Kohli vs Gill: ಕೊಹ್ಲಿ-ಗಿಲ್​ ಐಪಿಎಲ್​ ಅಂಕಿ-ಅಂಶಗಳಲ್ಲಿ ಒಂಚೂರು ವ್ಯತ್ಯಾಸನೇ ಇಲ್ಲ! ಕಾಕತಾಳೀಯ ಅಂದ್ರೆ ಇದೆ ಅನ್ಸುತ್ತೆ!

ಈ ವರ್ಷದ ಐಪಿಎಲ್​ನಲ್ಲಿ ಕೊಹ್ಲಿ-ಶುಭ್​ಮನ್​ ಗಿಲ್​ ಆಟ, ಇವ್ರ ರನ್​ಗಳು, ಇವರಿಬ್ಬರ ಅಂಕಿಅಂಶಗಳು ನೋಡ್ತಿದ್ರೆ ಅಚ್ಚರಿ ಉಂಟಾಗುತ್ತದೆ.  ಎಂತಹವರಿಗಾದರೂ ಇದು ನಿಜಾನಾ? ಸುಳ್ಳಾ ಅಂತ ಒಮ್ಮೆ ಕ್ರಾಸ್ ಚೆಕ್ ಮಾಡಬೇಕು.

First published:

  • 17

    Kohli vs Gill: ಕೊಹ್ಲಿ-ಗಿಲ್​ ಐಪಿಎಲ್​ ಅಂಕಿ-ಅಂಶಗಳಲ್ಲಿ ಒಂಚೂರು ವ್ಯತ್ಯಾಸನೇ ಇಲ್ಲ! ಕಾಕತಾಳೀಯ ಅಂದ್ರೆ ಇದೆ ಅನ್ಸುತ್ತೆ!

    ಬೆಂಗಳೂರು: ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸಮನ್ ಶುಭ್​ಮನ್ ಗಿಲ್​ರ ಆಟ ನೋಡಿದವರೂ ಭವಿಷ್ಯದ ವಿರಾಟ್ ಕೊಹ್ಲಿ ಅಂತಾನೆ ಹೇಳುತ್ತಿದ್ದಾರೆ. ಏಕೆಂದರೆ ಈಗಾಗಲೇ ಆರಂಭಿಕ ಕರಿಯರ್​ನಲ್ಲೇ ಅವರ ಕೆಲವು ದಾಖಲೆಗಳು ಕೊಹ್ಲಿಯೊಂದಿಗೆ ಹೊಂದಿಕೆಯಾಗುತ್ತಿವೆ.

    MORE
    GALLERIES

  • 27

    Kohli vs Gill: ಕೊಹ್ಲಿ-ಗಿಲ್​ ಐಪಿಎಲ್​ ಅಂಕಿ-ಅಂಶಗಳಲ್ಲಿ ಒಂಚೂರು ವ್ಯತ್ಯಾಸನೇ ಇಲ್ಲ! ಕಾಕತಾಳೀಯ ಅಂದ್ರೆ ಇದೆ ಅನ್ಸುತ್ತೆ!

    ಹಾಗಾಗಿ ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ದಾಖಲಿಸಿರುವ ಹಲವು ದಾಖಲೆಗಳ ಒಡೆಯನಾಗುವ ಸದ್ಯದ ಕ್ರಿಕೆಟರ್ ಅಂದರೆ ಅದು ಒನ್ ಅಂಡ್ ಓನ್ಲಿ ಶುಭ್​ಮನ್ ಗಿಲ್ ಅಂತಾ ಕ್ರಿಕೆಟ್ ಪಂಡಿತರು ಮಾತಾಡಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಮುಂದೆ ಮಾತಾಡೋಣ. ಏಕೆಂದರೆ ಒಂದೆರಡು ವರ್ಷಗಳ ಕ್ರಿಕೆಟ್ ನೋಡಿ ಎಲ್ಲವನ್ನೂ ಡಿಸೈಡ್ ಮಾಡೋಕೆ ಆಗೋದಿಲ್ಲ.

