ಕಾವ್ಯ ಮಾರನ್ ಯಾರು?: ವರದಿಯ ಪ್ರಕಾರ, 30 ವರ್ಷ ವಯಸ್ಸಿನ ಕಾವ್ಯ ಅವರ ಎತ್ತರ 5 ಅಡಿ 4 ಇಂಚುಗಳಷ್ಟು ಇದ್ದು, ಇವರ ತಂದೆಯ ಹೆಸರು ಕಲಾನಿಧಿ ಮಾರನ್. ಅವರು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ತಂದೆ ಕಲಾನಿಧಿ ಮಾರನ್ ಸನ್ ಗ್ರೂಪ್ ನ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದಾರೆ. ಅವರು ಸನ್ ಟಿವಿಯ ಸನ್ ಮ್ಯೂಸಿಕ್ ಮತ್ತು ಆರ್‌ಎಂ ಚಾನೆಲ್ ಗಳ ಭಾಗವಾಗಿದ್ದಾರೆ.
ಕಾವ್ಯ ಅವರು ಕ್ರಿಕೆಟ್ ಆಟದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಮತ್ತು ತಮ್ಮ ತಂಡವಾದ ಎಸ್ಆರ್‌ಎಚ್ ಅನ್ನು ಹುರಿದುಂಬಿಸಲು ನಿಯಮಿತವಾಗಿ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ಕೆಲವರು ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲೀಕರಾದ ಪ್ರಸಿದ್ಧ ನಟಿ ಪ್ರೀತಿ ಜಿಂಟಾಗೆ ಹೋಲಿಸುತ್ತಿದ್ದಾರೆ. ಐಪಿಎಲ್ ಸಮಯದಲ್ಲಿ ಅವರ ಅಭಿಮಾನಿಗಳು ಅವರನ್ನು 'ನ್ಯಾಷನಲ್ ಕ್ರಶ್ ಆಫ್ ಇಂಡಿಯಾ' ಎಂದು ಸಹ ಕರೆಯುತ್ತಿದ್ದಾರೆ.