Virat Kohli: 4 ವರ್ಷಗಳ ಬಳಿಕ ಶತಕ ಸಿಡಿಸಿ ಅಬ್ಬರಿಸಿದ ಕಿಂಗ್​ ಕೊಹ್ಲಿ, ಹೊಸ ಇತಿಹಾಸ ನಿರ್ಮಿಸಿದ ವಿರಾಟ್

Virat Kohli Century: ಏಷ್ಯಾಕಪ್​ನಿಂದ ಸತತ ಶತಕ ಸಿಡಿಸುತ್ತಿರುವ ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ20 ಮಾದರಿಯಲ್ಲಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿನ ಸಂಚುರಿ ಬಳಿಕ ಇದೀಗ ಆರ್​ಸಿಬಿ ತಂಡದ ಮಹತ್ವದ ಪಂದ್ಯದಲ್ಲಿ ಐಪಿಎಲ್​ನಲ್ಲಿಯೂ ಶತಕ ಸಿಡಿಸಿದರು.

First published:

  • 17

    Virat Kohli: 4 ವರ್ಷಗಳ ಬಳಿಕ ಶತಕ ಸಿಡಿಸಿ ಅಬ್ಬರಿಸಿದ ಕಿಂಗ್​ ಕೊಹ್ಲಿ, ಹೊಸ ಇತಿಹಾಸ ನಿರ್ಮಿಸಿದ ವಿರಾಟ್

    ಆರ್​ಸಿಬಿ 19.2 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 187 ರನ್​ ಗಳಿಸುವ ಮೂಲಕ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಆರ್​ಸಿಬಿ ಪ್ಲೇಆಫ್​ ಹಂತಕ್ಕೆ ಸನಿಹವಾಗಿದ್ದಲ್ಲದೇ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.

    MORE
    GALLERIES

  • 27

    Virat Kohli: 4 ವರ್ಷಗಳ ಬಳಿಕ ಶತಕ ಸಿಡಿಸಿ ಅಬ್ಬರಿಸಿದ ಕಿಂಗ್​ ಕೊಹ್ಲಿ, ಹೊಸ ಇತಿಹಾಸ ನಿರ್ಮಿಸಿದ ವಿರಾಟ್

    ವಿರಾಟ್ ಕೊಹ್ಲಿ ಇಂದು ಬೆಂಕಿ ಬ್ಯಾಟಿಂಗ್​ ಮಾಡುವ ಮೂಲಕ ಆಕರ್ಷಕ ಶತಕ ಸಿಡಿಸಿದರು. ಕೊಹ್ಲಿ 63 ಎಸೆತದಲ್ಲಿ 12 ಫೋರ್​ ಮತ್ತು 4 ಸಿಕ್ಸ್ ಮೂಲಕ 100 ರನ್ ಗಳಿಸಿದರು. ಈ ಮೂಲಕ ಈ ವರ್ಷ ಐಪಿಎಲ್​ನಲ್ಲಿಯೂ ತಮ್ಮ ಶತಕದ ಬರವನ್ನು ನೀಗಿಸಿದರು.

    MORE
    GALLERIES

  • 37

    Virat Kohli: 4 ವರ್ಷಗಳ ಬಳಿಕ ಶತಕ ಸಿಡಿಸಿ ಅಬ್ಬರಿಸಿದ ಕಿಂಗ್​ ಕೊಹ್ಲಿ, ಹೊಸ ಇತಿಹಾಸ ನಿರ್ಮಿಸಿದ ವಿರಾಟ್

    ಇದರ ನಡುವೆ ಕೊಹ್ಲಿ ಅಬ್ಬರಕ್ಕೆ ನಲುಗಿದ ಹೈದರಾಬಾದ್​ ಟೀಂ ಆರ್​ಸಿಬಿ ಎದುರು ಮಂಡಿಯೂರಿತು. ಈ ಮೂಲಕ ಕೊಹ್ಲಿ ಐಪಿಎಲ್​ನಲ್ಲಿ ಬರೋಬ್ಬರಿ 4 ವರ್ಷಗಳ ಬಳಿಕ ಶತಕ ಸಿಡಿಸಿ ಸಂಭ್ರಮಿಸಿದರು.

