Virat Kohli: ಒಂದು ವರ್ಷಕ್ಕೆ ಕೊಹ್ಲಿ-ಅನುಷ್ಕಾ ಜೋಡಿ ಗಳಿಸುವ ಆದಾಯ ಎಷ್ಟು ಗೊತ್ತೇ?
ಐಪಿಎಲ್ನಲ್ಲಿ ಆರ್ಸಿಬಿ ತಂಡದಿಂದ ಕೊಹ್ಲಿ ಪ್ರತಿ ವರ್ಷ 17 ಕೋಟಿ ರೂ. ಪಡೆಯುತ್ತಿದ್ದಾರೆ. ಬಿಸಿಸಿಐ ವಾರ್ಷಿಕ ಗುತ್ತಿಗೆ 7 ಕೋಟಿ. ಇದರ ಜೊತೆಗೆ ಪುಮಾ 5 ವರ್ಷಕ್ಕೆ 100 ಕೋಟಿ ರೂಪಾಯಿ ಕೊಹ್ಲಿಗೆ ನೀಡುತ್ತಿದೆ.
ವಿರಾಟ್ ಕೊಹ್ಲಿ ಏಕದಿನ, ಟೆಸ್ಟ್ ಕ್ರಿಕೆಟ್ನ ನಂಬರ್ 1 ಬ್ಯಾಟ್ಸ್ಮನ್ ಆದರೆ, ಅನುಷ್ಕಾ ಶರ್ಮಾ ಬಾಲಿವುಡ್ ಟಾಪ್ ನಟಿಯರಲ್ಲಿ ಪ್ರಮುಖರು.
4/ 12
ಅಷ್ಟೇ ಅಲ್ಲದೆ ಸದ್ಯ ವಿರುಷ್ಕಾ ಜೋಡಿ ಭಾರತದ ಶ್ರೀಮಂತ ಕಪಲ್ಸ್ ಕೂಡ ಹೌದು.
5/ 12
ವಿರಾಟ್ ಕೊಹ್ಲಿ ಸದ್ಯ ಒಂದು ವರ್ಷಕ್ಕೆ ಬರೋಬ್ಬರಿ 252.72 ಕೋಟಿ ರೂ. ಆದಾಯ ಗಳಿಸುತ್ತಾರಂತೆ. ಬಿಸಿಸಿಐ ಗುತ್ತಿಗೆ, ಪಂದ್ಯದ ಸಂಭಾವನೆ, ಐಪಿಎಲ್, ಜಾಹೀರಾತು, ಎಂಡೋರ್ಸ್ಮೆಂಟ್, ರೆಸ್ಟೋರೆಂಟ್ಗಳಿಂದ ಕೊಹ್ಲಿ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ.
6/ 12
ಕೊಹ್ಲಿಯ ಒಟ್ಟು ಆದಾಯ 900 ಕೋಟಿ ರೂಪಾಯಿ ಆಗಿದೆ. ಹೆಂಡತಿ ಅನುಷ್ಕಾ ಶರ್ಮಾ ಅವರು ಕಳೆದ ವರ್ಷ 28. 67 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಅನುಷ್ಕಾ ಒಟ್ಟು ಆದಾಯ 350 ಕೋಟಿ.
7/ 12
ಈ ಮೂಲಕ ಕೊಹ್ಲಿ ಹಾಗೂ ಅನುಷ್ಕಾ ಜೋಡಿಯ ಒಟ್ಟು ಆದಾಯ ವರ್ಷಕ್ಕೆ 1200 ಕೋಟಿ ರೂಪಾಯಿಗಿಂತಲೂ ಅಧಿಕವಾಗಿದೆ.
8/ 12
ಐಪಿಎಲ್ನಲ್ಲಿ ಆರ್ಸಿಬಿ ತಂಡದಿಂದ ಕೊಹ್ಲಿ ಪ್ರತಿ ವರ್ಷ 17 ಕೋಟಿ ರೂ. ಪಡೆಯುತ್ತಿದ್ದಾರೆ. ಬಿಸಿಸಿಐ ವಾರ್ಷಿಕ ಗುತ್ತಿಗೆ 7 ಕೋಟಿ. ಇದರ ಜೊತೆಗೆ ಪುಮಾ 5 ವರ್ಷಕ್ಕೆ 100 ಕೋಟಿ ರೂಪಾಯಿ ಕೊಹ್ಲಿಗೆ ನೀಡುತ್ತಿದೆ.
9/ 12
ಇದನ್ನ ಬಿಟ್ಟರೆ ಮಿಂತ್ರ, ಉಬರ್, ಆಡಿ, MRF, ಮಾನ್ಯಾವರ್, ಟಿಸ್ಸಾಟ್ ಸೇರಿದಂತೆ ಹಲವು ಬ್ರ್ಯಾಂಡ್ ರಾಯಭಾರಿಯಾಗಿಯೂ ಕೊಹ್ಲಿ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ.
10/ 12
ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಪ್ರತಿ ಚಿತ್ರಕ್ಕೆ ಸುಮಾರು 12-15 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ತಮ್ಮದೇ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆ ಕೂಡ ಹೊಂದಿದ್ದಾರೆ. ಜೊತೆಗೆ ಜಾಹೀರಾತುಗಳಿಂದಲೂ ಅನುಷ್ಕಾ ಆದಾಯ ಗಳಿಸುತ್ತಿದ್ದಾರೆ.
11/ 12
2017, ಡಿಸೆಂಬರ್ 11 ರಂದು ವಿರಾಟ್ ಹಾಗೂ ಅನುಷ್ಕಾ ಇಟಲಿಯಲ್ಲಿ ಸಪ್ತಪದಿ ತುಳಿದ ನಂತರ ಮುಂಬೈನ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದಾರೆ.
12/ 12
ವಿರುಷ್ಕಾ ಜೋಡಿ ಪ್ರೀತಿಯಿಂದ ಆರಿಸಿದ ಮನೆಗೆ ತಿಂಗಳಿಗೆ 15 ಲಕ್ಷ ರೂ. ಬಾಡಿಗೆ ಇದೆಯಂತೆ. ಅಲ್ಲದೆ ಡೆಪಾಸಿಟ್ ಆಗಿ 1.50 ಕೋಟಿ ರೂ. ಕೊಟ್ಟಿದ್ದಾರಂತೆ.