Virat Kohli: ರಾಹುಲ್​ ರೀತಿ ಕೊಹ್ಲಿಯನ್ನೂ ತಂಡದಿಂದ ಕೈಬಿಡಬೇಕು! ವಿರಾಟ್​ಗೆ ಇದೇ ಲಾಸ್ಟ್​​ ಚಾನ್ಸ್​

IND vs AUS Test: ವಿರಾಟ್ ಕೊಹ್ಲಿ ಕೆಲವು ಸಮಯದಿಂದ ಟೀಮ್ ಇಂಡಿಯಾದಲ್ಲಿ ಪ್ರಮುಖ ಆಟಗಾರರಾಗಿದ್ದಾರೆ. ಆದರೆ ಅವರು ಕಳೆದ ಕೆಲ ವರ್ಷದಿಂದ ಟೆಸ್ಟ್​​ ಕ್ರಿಕೆಟ್​ನಲ್ಲಿ ಸ್ಥಿರ ಪಙ್ರದರ್ಶನ ನೀಡುತ್ತಿಲ್ಲ.

First published:

  • 18

    Virat Kohli: ರಾಹುಲ್​ ರೀತಿ ಕೊಹ್ಲಿಯನ್ನೂ ತಂಡದಿಂದ ಕೈಬಿಡಬೇಕು! ವಿರಾಟ್​ಗೆ ಇದೇ ಲಾಸ್ಟ್​​ ಚಾನ್ಸ್​

    ಸತತ ವೈಫಲ್ಯ ಅನುಭವಿಸುತ್ತಿರುವ ಕೆಎಲ್ ರಾಹುಲ್ ಅವರನ್ನು ಮೂರನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ. ಅವರ ಬದಲಿಗೆ ಶುಭಮನ್ ಗಿಲ್‌ಗೆ ಅವಕಾಶ ನೀಡಲಾಯಿತು. ಬ್ಯಾಟಿಂಗ್‌ಗೆ ಕಷ್ಟವಾಗಿದ್ದ ಪಿಚ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರದ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ವಿಫಲರಾದರು.

    MORE
    GALLERIES

  • 28

    Virat Kohli: ರಾಹುಲ್​ ರೀತಿ ಕೊಹ್ಲಿಯನ್ನೂ ತಂಡದಿಂದ ಕೈಬಿಡಬೇಕು! ವಿರಾಟ್​ಗೆ ಇದೇ ಲಾಸ್ಟ್​​ ಚಾನ್ಸ್​

    ವಿರಾಟ್ ಕೊಹ್ಲಿ ಕೆಲವು ಸಮಯದಿಂದ ಟೀಂ ಇಂಡಿಯಾದಲ್ಲಿ ಪ್ರಮುಖ ಆಟಗಾರರಾಗಿದ್ದಾರೆ. 2019 ಮತ್ತು 2022ರ ನಡುವೆ (ಸೆಪ್ಟೆಂಬರ್ ವರೆಗೆ) ಅವರು ತಮ್ಮ ವೃತ್ತಿಜೀವನದಲ್ಲಿ ಕರಾಳ ದಿನಗಳನ್ನು ಕಳೆದರು. ಆದರೆ ಕಳೆದ ವರ್ಷದ ಏಷ್ಯಾಕಪ್ ಬಳಿಕ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಫಾರ್ಮ್​ಗೆ ಮರಳಿದ್ದಾರೆ.

    MORE
    GALLERIES

  • 38

    Virat Kohli: ರಾಹುಲ್​ ರೀತಿ ಕೊಹ್ಲಿಯನ್ನೂ ತಂಡದಿಂದ ಕೈಬಿಡಬೇಕು! ವಿರಾಟ್​ಗೆ ಇದೇ ಲಾಸ್ಟ್​​ ಚಾನ್ಸ್​

    ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಟೆಸ್ಟ್ ವಿಷಯಕ್ಕೆ ಬಂದರೆ ಸಂಪೂರ್ಣ ವಿಫಲವಾಗುತ್ತಿದ್ದಾರೆ. 2019ರಲ್ಲಿ ಕೊನೆಯ ಬಾರಿಗೆ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಕೊಹ್ಲಿಗೆ ಮತ್ತೆ ಆ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.

