ODI World Cup 2023: ವಿಶ್ವಕಪ್​ನಿಂದ ಸಂಜು ಸ್ಯಾಮ್ಸನ್​ ಔಟ್​? ರಾಹುಲ್​ ಇನ್​! ಶಾಕಿಂಗ್​ ಹೇಳಿಕೆ ನೀಡಿದ ಸೆಹ್ವಾಗ್​

ODI World Cup 2023: ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನಕ್ಕಾಗಿ ಹಲವು ಆಟಗಾರರ ನಡುವೆ ಕುತೂಹಲಕಾರಿ ಫೈಟ್ ನಡೆಯುತ್ತಿದೆ. ಅದರಲ್ಲೂ ಮಧ್ಯಮ ಕ್ರಮಾಂಕಕ್ಕಾಗಿ ಸಂಜು ಸ್ಯಾಮ್ಸನ್ ಮತ್ತು ರಾಹುಲ್ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ.

First published:

 • 17

  ODI World Cup 2023: ವಿಶ್ವಕಪ್​ನಿಂದ ಸಂಜು ಸ್ಯಾಮ್ಸನ್​ ಔಟ್​? ರಾಹುಲ್​ ಇನ್​! ಶಾಕಿಂಗ್​ ಹೇಳಿಕೆ ನೀಡಿದ ಸೆಹ್ವಾಗ್​

  ಸಂಜು ಸ್ಯಾಮ್ಸನ್‌ಗೆ ಅನ್ಯಾಯವಾಗಲಿದೆ ಎಂದು ಅಭಿಮಾನಿಗಳು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

  MORE
  GALLERIES

 • 27

  ODI World Cup 2023: ವಿಶ್ವಕಪ್​ನಿಂದ ಸಂಜು ಸ್ಯಾಮ್ಸನ್​ ಔಟ್​? ರಾಹುಲ್​ ಇನ್​! ಶಾಕಿಂಗ್​ ಹೇಳಿಕೆ ನೀಡಿದ ಸೆಹ್ವಾಗ್​

  ಈ ವರ್ಷ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ. ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಕೆಲ ಸಮಸ್ಯೆ ಹೊಂದಿದೆ. ಹಲವು ಆಟಗಾರರು ತಂಡ ಸಂಯೋಜನೆಯ ಭಾಗವಾಗಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇದರ ನಡುವೆ ಕೆಎಲ್ ರಾಹುಲ್ ಮತ್ತು ಸಂಜು ಸ್ಯಾಮ್ಸನ್​ ನಡುವೆ ಕುತೂಹಲಕಾರಿ ಹೋರಾಟವಿದೆ.

  MORE
  GALLERIES

 • 37

  ODI World Cup 2023: ವಿಶ್ವಕಪ್​ನಿಂದ ಸಂಜು ಸ್ಯಾಮ್ಸನ್​ ಔಟ್​? ರಾಹುಲ್​ ಇನ್​! ಶಾಕಿಂಗ್​ ಹೇಳಿಕೆ ನೀಡಿದ ಸೆಹ್ವಾಗ್​

  ಸಂಜು ಸ್ಯಾಮ್ಸನ್ ಪ್ರತಿಭೆಯ ಬಗ್ಗೆ ಯಾರಿಗೂ ಅನುಮಾನವಿಲ್ಲ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಪ್ರಸಕ್ತ ಐಪಿಎಲ್ ನಲ್ಲೂ ಉತ್ತಮ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಮತ್ತೊಂದೆಡೆ ಸದ್ಯ ಎಲ್ಲರಿಗಿಂತ ಹೆಚ್ಚು ಟೀಕೆಗೆ ಗುರಿಯಾಗಿರುವ ಆಟಗಾರ ಕೆಎಲ್​ ರಾಹುಲ್.

