಿ20 ವಿಶ್ವಕಪ್​ನಲ್ಲಿ ರಿಚಾ ಘೋಷ್ ಅಬ್ಬರ, ಕೊನೆಯ 2 ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ

Womens T20 World Cup 2023: ಬಾಂಗ್ಲಾದೇಶ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ದಾಖಲಿಸಿದೆ. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟರ್​ ರಿಚಾ ಘೋಷ್ ಅದ್ಭುತ ಪ್ರದರ್ಶನಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

First published:

  • 18

    T20 World Cup 2023: ಟಿ20 ವಿಶ್ವಕಪ್​ನಲ್ಲಿ ರಿಚಾ ಘೋಷ್ ಅಬ್ಬರ, ಕೊನೆಯ 2 ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ

    2023ರ ಮಹಿಳಾ ಟಿ20 ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಕಳಪೆ ಪ್ರದರ್ಶನ ನೀಡಿದ್ದು ಗೊತ್ತೇ ಇದೆ. ಆಸ್ಟ್ರೇಲಿಯಾ ಕೈಯಲ್ಲಿ ಕೇವಲ 85 ರನ್‌ಗಳಿಗೆ ಕುಸಿದು ನಿರಾಸೆ ಮೂಡಿಸಿತು.

    MORE
    GALLERIES

  • 28

    T20 World Cup 2023: ಟಿ20 ವಿಶ್ವಕಪ್​ನಲ್ಲಿ ರಿಚಾ ಘೋಷ್ ಅಬ್ಬರ, ಕೊನೆಯ 2 ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ

    ಆದರೆ, ಬಾಂಗ್ಲಾದೇಶ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿದೆ. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟರ್​ ರಿಚಾ ಘೋಷ್ ಅದ್ಭುತ ಪ್ರದರ್ಶನ ನೀಡಿದ್ದಾರೆ.

    MORE
    GALLERIES

  • 38

    T20 World Cup 2023: ಟಿ20 ವಿಶ್ವಕಪ್​ನಲ್ಲಿ ರಿಚಾ ಘೋಷ್ ಅಬ್ಬರ, ಕೊನೆಯ 2 ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ

    ಅವರು ಕೇವಲ 56 ಎಸೆತಗಳಲ್ಲಿ ಅಜೇಯ 91 ರನ್ ಗಳಿಸಿದರು. ಇದರಲ್ಲಿ 3 ಬೌಂಡರಿ ಹಾಗೂ 9 ಸಿಕ್ಸರ್‌ಗಳು ಬಂದಿದ್ದವು. ಇದೇ ವೇಳೆ ಬಾಂಗ್ಲಾದೇಶದ ಹಿರಿಯ ಬೌಲರ್ ಜಹನಾರಾ ಅವರಿಗೆ 4 ಓವರ್‌ಗಳಲ್ಲಿ 54 ರನ್ ನೀಡಿದರು.

    MORE
    GALLERIES

  • 48

    T20 World Cup 2023: ಟಿ20 ವಿಶ್ವಕಪ್​ನಲ್ಲಿ ರಿಚಾ ಘೋಷ್ ಅಬ್ಬರ, ಕೊನೆಯ 2 ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ

    ರಿಚಾ ಘೋಷ್ ಇತ್ತೀಚೆಗೆ ಟಿ20 ಮಾದರಿಯಲ್ಲಿ ಸೂಪರ್ ಫಾರ್ಮ್‌ನಲ್ಲಿದ್ದಾರೆ. ಅದರಲ್ಲೂ ಟಿ20 ಮಾದರಿಯಲ್ಲಿ ಫಿನಿಶರ್ ಪಾತ್ರವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ರಿಚಾ ಘೋಷ್ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಫಿನಿಶರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದರು.

    MORE
    GALLERIES

  • 58

    T20 World Cup 2023: ಟಿ20 ವಿಶ್ವಕಪ್​ನಲ್ಲಿ ರಿಚಾ ಘೋಷ್ ಅಬ್ಬರ, ಕೊನೆಯ 2 ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ

    ಇದೀಗ ಅಭಿಮಾನಿಗಳು ಅವರಿಗೆ ಲೇಡಿ ಧೋನಿ ಎಂಬ ಟ್ಯಾಗ್ ನೀಡಿದ್ದಾರೆ. ಈ ಪಂದ್ಯದಲ್ಲಿ ರಿಚಾ ಘೋಷ್ ಅವರೊಂದಿಗೆ ಜೆಮಿಮಾ ರಾಡ್ರಿಗಸ್ 27 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಮೂಲಕ 41 ರನ್​ಗಳಿಸಿದರು. ಇದರಿಂದಾಗಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 183 ರನ್ ಗಳಿಸಿತು.

    MORE
    GALLERIES

  • 68

    T20 World Cup 2023: ಟಿ20 ವಿಶ್ವಕಪ್​ನಲ್ಲಿ ರಿಚಾ ಘೋಷ್ ಅಬ್ಬರ, ಕೊನೆಯ 2 ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ

    ಬಳಿಕ ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 131 ರನ್‌ಗಳಿಸುವ ಮೂಲಕ ಸೋಲನ್ನಪ್ಪಿತು. ಭಾರತದ ಬೌಲರ್‌ಗಳ ಪೈಕಿ ದೇವಿಕಾ ವೈದ್ಯ ಎರಡು ವಿಕೆಟ್ ಪಡೆದರು. ಈ ಟೂರ್ನಿಯಲ್ಲಿ ಭಾರತ ನೆಚ್ಚಿನ ತಂಡಗಳಲ್ಲಿ ಒಂದಾಗಿ ಕಣಕ್ಕಿಳಿಯುತ್ತಿದೆ.

    MORE
    GALLERIES

  • 78

    T20 World Cup 2023: ಟಿ20 ವಿಶ್ವಕಪ್​ನಲ್ಲಿ ರಿಚಾ ಘೋಷ್ ಅಬ್ಬರ, ಕೊನೆಯ 2 ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ

    ಆಸ್ಟ್ರೇಲಿಯಾದಲ್ಲಿ ನಡೆದ 2020ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಟೀಂ ಇಂಡಿಯಾ ಸೋತಿತ್ತು. ನಂತರ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ ರನ್ನರ್ ಅಪ್ ಆಗಿತ್ತು. ಹೀಗಾಗಿ ಈ ಬಾಋಇಯಾದರೂ ವಿಶ್ವಕಪ್​ ಗೆಲ್ಲಬೇಕೆಂಬ ಹಠದಲ್ಲಿ ಟೀಂ ಇಂಡಿಯಾ ಕಣಕ್ಕಿಳಿದಿದೆ.

    MORE
    GALLERIES

  • 88

    T20 World Cup 2023: ಟಿ20 ವಿಶ್ವಕಪ್​ನಲ್ಲಿ ರಿಚಾ ಘೋಷ್ ಅಬ್ಬರ, ಕೊನೆಯ 2 ಓವರ್​ನಲ್ಲಿ ಸಿಕ್ಸರ್​ಗಳ ಸುರಿಮಳೆ

    ಭಾರತ ತನ್ನ ಮೊದಲ ಪಂದ್ಯದಲ್ಲಿ ತನ್ನ ಬಹುಕಾಲದ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಫೆ.12ರಂದು ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ ನಡೆಯಲಿದೆ. 6.30ಕ್ಕೆ ಆರಂಭವಾಗಲಿದೆ.

    MORE
    GALLERIES