Virat Kohli: ಎಲ್ಲರೂ ಕೊಹ್ಲಿಯಾಗಲು ಸಾಧ್ಯವಿಲ್ಲ! ಯುವ ಆಟಗಾರರಿಗೆ ಹೀಗಂದಿದ್ದೇಕೆ ಕ್ರೀಡಾ ತಜ್ಞರು?

Virat Kohli: ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ಆಟಗಾರರು ಗಾಯಗಳಿಂದ ಬಳಲುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಈಗಾಗಲೇ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ.

First published:

 • 19

  Virat Kohli: ಎಲ್ಲರೂ ಕೊಹ್ಲಿಯಾಗಲು ಸಾಧ್ಯವಿಲ್ಲ! ಯುವ ಆಟಗಾರರಿಗೆ ಹೀಗಂದಿದ್ದೇಕೆ ಕ್ರೀಡಾ ತಜ್ಞರು?

  ಹಲವು ವರ್ಷಗಳಿಂದ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ದೀಪಕ್ ಚಹಾರ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕುಲದೀಪ್ ಯಾದವ್ ಹೀಗಾಗಿ ಆಟಗಾರರು ಗಾಯಗಳಿಂದಾಗಿ ತಂಡದಿಂದ ಹೊರಗುಳಿಯುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಆಟಗಾರರು ಮತ್ತೆ ಗಾಯಗೊಳ್ಳುತ್ತಿದ್ದಾರೆ.

  MORE
  GALLERIES

 • 29

  Virat Kohli: ಎಲ್ಲರೂ ಕೊಹ್ಲಿಯಾಗಲು ಸಾಧ್ಯವಿಲ್ಲ! ಯುವ ಆಟಗಾರರಿಗೆ ಹೀಗಂದಿದ್ದೇಕೆ ಕ್ರೀಡಾ ತಜ್ಞರು?

  ಐಪಿಎಲ್ 2023ರ ಋತುವಿನ ನಂತರ, ಟೀಂ ಇಂಡಿಯಾ WTC ಫೈನಲ್ ಆಡಲು ಇಂಗ್ಲೆಂಡ್​ಗೆ ಪ್ರಯಾಣಿಸಲಿದೆ. ಆದರೆ, ಈ ಮೆಗಾ ಫೈಟ್‌ಗೆ ಆಯ್ಕೆಯಾಗಿರುವ ತಂಡದ ಬಹುತೇಕ ಆಟಗಾರರು ಈಗ ಗಾಯದಿಂದ ಬಳಲುತ್ತಿದ್ದಾರೆ. ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಜಯದೇವ್ ಉನದ್ಕತ್ ಮತ್ತು ಉಮೇಶ್ ಯಾದವ್ ಕೂಡ ಗಾಯಗಳಿಂದ ಬಳಲುತ್ತಿದ್ದಾರೆ.

  MORE
  GALLERIES

 • 39

  Virat Kohli: ಎಲ್ಲರೂ ಕೊಹ್ಲಿಯಾಗಲು ಸಾಧ್ಯವಿಲ್ಲ! ಯುವ ಆಟಗಾರರಿಗೆ ಹೀಗಂದಿದ್ದೇಕೆ ಕ್ರೀಡಾ ತಜ್ಞರು?

  ಇತ್ತೀಚೆಗೆ ಟೀಂ ಇಂಡಿಯಾ ಆಟಗಾರರು ಗಾಯಗಳಿಂದ ಬಳಲುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ರಿಷಭ್​ ಪಂತ್ ಈಗಾಗಲೇ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ರಿಷಭ್ ಪಂತ್ ಗಾಯಗೊಂಡಿರುವ ರೀತಿ ವಿಭಿನ್ನವಾಗಿದೆ.