    MORE
    GALLERIES

  • 47

    Virat Kohli: 4 ವರ್ಷಗಳ ಬಳಿಕ ಶತಕ ಸಿಡಿಸಿ ಅಬ್ಬರಿಸಿದ ಕಿಂಗ್​ ಕೊಹ್ಲಿ, ಹೊಸ ಇತಿಹಾಸ ನಿರ್ಮಿಸಿದ ವಿರಾಟ್

    ಹೌದು, ಕಿಂಗ್​ ಕೊಹ್ಲಿ ಕೊನೆಯದಾಗಿ 2019 ರಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಶತಕ ಬಾರಿಸಿದ್ದರು. ಅದಾದ ಬಳಿಕ ಸತತ 4 ವರ್ಷದಿಂದ ಐಪಿಎಲ್​ ಶತಕಕ್ಕಾಗಿ ಕಾಯುತ್ತಿದ್ದರು. ಆದರೆ ಇಂದು ಆ ಕಾಯುವಿಕೆಗೂ ಫುಲ್​ಸ್ಟಾಪ್​ ಇಟ್ಟಿದ್ದಾರೆ.

    MORE
    GALLERIES

  • 57

    Virat Kohli: 4 ವರ್ಷಗಳ ಬಳಿಕ ಶತಕ ಸಿಡಿಸಿ ಅಬ್ಬರಿಸಿದ ಕಿಂಗ್​ ಕೊಹ್ಲಿ, ಹೊಸ ಇತಿಹಾಸ ನಿರ್ಮಿಸಿದ ವಿರಾಟ್

    ಕಳೆದ ಏಷ್ಯಾಕಪ್​ನಿಂದ ಸತತ ಶತಕ ಸಿಡಿಸುತ್ತಿರುವ ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ20 ಮಾದರಿಯಲ್ಲಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿನ ಸಂಚುರಿ ಬಳಿಕ ಇದೀಗ ಆರ್​ಸಿಬಿ ತಂಡದ ಮಹತ್ವದ ಪಂದ್ಯದಲ್ಲಿ ಐಪಿಎಲ್​ನಲ್ಲಿಯೂ ಶತಕ ಸಿಡಿಸಿದರು.

    MORE
    GALLERIES

  • 67

    Virat Kohli: 4 ವರ್ಷಗಳ ಬಳಿಕ ಶತಕ ಸಿಡಿಸಿ ಅಬ್ಬರಿಸಿದ ಕಿಂಗ್​ ಕೊಹ್ಲಿ, ಹೊಸ ಇತಿಹಾಸ ನಿರ್ಮಿಸಿದ ವಿರಾಟ್

    ಹೈದರಾಬಾದ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡುವ ವೇಳೆ ವಿರಾಟ್ ಕೊಹ್ಲಿ ಶತಕ ಬಾರಿಸಿ ಮತ್ತೊಮ್ಮೆ ಅಬ್ಬರಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ, ಈಗ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ನ ದಾಖಲೆಯನ್ನು ನಿರ್ಮಿಸಿದ್ದಾರೆ.

    MORE
    GALLERIES

  • 77

    Virat Kohli: 4 ವರ್ಷಗಳ ಬಳಿಕ ಶತಕ ಸಿಡಿಸಿ ಅಬ್ಬರಿಸಿದ ಕಿಂಗ್​ ಕೊಹ್ಲಿ, ಹೊಸ ಇತಿಹಾಸ ನಿರ್ಮಿಸಿದ ವಿರಾಟ್

    ಹೌದು, ಕೊಹ್ಲಿ ಅತಿ ಹೆಚ್ಚು ಐಪಿಎಲ್​ ಶತಕ ಸಿಡಿಸಿದ ಪಟ್ಟಿಯಲ್ಲಿ ಗೇಲ್​ಗೆ ಸರಿಸಮನಾಗಿ ನಿಂತಿದ್ದಾರೆ. ಕ್ರಿಸ್ ಗೇಲ್ ಟೂರ್ನಿಯಲ್ಲಿ ಗರಿಷ್ಠ 6 ಶತಕಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದು, ಇದೀಗ ವಿರಾಟ್ ಅವರ ಸರಿಸಮಾನಕ್ಕೆ ತಲುಪಿದ್ದಾರೆ.

    MORE
    GALLERIES