    MORE
    GALLERIES

  • 48

    Virat Kohli: ರಾಹುಲ್​ ರೀತಿ ಕೊಹ್ಲಿಯನ್ನೂ ತಂಡದಿಂದ ಕೈಬಿಡಬೇಕು! ವಿರಾಟ್​ಗೆ ಇದೇ ಲಾಸ್ಟ್​​ ಚಾನ್ಸ್​

    ಕಳೆದ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ವಿಫಲರಾಗಿದ್ದರು. ಅದರ ನಂತರ, ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ನಲ್ಲಿ ಅವರು ಹೆಚ್ಚು ಪ್ರಭಾವ ಬೀರಲಿಲ್ಲ. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ವಿಫಲರಾಗಿದ್ದರು.

    MORE
    GALLERIES

  • 58

    Virat Kohli: ರಾಹುಲ್​ ರೀತಿ ಕೊಹ್ಲಿಯನ್ನೂ ತಂಡದಿಂದ ಕೈಬಿಡಬೇಕು! ವಿರಾಟ್​ಗೆ ಇದೇ ಲಾಸ್ಟ್​​ ಚಾನ್ಸ್​

    ಇತ್ತೀಚಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಕೊನೆಯ 20 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಸರಾಸರಿ 25 ಆಗಿದೆ. ಒಂದೇ ಬಾರಿ 50 ರನ್‌ಗಳ ಗಡಿ ದಾಟಿಲ್ಲ.

    MORE
    GALLERIES

  • 68

    Virat Kohli: ರಾಹುಲ್​ ರೀತಿ ಕೊಹ್ಲಿಯನ್ನೂ ತಂಡದಿಂದ ಕೈಬಿಡಬೇಕು! ವಿರಾಟ್​ಗೆ ಇದೇ ಲಾಸ್ಟ್​​ ಚಾನ್ಸ್​

    ಏಕದಿನ ಹಾಗೂ ಟಿ20ಯಲ್ಲಿ ಫಾರ್ಮ್ ಗೆ ಬಂದಿರುವ ಕೊಹ್ಲಿಗೆ ಟೆಸ್ಟ್ ನಲ್ಲಿ ಮೊದಲಿನಂತೆ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ಆ ಮೂಲಕ ಕೊಹ್ಲಿ ಆಯ್ಕೆ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

    MORE
    GALLERIES

  • 78

    Virat Kohli: ರಾಹುಲ್​ ರೀತಿ ಕೊಹ್ಲಿಯನ್ನೂ ತಂಡದಿಂದ ಕೈಬಿಡಬೇಕು! ವಿರಾಟ್​ಗೆ ಇದೇ ಲಾಸ್ಟ್​​ ಚಾನ್ಸ್​

    ಕೆಲವರು ಕೊಹ್ಲಿಯನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಕೊಹ್ಲಿಯನ್ನು ಟೆಸ್ಟ್ ತಂಡದಿಂದ ತೆಗೆದುಹಾಕುವಂತೆ ನಿರ್ಧರಿಸಿದ್ದಾರೆ. ರಾಹುಲ್ ಅವರನ್ನು ಕೊಹ್ಲಿಯನ್ನು ಸೈಡ್ ಲೈನ್ ಮಾಡಬೇಕು ಎಂದು ಹಲವರು ಹೇಳುತ್ತಿದ್ದಾರೆ.

    MORE
    GALLERIES

  • 88

    Virat Kohli: ರಾಹುಲ್​ ರೀತಿ ಕೊಹ್ಲಿಯನ್ನೂ ತಂಡದಿಂದ ಕೈಬಿಡಬೇಕು! ವಿರಾಟ್​ಗೆ ಇದೇ ಲಾಸ್ಟ್​​ ಚಾನ್ಸ್​

    ಅಹಮದಾಬಾದ್ ನಲ್ಲಿ ನಡೆಯಲಿರುವ 4ನೇ ಟೆಸ್ಟ್ ಕೊಹ್ಲಿ ಪಾಲಿಗೆ ಅಗ್ನಿ ಪರೀಕ್ಷೆಯಂತಾಗಿದೆ ಎಂದು ಹೇಳಬಹುದು. ಇದರಲ್ಲಿಯೂ ಅವರು ವಿಫಲರಾದರೆ ಅವರನ್ನು ಟೆಸ್ಟ್‌ನಿಂದ ತೆಗೆದುಹಾಕಬೇಕು ಅಥವಾ ವಿಶ್ರಾಂತಿ ನೀಡಬೇಕು ಎಂದು ಅನೇಕ ಹಿರಿಯ ಕ್ರಿಕೆಟಿಗರು ಹೇಳುತ್ತಿದ್ದಾರೆ.

    MORE
    GALLERIES