  MORE
  GALLERIES

 • 49

  Virat Kohli: ಎಲ್ಲರೂ ಕೊಹ್ಲಿಯಾಗಲು ಸಾಧ್ಯವಿಲ್ಲ! ಯುವ ಆಟಗಾರರಿಗೆ ಹೀಗಂದಿದ್ದೇಕೆ ಕ್ರೀಡಾ ತಜ್ಞರು?

  ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಫಿಟ್‌ನೆಸ್ ಅನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ವಿಶ್ವ ಕ್ರಿಕೆಟ್‌ನ ಫಿಟೆಸ್ಟ್ ಆಟಗಾರರ ಪಟ್ಟಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಫಿಟ್‌ನೆಸ್‌ಗಾಗಿ ಕೊಹ್ಲಿ ಜಿಮ್‌ನಲ್ಲಿ ಸಾಕಷ್ಟು ವರ್ಕೋಟ್​ ಮಾಡುತ್ತಾರೆ.

  MORE
  GALLERIES

 • 59

  Virat Kohli: ಎಲ್ಲರೂ ಕೊಹ್ಲಿಯಾಗಲು ಸಾಧ್ಯವಿಲ್ಲ! ಯುವ ಆಟಗಾರರಿಗೆ ಹೀಗಂದಿದ್ದೇಕೆ ಕ್ರೀಡಾ ತಜ್ಞರು?

  ಕೊಹ್ಲಿ ಎಷ್ಟು ಫಿಟ್ ಆಗಿದ್ದಾರೆ ಎಂದರೆ ಮೈದಾನದಲ್ಲಿ ಸಕ್ರಿಯವಾಗಿರುತ್ತಾರೆ. ಎಲ್ಲರೂ ಅವರನ್ನು ಕ್ರಿಕೆಟ್‌ನ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು ಎಂದು ಕರೆಯುತ್ತಾರೆ. ಬ್ಯಾಟಿಂಗ್ ಮಾಡುವಾಗ ಕೊಹ್ಲಿ ರನ್ ಔಟ್ ಆಗುವುದು ಬಹುತೇಕ ಅಸಾಧ್ಯ. ಏಕೆಂದರೆ ಅವರು ಕಾಯ್ದುಕೊಳ್ಳುವ ಫಿಟ್‌ನೆಸ್ ಮಟ್ಟದಿಂದಾಗಿ ಕೊಹ್ಲಿ ವಿಕೆಟ್‌ಗಳ ನಡುವೆ ಅತ್ಯಂತ ವೇಗವಾಗಿ ಓಡುತ್ತಾರೆ. ರನ್ ತೆಗೆದುಕೊಳ್ಳುವಾಗ ಅವರು ಗಂಟೆಗೆ 33 ಕಿಮೀ ವೇಗದಲ್ಲಿ ಓಡುತ್ತಾರೆ.

  MORE
  GALLERIES

 • 69

  Virat Kohli: ಎಲ್ಲರೂ ಕೊಹ್ಲಿಯಾಗಲು ಸಾಧ್ಯವಿಲ್ಲ! ಯುವ ಆಟಗಾರರಿಗೆ ಹೀಗಂದಿದ್ದೇಕೆ ಕ್ರೀಡಾ ತಜ್ಞರು?

  ಕಳೆದ 8 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಅವರ ತೂಕ 74.5 ರಿಂದ 75 ಕೆಜಿ ನಡುವೆ ಇದೆ. 8 ವರ್ಷಗಳಿಂದ ತೂಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದರೆ ಕೊಹ್ಲಿ ಎಷ್ಟು ಫಿಟ್‌ನೆಸ್ ಮಟ್ಟವನ್ನು ಕಾಯ್ದುಕೊಳ್ಳುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ವಿರಾಟ್ ಕೊಹ್ಲಿ ಫಿಟ್ನೆಸ್ ವಿಷಯದಲ್ಲಿ ಒಂದು ಮಾನದಂಡವನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ.

