Womens IPL 2023: ಆರ್ಸಿಬಿ ಮಹಿಳಾ ತಂಡದ ಲೋಗೋ ರಿಲೀಸ್, ವುಮೆನ್ಸ್ ಐಪಿಎಲ್ಗೆ ಹೊಸ ಹೆಸರಿಟ್ಟ ಬಿಸಿಸಿಐ
Womens IPL 2023: ಇಂಡಿಯನ್ ಪ್ರೀಮಿಯರ್ ಲೀಗ್ನ ಪುರುಷರ ಪಂದ್ಯಾವಳಿ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಪ್ರಸ್ತುತ 10 ತಂಡಗಳು ಇದರಲ್ಲಿ ಆಡುತ್ತಿವೆ. ಪುರುಷರ ಪಂದ್ಯಾವಳಿಯ ಮಾದರಿಯಲ್ಲಿ ಮಹಿಳೆಯರ ಐಪಿಎಲ್ ಕೂಡ ಪ್ರಾರಂಭವಾಗಲಿದೆ.
ಮಹಿಳಾ ಐಪಿಎಲ್ನ ಉದ್ಘಾಟನಾ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವ 5 ಫ್ರಾಂಚೈಸಿಗಳ ಯಶಸ್ವಿ ಹರಾಜು ನಂತರ ಬುಧವಾರ ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸಕ್ಕೆ ಹೊಸ ಅಧ್ಯಾಯವನ್ನು ಸೇರಿಸಲಾಗಿದೆ. ಈ ಮೂಲಕ ಮಹಿಳಾ ಆಟಗಾರ್ತಿಯರಿಗೂ ಐಪಿಎಲ್ ಆಡುವ ಕನಸು ನನಸಾಗಿದೆ.
2/ 8
BCCI 951 ಕೋಟಿಗಳಿಗೆ ಪಂದ್ಯಾವಳಿಯ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಿದ ಕೆಲವು ದಿನಗಳ ನಂತರ, ಲೀಗ್ ಅನ್ನು ಮಹಿಳಾ ಪ್ರೀಮಿಯರ್ ಲೀಗ್ - WPL ಎಂದು ಕರೆಯಲಾಗುವುದು ಎಂದು ದೃಢಪಡಿಸಿದೆ.
3/ 8
ಈ ಮೂಲಕ ಮಹಿಳಾ ಐಪಿಎಲ್ ಅನ್ನು ಮಹಿಳಾ ವುಮೆನ್ಸ್ ಪ್ರೀಮಿಯರ್ ಲೀಗ್ ಎಂದು ಅಧಿಕೃತವಾಗಿ ಬಿಸಿಸಿಐ ಘೋಷಿಸಿದೆ. ಇದೇ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ WPL ನ ಉದ್ಘಾಟನಾ ಆವೃತ್ತಿಯ ತಂಡಗಳಿಗೆ ಬಿಡ್ಡಿಂಗ್ 2008 ರಲ್ಲಿ ಉದ್ಘಾಟನಾ ಪುರುಷರ ಐಪಿಎಲ್ ದಾಖಲೆಗಳನ್ನು ಮುರಿದಿದೆ ಎಂದು ಹೇಳಿದ್ದಾರೆ.
4/ 8
ಅದಾನಿ ಸ್ಪೋರ್ಟ್ಸ್ ಲೈನ್ ಪ್ರೈವೇಟ್ ಲಿಮಿಟೆಡ್ ಅಹಮದಾಬಾದ್ ತಂಡವನ್ನು 1289 ಕೋಟಿ ರೂ.ಗೆ ಖರೀದಿಸಿದೆ. ಮತ್ತೊಂದೆಡೆ ಇಂಡಿಯಾ ವಿನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಮುಂಬೈ ತಂಡದ ಹಕ್ಕನ್ನು 912.99 ಕೋಟಿ ರೂ.ಗೆ ಪಡೆದುಕೊಂಡಿದೆ.
5/ 8
ಅದೇ ವೇಳೆ ಆರ್ಸಿಬಿ 901 ಕೋಟಿ ರೂ.ಗೆ ಬೆಂಗಳೂರನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ದೆಹಲಿಯ ಬಗ್ಗೆ ಮಾತನಾಡುತ್ತಾ, JSW GMR ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಇದನ್ನು 810 ಕೋಟಿ ರೂ.ಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ.
6/ 8
ಕಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಲಕ್ನೋ ಮಹಿಳಾ ತಂಡವನ್ನು ಖರೀದಿಸಿದೆ. ಒಟ್ಟಾರೆಯಾಗಿ ಮಹಿಳಾ ಐಪಿಎಲ್ನ ಎಲ್ಲಾ 5 ತಂಡಗಳನ್ನು ಮಾರಾಟ ಮಾಡಿದ ನಂತರದ ಮೌಲ್ಯ 4669.99 ಕೋಟಿ ರೂಪಾಯಿ ತಲುಪಿದೆ ಎಂದು BCCI ತಿಳಿಸಿದೆ.
7/ 8
ಇದೇ ವೇಳೆ, RCB ಮಹಿಳಾ ತಂಡದ ಪರವಾಗಿ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, 'RCB! ಮಹಿಳಾ ಪ್ರೀಮಿಯರ್ ಲೀಗ್ ತಂಡವನ್ನು ಖರೀದಿಸಿದೆ ತುಂಬಾ ಖುಷಿ ತಂದಿದೆ. ಹೊಸ ಉತ್ಸಾಹದಲ್ಲಿ ನಮ್ಮ ಮಹಿಳಾ ತಂಡವನ್ನು ಹುರಿದುಂಬಿಸಲು ಕಾಯಲು ಸಾಧ್ಯವಿಲ್ಲ‘ ಎಂದು ಬರೆದುಕೊಂಡಿದ್ದಾರೆ.
8/ 8
ಇದೇ ವೇಳೆ, ಮಹಿಳಾ RCB ತಂಡವು ತನ್ನ ಟೀಂನ ಹೊಸ ಲೋಗೋವನ್ನು ಬಿಡುಗಡೆ ಮಾಡಿದ್ದು, ಕೆಂಪು ಮತ್ತು ಚಿನ್ನದ ಬಣ್ಣದಲ್ಲಿ ಲೋಗೋವನ್ನು ಡಿಸೈನ್ ಮಾಡಲಾಗಿದೆ.