    MORE
    GALLERIES

  • 37

    Kohli vs Gill: ಕೊಹ್ಲಿ-ಗಿಲ್​ ಐಪಿಎಲ್​ ಅಂಕಿ-ಅಂಶಗಳಲ್ಲಿ ಒಂಚೂರು ವ್ಯತ್ಯಾಸನೇ ಇಲ್ಲ! ಕಾಕತಾಳೀಯ ಅಂದ್ರೆ ಇದೆ ಅನ್ಸುತ್ತೆ!

    ಆದರೆ ಈ ವರ್ಷದ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಗಿಲ್​ ಅವರ ಅಂಕಿ ಅಂಶಗಳನ್ನ ನೋಡ್ತಿದ್ರೆ ಒಂದೇ ತರಹ ಇದೆ. ವಿಶೇಷ ಅಂದರೆ ಇಬ್ಬರ ಅಂಕಿಅಂಶಗಳಲ್ಲಿ ಒಂಚೂರು ವ್ಯತ್ಯಾಸ ಆಗಲ್ಲ. ಇದುನ್ನ ನೋಡಿದವರು ನಿಜಾನಾ.. ಸುಳ್ಳಾ ಅಂತ ಒಮ್ಮೆ ಕ್ರಾಸ್ ಚೆಕ್ ಮಾಡೇ ಮಾಡ್ತಾರೆ. ನಮ್ ಕಣ್ಣುಗಳನ್ನು ನಾವೇ ನಂಬಲಾದ ಅಂಕಿಅಂಶಗಳು ನಮಗೆ ಎದುರಾಗಿದೆ.

    MORE
    GALLERIES

  • 47

    Kohli vs Gill: ಕೊಹ್ಲಿ-ಗಿಲ್​ ಐಪಿಎಲ್​ ಅಂಕಿ-ಅಂಶಗಳಲ್ಲಿ ಒಂಚೂರು ವ್ಯತ್ಯಾಸನೇ ಇಲ್ಲ! ಕಾಕತಾಳೀಯ ಅಂದ್ರೆ ಇದೆ ಅನ್ಸುತ್ತೆ!

    ಈ ವರ್ಷದ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶುಭ್​ಮನ್ ಗಿಲ್ ಈವರೆಗೆ ಒಟ್ಟು 8 ಪಂದ್ಯಗಳನ್ನು ಆಡಿದ್ದಾರೆ. ಇಬ್ಬರು ಸಹ ತಲಾ 8 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ವಿಶೇಷ ಅಂದರೆ ಇಬ್ಬರು ತಲಾ ಒಮ್ಮೊಮ್ಮೆ ಡಕ್ ಔಟ್ ಆಗಿದ್ದಾರೆ. ಇನ್ನೂ ವಿಶೇಷ ಅಂದರೆ ಇಬ್ಬರೂ ಸಹ ಸೇಮ್ ಟು ಸೇಮ್ 234 ಬಾಲ್ ಗಳನ್ನ ಫೇಸ್ ಮಾಡಿದ್ದಾರೆ.

    MORE
    GALLERIES

  • 57

    Kohli vs Gill: ಕೊಹ್ಲಿ-ಗಿಲ್​ ಐಪಿಎಲ್​ ಅಂಕಿ-ಅಂಶಗಳಲ್ಲಿ ಒಂಚೂರು ವ್ಯತ್ಯಾಸನೇ ಇಲ್ಲ! ಕಾಕತಾಳೀಯ ಅಂದ್ರೆ ಇದೆ ಅನ್ಸುತ್ತೆ!