  MORE
  GALLERIES

 • 47

  ODI World Cup 2023: ವಿಶ್ವಕಪ್​ನಿಂದ ಸಂಜು ಸ್ಯಾಮ್ಸನ್​ ಔಟ್​? ರಾಹುಲ್​ ಇನ್​! ಶಾಕಿಂಗ್​ ಹೇಳಿಕೆ ನೀಡಿದ ಸೆಹ್ವಾಗ್​

  ರಾಹುಲ್ ತಂಡಕ್ಕಾಗಿ ಅಲ್ಲ ವೈಯಕ್ತಿಕ ದಾಖಲೆಗಳಿಗಾಗಿ ಆಡುತ್ತಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಇದರ ನಡುವೆ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಬೇಕು ಎಂದು ಅಭಿಮಾನಿಗಳು ಬೇಡಿಕೆ ಇಡಡುತ್ತಿದ್ದಾರೆ. ಮತ್ತೊಂದೆಡೆ ಟೀಂ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ವೀರೇಂದ್ರ ಸೆಹ್ವಾಗ್ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 57

  ODI World Cup 2023: ವಿಶ್ವಕಪ್​ನಿಂದ ಸಂಜು ಸ್ಯಾಮ್ಸನ್​ ಔಟ್​? ರಾಹುಲ್​ ಇನ್​! ಶಾಕಿಂಗ್​ ಹೇಳಿಕೆ ನೀಡಿದ ಸೆಹ್ವಾಗ್​

  ಸೆಹ್ವಾಗ್ ಈ ಕುರಿತು ಮಾತನಾಡಿದ್ದು, ಸಂಜು ಸ್ಯಾಮ್ಸನ್ ಗಿಂತ ರಾಹುಲ್ ಪರ ಬ್ಯಾಟ್​ ಬೀಸಿದ್ದಾರೆ. ಈ ಮೂಲಕ ರಾಹುಲ್​ ಟೆಸ್ಟ್ ಪಂದ್ಯಗಳಲ್ಲಿ ಹಾಗೂ ವಿವಿಧ ದೇಶಗಳಲ್ಲಿ ಶತಕ ಸಿಡಿಸಿದ್ದಾರೆ. ಟಿ20ಯಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.

  MORE
  GALLERIES

 • 67

  ODI World Cup 2023: ವಿಶ್ವಕಪ್​ನಿಂದ ಸಂಜು ಸ್ಯಾಮ್ಸನ್​ ಔಟ್​? ರಾಹುಲ್​ ಇನ್​! ಶಾಕಿಂಗ್​ ಹೇಳಿಕೆ ನೀಡಿದ ಸೆಹ್ವಾಗ್​

  ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ರಾಹುಲ್ ಸ್ಟ್ರೈಕ್ ರೇಟ್ ಇಲ್ಲದಿದ್ದರೂ ಫಾರ್ಮ್ ನಲ್ಲಿದ್ದಾರೆ. ಅವರ ಬ್ಯಾಟ್​ನಿಂದ ಶತಕಗಳು ಸಿಡಿಯದಿರಬಹುದು. ಆದರೆ ಅವರು ತೀರಾ ಕಳಪೆ ಫಾರ್ಮ್​ನಲ್ಲಿಲ್ಲ ಎಂದಿದ್ದಾರೆ. ಈ ಮೂಲಕ ಮುಂಬರಲಿರುವ ವಿಶ್ವಕಪ್​ನಲ್ಲಿ ರಾಹುಲ್​ಗೆ ಸ್ಥಾನ ನೀಡಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ.

  MORE
  GALLERIES

 • 77

  ODI World Cup 2023: ವಿಶ್ವಕಪ್​ನಿಂದ ಸಂಜು ಸ್ಯಾಮ್ಸನ್​ ಔಟ್​? ರಾಹುಲ್​ ಇನ್​! ಶಾಕಿಂಗ್​ ಹೇಳಿಕೆ ನೀಡಿದ ಸೆಹ್ವಾಗ್​

  ಇನ್ನೊಂದೆಡೆ ಟೀಂ ಇಂಡಿಯಾ ಅಭಿಮಾನಿಗಳು ಸೆಹ್ವಾಗ್ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಗಂಭೀರ್ ಮತ್ತು ರಾಹುಲ್ ಲಕ್ನೋ ಪರವಾಗಿದ್ದಾರೆ..ಗಂಭೀರ್ ಮೇಲಿನ ಪ್ರೀತಿಯಿಂದ ಸೆಹ್ವಾಗ್ ಹೀಗೆ ಹೇಳುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಾದ ಪ್ರತಿವಾದಗಳು ನಡೆಯುತ್ತಿದೆ.

  MORE
  GALLERIES