WTC Final 2023: ನಾಯಕನನ್ನೇ ಬಿಟ್ಟು ಇಂಗ್ಲೆಂಡ್‌ಗೆ ಹಾರಿದ ಟೀಂ ಇಂಡಿಯಾ! ಯಾರೆಲ್ಲಾ ಲಂಡನ್ ಫ್ಲೈಟ್​ ಹತ್ತಿದ್ದಾರೆ ನೋಡಿ

WTC Final 2023: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೂಲಗಳು ತಿಳಿಸಿದ ಪ್ರಕಾರ, ಆಟಗಾರರು ಎರಡು ಅಥವಾ ಮೂರು ಬ್ಯಾಚ್‌ಗಳಲ್ಲಿ ಇಂಗ್ಲೆಂಡ್‌ಗೆ ತಲುಪುತ್ತಾರೆ. ಈಗಾಗಲೇ ಒಂದು ಬ್ಯಾಚ್​ ತಲುಪಿದೆ.

First published:

  • 17

    WTC Final 2023: ನಾಯಕನನ್ನೇ ಬಿಟ್ಟು ಇಂಗ್ಲೆಂಡ್‌ಗೆ ಹಾರಿದ ಟೀಂ ಇಂಡಿಯಾ! ಯಾರೆಲ್ಲಾ ಲಂಡನ್ ಫ್ಲೈಟ್​ ಹತ್ತಿದ್ದಾರೆ ನೋಡಿ

    ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC Final) ಫೈನಲ್ ಜೂನ್ 7 ರಿಂದ 11ರ ವರೆಗೆ ಲಂಡನ್‌ನ ಓವಲ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಭಾರತದ ಆಟಗಾರರು ಎರಡು ಅಥವಾ ಮೂರು ಬ್ಯಾಚ್‌ಗಳಲ್ಲಿ ಇಂಗ್ಲೆಂಡ್ ತಲುಪಲಿದ್ದಾರೆ.

    MORE
    GALLERIES

  • 27

    WTC Final 2023: ನಾಯಕನನ್ನೇ ಬಿಟ್ಟು ಇಂಗ್ಲೆಂಡ್‌ಗೆ ಹಾರಿದ ಟೀಂ ಇಂಡಿಯಾ! ಯಾರೆಲ್ಲಾ ಲಂಡನ್ ಫ್ಲೈಟ್​ ಹತ್ತಿದ್ದಾರೆ ನೋಡಿ

    ಮೊದಲ ಬ್ಯಾಚ್ ಮಂಗಳವಾರ (ಮೇ 23) ಮುಂಜಾನೆ ಹೊರಟಿದೆ. ಇದರಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಐಪಿಎಲ್ 2023ರ ಪ್ಲೇಆಫ್ ರೇಸ್‌ನಿಂದ ಆರ್​ಸಿಬಿ ಹೊರಬಿದ್ದ ನಂತರ ಕೊಹ್ಲಿ ಟೀಂ ಇಂಡಿಯಾ ಜೊತೆ ಸೇರಿಕೊಂಡಿದ್ದಾರೆ. (ಟ್ವಿಟರ್​ ಫೋಟೋ)

    MORE
    GALLERIES

  • 37

    WTC Final 2023: ನಾಯಕನನ್ನೇ ಬಿಟ್ಟು ಇಂಗ್ಲೆಂಡ್‌ಗೆ ಹಾರಿದ ಟೀಂ ಇಂಡಿಯಾ! ಯಾರೆಲ್ಲಾ ಲಂಡನ್ ಫ್ಲೈಟ್​ ಹತ್ತಿದ್ದಾರೆ ನೋಡಿ

    ಇದರ ಜೊತೆ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ಕೊಹ್ಲಿ ಕೂಡ ಮೊದಲ ಬ್ಯಾಚ್ ನಲ್ಲಿ ಇಂಗ್ಲೆಂಡ್ ತಲುಪಲಿದ್ದಾರೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಕೂಡ ಲಂಡನ್ ತಲುಪಲಿದ್ದಾರೆ.

