Virat Kohli: ನನ್ನ ಸಲಹೆಯನ್ನು ಕೊಹ್ಲಿ ಯಾಕೆ ಕೇಳಬೇಕು, ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಮಾಜಿ ನಾಯಕ
ಟೀಂ ಇಂಡಿಯಾದಲ್ಲಿ ಕೊಹ್ಲಿ ಸ್ಥಾನವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹಾಗೂ ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಪ್ರತಿಕ್ರಿಯಿಸಿದ್ದಾರೆ.
ವಿರಾಟ್ ಕೊಹ್ಲಿ ಕೆಲವು ಸಮಯದಿಂದ ತಮ್ಮ ಕಳಪೆ ಫಾರ್ಮ್‌ನಿಂದ ಎಲ್ಲರ ಟೀಕೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿದಿದೆ. ಕಪಿಲ್ ದೇವ್ ಅವರಂತಹ ದಿಗ್ಗಜ ಆಟಗಾರರು ಕೊಹ್ಲಿಯನ್ನು ತಂಡದಿಂದ ಕೈ ಬಿಡುವುದು ಉತ್ತಮ ಎಂದು ಸಲಹೆಗಳನ್ನೂ ಸಹ ನೀಡುತ್ತಿದ್ದಾರೆ.
2/ 7
ಅದೇ ವೇಳೆ ಕೊಹ್ಲಿಯನ್ನು ಬೆಂಬಲಿಸಿದವರೂ ಇದ್ದಾರೆ. ಟೀಂ ಇಂಡಿಯಾದಲ್ಲಿ ಕೊಹ್ಲಿ ಸ್ಥಾನವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹಾಗೂ ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಪ್ರತಿಕ್ರಿಯಿಸಿದ್ದಾರೆ.
3/ 7
ಇಂಗ್ಲೆಂಡ್ ಪ್ರವಾಸದ ನಂತರ, ಕೊಹ್ಲಿ ಕೂಡ ಕ್ರಿಕೆಟ್‌ನಿಂದ ಸ್ವಲ್ಪ ದೂರವಿದ್ದು, ವಿಶ್ರಾಂತಿ ಪಡೆದಿದ್ದಾರೆ. ಪ್ರಸ್ತುತ ಅವರು ತಮ್ಮ ಪತ್ನಿಯೊಂದಿಗೆ ಇಂಗ್ಲೆಂಡ್‌ನ ಕಾಲ ಕಳೆಯುತ್ತಿದ್ದಾರೆ. ಇದರ ನಡುವೆ ಕೊಹ್ಲಿ ಬಗ್ಗೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಆಘಾತಕಾರಿ ಹೇಳಿಕೆ ನೀಡಿದ್ದರು.
4/ 7
ಪಾಕ್ ಟಿವಿ ಚಾನೆಲ್ ಚರ್ಚೆಯಲ್ಲಿ ಆಫ್ರಿದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿರುವ ಕೊಹ್ಲಿಗೆ ಸಲಹೆ ನೀಡುವಂತೆ ಆ್ಯಂಕರ್ ಕೇಳಿದ್ದಾರೆ. ಅದಕ್ಕೆ ಅಫ್ರಿದಿ ಪ್ರತಿಕ್ರಿಯಿಸಿದ್ದು, 'ಕೊಹ್ಲಿ ನನ್ನ ಸಲಹೆಯನ್ನು ಏಕೆ ಕೇಳಬೇಕು' ಎಂದು ಹೇಳಿದ್ದಾರೆ.
5/ 7
ಆದರೆ, ಕೊಹ್ಲಿಯಂತಹ ಅಗ್ರಮಾನ್ಯ ಆಟಗಾರರ ಮೇಲೆ ಸದಾ ನಿರೀಕ್ಷೆಗಳಿದ್ದು, ಅದನ್ನು ಅವರು ಪೂರೈಸಲೇಬೇಕು ಎಂದು ಹೇಳಿದ್ದಾರೆ. ಕಳೆದ ಕೆಲ ಸಮಯದಿಂದ ಕೊಹ್ಲಿಗೆ ಅವರ ಮಟ್ಟಕ್ಕೆ ತಕ್ಕಂತೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಆಫ್ರಿದಿ ಹೇಳಿದ್ದಾರೆ.
6/ 7
ಮುಂಬರುವ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ನಲ್ಲಿ ಚಾಂಪಿಯನ್ ಆಗುವ ಹಕ್ಕು ಪಾಕಿಸ್ತಾನ ತಂಡಕ್ಕಿದೆ ಎಂದರು. ಪ್ರಸ್ತುತ ಪಾಕಿಸ್ತಾನ ತಂಡ ಅದ್ಭುತವಾಗಿ ಆಡುತ್ತಿದೆ ಎಂದು ಹೇಳಿದ್ದಾರೆ.
7/ 7
ಕೊಹ್ಲಿ ಕಳಪೆ ಫಾರ್ಮ್ ಸದ್ಯ ಟೀಂ ಇಂಡಿಯಾಗೆ ದೊಡ್ಡ ಹೊಡೆತ ಎಂಬಂತಾಗಿದೆ. ಮುಂಬರಲಿರುವ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಟೂರ್ನಿ ಒಳಗಾಗಿ ಕೊಹ್ಲಿ ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳ ಬೇಕಾಗಿರುವುದು ಟೀಂ ಇಂಡಿಯಾಗೆ ಬಹಳ ಮುಖ್ಯವಾಗಿದೆ.