ಇದು ಬಾಲಿವುಡ್ ಮಾತ್ರವಲ್ಲದೆ ಕ್ರಿಕೆಟ್ ಲೋಕದಲ್ಲೂ ಮದುವೆ ಸೀಸನ್ ಆಗಿದೆ. ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟಿ ಅವರ ಪುತ್ರಿ ನಟಿ ಆಥಿಯಾ ಶೆಟ್ಟಿ ಕೆಲ ದಿನಗಳ ಹಿಂದೆಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಜನವರಿ 23ರಂದು ಮುಂಬೈನ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ರಾಹುಲ್, ಆಥಿಯಾ ವಿವಾಹ ಕಾರ್ಯಕ್ರಮ ಕುಟುಂಬ ಸದಸ್ಯರು, ಆತ್ಮೀಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದಿತ್ತು.
ಇನ್ನು, ವರ್ಷದ ಆರಂಭದಲ್ಲಿ ಟೀಂ ಇಂಡಿಯಾದ ಮತ್ತೊಬ್ಬ ಸ್ಟಾರ್ ಆಟಗಾರ ಅಕ್ಷರ್ ಪಟೇಲ್, ಗೆಳತಿ ಮೇಹಾ ಪಟೇಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜನವರಿ 26ರಂದು ವಡೋದರಾದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರು ಮಾತ್ರ ಪಾಲ್ಗೊಂಡಿದ್ದರು. ಮದುವೆ ಕಾರಣದಿಂದ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯನ್ನು ಮಿಸ್ ಮಾಡಿಕೊಂಡಿದ್ದರು.
ಉಳಿದಂತೆ ಟೀಂ ಇಂಡಿಯಾ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಮದುವೆ ಕೂಡ ನಿಶ್ಚಿಯವಾಗಿದೆ. ಶಾರ್ದೂಲ್ ಠಾಕೂರ್ರ ನಿಶ್ಚಿತಾರ್ಥ 2021ರ ನವೆಂಬರ್ನಲ್ಲಿ ನಡೆದಿತ್ತು. ಯುವ ಜೋಡಿಯ ಮಡುವೆ ಫೆಬ್ರವರಿ 27 ರಂದು ನಿಗದಿಯಾಗಿದೆ. ಇನ್ನು, ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಟೀಂ ಇಂಡಿಯಾ ಆಟಗಾರರ ಅಕ್ಷರ್ ಪಟೇಲ್, ಮೇಹಾ ಪಾಟೇಲ್ ಹಾಗೂ ಕೆಎಲ್ ರಾಹುಲ್, ಆಥಿಯಾ ಶೆಟ್ಟಿ ಅವರ ಆರತಕ್ಷತೆಯ ಪ್ರತ್ಯೇಕ ಸಮಾರಂಭ ಬಿಡುವಿನ ಸಮಯದಲ್ಲಿ ನಡೆಲಿದ್ದು, ಈ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಪಾಲ್ಗೊಳ್ಳುವ ಸಾಧ್ಯತೆ ಇದೆ.