ಇಂಡಿಯನ್ ಪ್ರೀಮಿಯರ್ ಲೀಗ್‌ನ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಘಟನೆ ನಡೆದಿದೆ. ಹೀಗಾಗಿ ಆಟಗಾರರ ವಿರುದ್ಧ ದಂಡವನ್ನು ವಿಧಿಸಲಾಗಿದೆ. ಲಕ್ನೋ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಮೈದಾದ್ಲಲಿಯೇ ಜಗಳ ನಡೆದಿರುವುದು ಎಲ್ಲರಿಗೂ ತಿಳಿದ ಸಂಗತಿ.
ಹೀಗಾಗಿ ಕೊಹ್ಲಿ ಮತ್ತು ಗಂಭೀರ್ಗೆ ಪಂದ್ಯದ ಸಂಪೂರ್ಣ ಶುಲ್ಕವನ್ನು ದಂಡವಾಗಿ ವಿಧೀಸಲಾಯಿತು. ಆದರೆ ವಿವಾದಗಳಿಂದ ಸುತ್ತುವರಿದಿರುವ ವಿರಾಟ್ ಕೊಹ್ಲಿ, ಈ ಋತುವಿನಲ್ಲಿ ಮತ್ತೆ ಯಾವುದೇ ಪಂದ್ಯದಲ್ಲಿ ಈ ರೀತಿ ವರ್ತಿಸಿದರೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೌದು, ಲಕ್ನೋದ ಮೆಂಟರ್ ಗೌತಮ್ ಗಂಭೀರ್ ಮತ್ತು ಬೆಂಗಳೂರಿನ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ನೀತಿ ಸಂಹಿತೆಯ ಲೆವೆಲ್ -2 ರ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಯಿತು.
ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಶಿಸ್ತಿನ ಆರೋಪದಿಂದ ಒಂದು ಸೀಸನ್ ಪೂರ್ತಿ ಬ್ಯಾನ್ ಆಗಿದ್ದರು. ತಪ್ಪಿತಸ್ಥರೆಂದು ಸಾಬೀತಾದ ನಂತರ, ಅವರನ್ನು 11 ಪಂದ್ಯಗಳಿಗೆ ನಿಷೇಧಿಸಲಾಯಿತು. ಪಂಜಾಬ್ ಕಿಂಗ್ಸ್ ಇಲೆವೆನ್ (ಈಗ ಪಂಜಾಬ್ ಕಿಂಗ್ಸ್) ಆಟಗಾರ ಎಸ್ ಶ್ರೀಶಾಂತ್ ಅವರೊಂದಿಗೆ ಜಗಳವಾಡಿದ್ದಕ್ಕಾಗಿ ಈ ನಿಷೇಧವನ್ನು ವಿಧಿಸಲಾಗಿತ್ತು. ಆಟಗಾರ ಅಥವಾ ತಂಡವು ಮೂರಕ್ಕಿಂತ ಹೆಚ್ಚು ಬಾರಿ ನಿಯಮವನ್ನು ಉಲ್ಲಂಘಿಸಿದರೆ, ನಂತರ 1 ವರ್ಷದವರೆಗೆ ನಿಷೇಧವನ್ನು ವಿಧಿಸಬಹುದು.