ಇದೇ ವೇಳೆ ಮಾತನಾಡಿದ ಸೆಹ್ವಾಗ್, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಮ್ಮ ದೇಶದಲ್ಲಿ ಬಹಳ ಪ್ರಸಿದ್ಧವಾದ ಹೆಸರುಗಳು. ಲಕ್ಷಾಂತರ ಮಕ್ಕಳು ಅವರನ್ನು ನೋಡುತ್ತಾರೆ, ಜೊತೆಗೆ ಅವರನ್ನು ತಮ್ಮ ಆದರ್ಶವೆಂದು ಪರಿಗಣಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಮೈದಾನದಲ್ಲಿನ ಈ ರೀತಿಯ ಜಗಳ ಭವಿಷ್ಯದ ಪೀಳಿಗೆಯ ಮೇಲೆ ಉತ್ತಮ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.