    MORE
    GALLERIES

  • 47

    WTC Final 2023: ನಾಯಕನನ್ನೇ ಬಿಟ್ಟು ಇಂಗ್ಲೆಂಡ್‌ಗೆ ಹಾರಿದ ಟೀಂ ಇಂಡಿಯಾ! ಯಾರೆಲ್ಲಾ ಲಂಡನ್ ಫ್ಲೈಟ್​ ಹತ್ತಿದ್ದಾರೆ ನೋಡಿ

    ಇವರುಗಳೊಂದಿಗೆ ಇಂಗ್ಲೆಂಡ್‌ಗೆ ತೆರಳುವ ಮೊದಲ ಬ್ಯಾಚ್‌ನಲ್ಲಿ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಮತ್ತು ಆಲ್‌ರೌಂಡರ್ ಶಾರ್ದೂಲ್ ಠಾಕೂರ್, ರಾಹುಲ್ ದ್ರಾವಿಡ್ ನೇತೃತ್ವದ ಸಹಾಯಕ ಸಿಬ್ಬಂದಿ ಸೇರಿದ್ದಾರೆ. WTC ಫೈನಲ್ ಜೂನ್ 7 ರಿಂದ 11 ರವರೆಗೆ ಓವಲ್‌ನಲ್ಲಿ ನಡೆಯಲಿದೆ.

    MORE
    GALLERIES

  • 57

    WTC Final 2023: ನಾಯಕನನ್ನೇ ಬಿಟ್ಟು ಇಂಗ್ಲೆಂಡ್‌ಗೆ ಹಾರಿದ ಟೀಂ ಇಂಡಿಯಾ! ಯಾರೆಲ್ಲಾ ಲಂಡನ್ ಫ್ಲೈಟ್​ ಹತ್ತಿದ್ದಾರೆ ನೋಡಿ

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೂಲಗಳು ತಿಳಿಸಿದ ಪ್ರಕಾರ, ಆಟಗಾರರು ಎರಡು ಅಥವಾ ಮೂರು ಬ್ಯಾಚ್‌ಗಳಲ್ಲಿ ಇಂಗ್ಲೆಂಡ್‌ಗೆ ತಲುಪುತ್ತಾರೆ. ಈಗಾಗಲೇ ಒಂದು ಬ್ಯಾಚ್​ ತಲುಪಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ಲೇ ಆಫ್‌ಗೆ ತಲುಪಿರುವ ಆಟಗಾರರು ನಂತರ ಇಂಗ್ಲೆಂಡ್‌ಗೆ ತಲುಪುತ್ತಾರೆ.

    MORE
    GALLERIES

  • 67

    WTC Final 2023: ನಾಯಕನನ್ನೇ ಬಿಟ್ಟು ಇಂಗ್ಲೆಂಡ್‌ಗೆ ಹಾರಿದ ಟೀಂ ಇಂಡಿಯಾ! ಯಾರೆಲ್ಲಾ ಲಂಡನ್ ಫ್ಲೈಟ್​ ಹತ್ತಿದ್ದಾರೆ ನೋಡಿ

    ಈ ಆಟಗಾರರಲ್ಲಿ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಕೆಎಸ್ ಭರತ್ ಮತ್ತು ಅಜಿಂಕ್ಯ ರಹಾನೆ ಸೇರಿದ್ದಾರೆ ಎಂದು ಬಿಸಿಸಿಐ ಮೂಳಗಳು ತಿಳಿಸಿದೆ. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಈಗಾಗಲೇ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ.

    MORE
    GALLERIES

  • 77

    WTC Final 2023: ನಾಯಕನನ್ನೇ ಬಿಟ್ಟು ಇಂಗ್ಲೆಂಡ್‌ಗೆ ಹಾರಿದ ಟೀಂ ಇಂಡಿಯಾ! ಯಾರೆಲ್ಲಾ ಲಂಡನ್ ಫ್ಲೈಟ್​ ಹತ್ತಿದ್ದಾರೆ ನೋಡಿ

    ಎರಡು ತಿಂಗಳ ಕಾಲ ಐಪಿಎಲ್‌ನಲ್ಲಿ ಆಡಿದ ನಂತರ ಭಾರತದ ಹೆಚ್ಚಿನ ಆಟಗಾರರು ಡಬ್ಲ್ಯುಟಿಸಿ ಫೈನಲ್‌ಗೆ ಬರುತ್ತಿದ್ದಾರೆ. ಆದರೆ ಈ ನಿರ್ಣಾಯಕ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡದಲ್ಲಿರುವ ಮೂವರು ಆಟಗಾರರು ಮಾತ್ರ ಟಿ 20 ಲೀಗ್‌ನಲ್ಲಿ ಆಡುತ್ತಿದ್ದರು. ಭಾರತವು 2021 ರಲ್ಲಿ WTC ನಲ್ಲಿ ರನ್ನರ್ ಅಪ್ ಆಗಿತ್ತು. ಕಳೆದ 10 ವರ್ಷಗಳಲ್ಲಿ ಮೊದಲ ಐಸಿಸಿ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಮೈದಾನಕ್ಕಿಳಿಯುತ್ತಿದೆ.

    MORE
    GALLERIES