  MORE
  GALLERIES

 • 79

  Virat Kohli: ಎಲ್ಲರೂ ಕೊಹ್ಲಿಯಾಗಲು ಸಾಧ್ಯವಿಲ್ಲ! ಯುವ ಆಟಗಾರರಿಗೆ ಹೀಗಂದಿದ್ದೇಕೆ ಕ್ರೀಡಾ ತಜ್ಞರು?

  ಹೀಗಾಗಿ ಕೊಹ್ಲಿಯನ್ನು ನೋಡಿದ ಯುವ ಆಟಗಾರರು ಕೂಡ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೆ ಫಿಟ್ನೆಸ್ ಕೊಹ್ಲಿಯ ಜೀವನದ ಒಂದು ಭಾಗವಾಗಿದೆ. ಕೊಹ್ಲಿ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಇಷ್ಟದ ಊಟವನ್ನೂ ಬಿಟ್ಟಿದ್ದಾರೆ.

  MORE
  GALLERIES

 • 89

  Virat Kohli: ಎಲ್ಲರೂ ಕೊಹ್ಲಿಯಾಗಲು ಸಾಧ್ಯವಿಲ್ಲ! ಯುವ ಆಟಗಾರರಿಗೆ ಹೀಗಂದಿದ್ದೇಕೆ ಕ್ರೀಡಾ ತಜ್ಞರು?

  ವಿರಾಟ್ ಕೊಹ್ಲಿ ಜಿಮ್‌ನಲ್ಲಿ ಭಾರ ಎತ್ತುತ್ತಾರೆ. ಫಿಟ್ ಆಗಿರುವಾಗಲೇ ವರ್ಷಗಟ್ಟಲೆ ಕ್ರಿಕೆಟ್ ಆಡುತ್ತಿದ್ದು, ಎಲ್ಲರೂ ಅವರಂತೆಯೇ ವೇಟ್ ಲಿಫ್ಟಿಂಗ್ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಎಲ್ಲರೂ ವಿರಾಟ್ ಕೊಹ್ಲಿ ಆಗಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಬುಮ್ರಾ ಮತ್ತು ದೀಪಕ್ ಚಹಾರ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ಅನೇಕ ಹಿರಿಯ ಕ್ರಿಕೆಟಿಗರು ಹೇಳುತ್ತಿದ್ದಾರೆ.

  MORE
  GALLERIES

 • 99

  Virat Kohli: ಎಲ್ಲರೂ ಕೊಹ್ಲಿಯಾಗಲು ಸಾಧ್ಯವಿಲ್ಲ! ಯುವ ಆಟಗಾರರಿಗೆ ಹೀಗಂದಿದ್ದೇಕೆ ಕ್ರೀಡಾ ತಜ್ಞರು?

  ಇದೇ ಕಾರಣಕ್ಕೆ ಕೆಎಲ್ ರಾಹುಲ್ ಕೂಡ ಪದೇ ಪದೇ ಗಾಯಗೊಳ್ಳುತ್ತಿದ್ದಾರೆ. ಈಗಲಾದರೂ.. ಕೊಹ್ಲಿಗೆ ಪೈಪೋಟಿ ನೀಡದೇ ಇದ್ದರೆ ಒಳ್ಳೆಯದು. ಕೊಹ್ಲಿ ಮತ್ತು ಫಿಟ್ನೆಸ್ ಬೇರ್ಪಡಿಸಲು ಸಾಧ್ಯವಿಲ್ಲ. ಹಾಗಾಗಿ ಕೊಹ್ಲಿಯನ್ನು ಹಿಂಬಾಲಿಸಿ ಗಾಯ ಮಾಡಿಕೊಳ್ಳದೆ ಇರುವುದು ಉತ್ತಮ ಎಂದು ಕ್ರೀಡಾ ಪಂಡಿತರು ಯುವ ಆಟಗಾರರಿಗೆ ಸಲಹೆ ನೀಡಿದ್ದಾರೆ,.

  MORE
  GALLERIES