Smriti Mandhana: ಸ್ವಿಮಿಂಗ್ ಫೂಲ್ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟ ಮಂದಾನಾ, ಯಾವ ಹೀರೋಯಿನ್ಗೂ ಕಮ್ಮಿಯಿಲ್ಲ ಇವ್ರ ಬ್ಯೂಟಿ!
Smriti Mandhana: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಅಲ್ಲದೇ ಇದೀಗ ಮಂದನಾ ಹಂಚಿಕೊಂಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ.
ಪುರುಷ ಪ್ರಧಾನ ಕ್ರಿಕೆಟ್ ಸಮಾಜದಲ್ಲಿಯೂ ಸ್ಮೃತಿ ಮಂದಾನ ಮಹಿಳಾ ಕ್ರಿಕೆಟ್ನಲ್ಲಿ ಅಪಾರ ಕ್ರೇಜ್ ಹೊಂದಿದ್ದಾರೆ. ಸ್ಮೃತಿ ಮಂದಾನ ಜುಲೈ 18, 1996 ರಂದು ಮುಂಬೈನಲ್ಲಿ ಜನಿಸಿದರು. ತನ್ನ ಬ್ಯಾಟಿಂಗ್ ಜೊತೆಗೆ ತನ್ನ ಸೌಂದರ್ಯದಿಂದ ಸಖತ್ ಸುದ್ದಿಯಲ್ಲಿರುತ್ತಾರೆ.
2/ 8
ಮಹಿಳಾ ಕ್ರಿಕೆಟಿಗರಲ್ಲಿ ಜನಸಾಮಾನ್ಯರಲ್ಲಿ ಜನಪ್ರಿಯತೆ ಗಳಿಸಿದ ಕ್ರಿಕೆಟಿಗರು ತೀರಾ ಕಡಿಮೆ. ಏಕದಿನ ತಂಡದ ನಾಯಕಿ ಮಿಥಾಲಿರಾಜ್ ನಂತರ ಎಲ್ಲರಿಗೂ ತಿಳಿದಿರುವ ಹೆಸರು ಸ್ಮೃತಿ ಮಂದಾನಾ ಎನ್ನಬಹುದು. ಇವರಿಗೆ ಯುವಜನತೆಯಲ್ಲಿ ಒಳ್ಳೆಯ ಫಾಲೋಯಿಂಗ್ ಇದೆ.
3/ 8
, ಸ್ಮೃತಿ ಮಂದಾನ ತನ್ನ ಫೋಟೋಗಳನ್ನು ಹೆಚ್ಚಾಘಿ ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಅಂತಹ ಫೋಟೋಗಳಲ್ಲಿ ಇದೀಗ ಅವರ ಇನ್ನೊಂದು ಫೋಟೋ ಸಖತ್ ವೈರಲ್ ಆಗುತ್ತಿದೆ.
4/ 8
ಸ್ವಿಮ್ಮಿಂಗ್ ಪೂಲ್ನಲ್ಲಿರುವ ಫೋಟೋವನ್ನು ಮಂದನಾ ಅವರು ಹಂಚಿಕೊಮಡಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ನೆಟಿಜನ್ಗಳು ಕ್ರೇಜಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಸ್ಮೃತಿ ಮಂದಾನಾ ತುಂಬಾ ಚನ್ನಾಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.
5/ 8
ಇನ್ಸ್ಟಾಗ್ರಾಮ್ನಲ್ಲಿ 70 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಏಕೈಕ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಂದಾನಾ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಭಿಮಾನಿಗಳು ಮಂಧಾನ ಅವರನ್ನು ಬಾಲಿವುಡ್ ನಾಯಕಿಯರೊಂದಿಗೆ ಹೋಲಿಸುತ್ತಾರೆ.
6/ 8
ಕ್ರಿಕೆಟ್ ನಲ್ಲಿ ಅಗ್ರಸ್ಥಾನದಲ್ಲಿರುವ ಸ್ಮೃತಿ ಆದಾಯದಲ್ಲೂ ಉತ್ತಮವಾಗಿ ಗಳಿಸುತ್ತಿದ್ದಾರೆ. ಸ್ಮೃತಿ ಸಾಮಾನ್ಯವಾಗಿ ಯಾವುದೇ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ವರ್ಷಕ್ಕೆ ಕನಿಷ್ಠ 50 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ.
7/ 8
StardomNetworth.com ಪ್ರಕಾರ, 26 ವರ್ಷದ ಸ್ಮೃತಿ ಮಂಧಾನ ಕಿರಿಯ ವಯಸ್ಸಿನಲ್ಲೇ ಅತ್ಯಂತ ಶ್ರೀಮಂತ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಸ್ಮೃತಿ ಅವರ ಪ್ರಸ್ತುತ ಆಸ್ತಿ 50 ಕೋಟಿ ರೂಪಾಯಿ ಎಂದು ಇತ್ತೀಚೆಗೆ ಬಹಿರಂಗವಾಗಿತ್ತು.
8/ 8
ಇದಲ್ಲದೆ, ಭಾರತ ತಂಡವನ್ನು ಪ್ರತಿನಿಧಿಸುವುದಕ್ಕಾಗಿ ಅವರು ಬಿಸಿಸಿಐನಿಂದ ವರ್ಷಕ್ಕೆ 50 ಲಕ್ಷ ರೂಪಾಯಿಗಳನ್ನು ಸಂಬಳವಾಗಿ ಪಡೆಯುತ್ತಾರೆ. ಅವರು ಮಹಾರಾಷ್ಟ್ರದ ತನ್ನ ತವರು ಸಾಂಗ್ಲಿಯಲ್ಲಿ "SM18" ಎಂಬ ಕೆಫೆಯನ್ನು ನಡೆಸುತ್ತಿದ್ದಾರೆ. ಮಂದನಾ 16ನೇ ವಯಸ್ಸಿನಲ್ಲಿ ರಾಷ್ಟ್ರೀಯ ತಂಡ ಪ್ರವೇಶಿಸಿದ್ದರು.