    ಇಬ್ಬರೂ ಬಲಗೈ ಬ್ಯಾಟರ್​ಗಳಾಗಿದ್ದು, ವಿರಾಟ್ ಹಾಗೂ ಶುಭ್​ಮನ್ ಗಿಲ್ಲ ಇಬ್ಬರೂ ಸಹ ಇದುವರೆಗೂ 333 ರನ್ ಗಳನ್ನ ಹೊಡೆದಿದ್ದಾರೆ. ಹಾಗೇ ಇಬ್ಬರ ಸ್ಟ್ರೈಕ್ ರೇಟ್ ಕೂಡ 142.3 ಮ್ಯಾಚ್ ಆಗ್ತಿತ್ತಿದೆ. ಕ್ರಿಕೆಟಿಗರ ನಡುವೆ ಸಾಮ್ಯತೆ ಇರಬೇಕು. ಆದರೆ ಈ ಮಟ್ಟಿಗಿನ ಸಾಮ್ಯಾತೆನಾ? ಇದು ನಿಜವಾದ ಅಂಕಿಅಂಶಗಳ ಅಥವಾ ಸುಳ್ಳಾ ಅಂತಾ ಕ್ರಿಕೆಟ್ ಪ್ರೇಮಿಗಳೇ ಅಚ್ಚರಿಗೆ ಒಳಪಡುವಂತೆ ಇಬ್ಬರ ಅಂಕಿ ಅಂಶಗಳು‌ ಮ್ಯಾಚ್ ಆಗುತ್ತಿವೆ.

    MORE
    GALLERIES

  • 67

    Kohli vs Gill: ಕೊಹ್ಲಿ-ಗಿಲ್​ ಐಪಿಎಲ್​ ಅಂಕಿ-ಅಂಶಗಳಲ್ಲಿ ಒಂಚೂರು ವ್ಯತ್ಯಾಸನೇ ಇಲ್ಲ! ಕಾಕತಾಳೀಯ ಅಂದ್ರೆ ಇದೆ ಅನ್ಸುತ್ತೆ!

    ಮುಂದೆ ವಿರಾಟ್ ಕೊಹ್ಲಿ ದಾಖಲೆಗಳನ್ನು ಚಿಂದಿ ಉಡಾಯಿಸಿ ಹೊಸ ದಾಖಲೆಗಳ ಒಡೆಯನಾಗ್ತಾರಾ ಶುಭ್​ಮನ್ ಗಿಲ್ ಅನ್ನೋದು ಬೇರೆ ಮಾತು. ಆದ್ರೆ ಐಪಿಎಲ್​ನ ಈ ಸೀಸನ್​​ನಲ್ಲಿ,‌ ಇಲ್ಲಿಯವರೆಗಿನ ಪಂದ್ಯಗಳಲ್ಲಿ ಕೊಹ್ಲಿ ಸಮಕ್ಕೆ ಶುಭ್​ಮನ್ ಗಿಲ್ ಸಾಮಾರ್ಥ್ಯ ತೋರಿಸಿದ್ದಾರೆ.

    MORE
    GALLERIES

  • 77

    Kohli vs Gill: ಕೊಹ್ಲಿ-ಗಿಲ್​ ಐಪಿಎಲ್​ ಅಂಕಿ-ಅಂಶಗಳಲ್ಲಿ ಒಂಚೂರು ವ್ಯತ್ಯಾಸನೇ ಇಲ್ಲ! ಕಾಕತಾಳೀಯ ಅಂದ್ರೆ ಇದೆ ಅನ್ಸುತ್ತೆ!

    ಇನ್ನು ಸೋಮವಾರ ಲಕ್ನೋ ವಿರುದ್ಧ ಆರ್​ಸಿಬಿ ಪಂದ್ಯ ಇದ್ದು ಆ ಪಂದ್ಯದಲ್ಲಿ ಕೊಹ್ಲಿ ಹೇಗೆ ಫರ್ಪಾಮ್‌ ಮಾಡುತ್ತಾರೆ. ಶುಭ್​ಮನ್ ಗಿಲ್ ಮುಂದಿನ ಪಂದ್ಯಗಳ ಪ್ತದರ್ಶನಗಳು ಹೇಗಿರುತ್ತದೆ ಎನ್ನುವುದನ್ನ ಕಾದು ನೋಡಬೇಕಿದೆ. ಈ ಸೀಸನ್ ಮುಗಿದಾಗ ಯಾರ ಕೈ ಮೇಲಿರುತ್ತೆ ಅಥವಾ ಸಮಬಲದ ಅಂಕಿ ಅಂಶಗಳು ಮುಂದುವರಿದುಕೊಂಡು ಹೋಗುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.    ( ವರದಿ: ಆನಂದ್ ಸಾಲುಂಡಿ)

    MORE
    GALLERIES