ಹಲವು ದಾಖಲೆಗಳನ್ನು ಹೊಂದಿರುವ ಕೊಹ್ಲಿ ಅವರ ಮುಂದೆ ಒಂದು ಸವಾಲಿದೆ. ಅವರು ಏಕದಿನ ಕ್ರಿಕೆಟ್ನಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಶತಕಗಳ ದಾಖಲೆಯಲ್ಲಿ ಹಿಂದುಳಿದಿದ್ದಾರೆ. 2017 ಮತ್ತು 2018 ಕೊಹ್ಲಿ ತಮ್ಮ ಫಾರ್ಮ್ನ ಉತ್ತುಂಗವನ್ನು ತಲುಪಿದ ವರ್ಷಗಳು. ಎರಡೂ ವರ್ಷಗಳಲ್ಲಿ ಅವರು 6-6 ಶತಕಗಳನ್ನು ಬಾರಿಸಿದರು. ಏತನ್ಮಧ್ಯೆ, ಕೊಹ್ಲಿ ಇದೀಗ ಏಕದಿನ ಶ್ವಕಪ್ ವರ್ಷವನ್ನು ಶತಕದೊಂದಿಗೆ ಪ್ರಾರಂಭಿಸಿದ್ದಾರೆ. ಮತ್ತು ಈ ವರ್ಷ ವಿರಾಟ್ ಕೊಹ್ಲಿ ಆ ದಾಖಲೆಯನ್ನೂ ತಮ್ಮ ಖಾತೆಗೆ ಸೇರಿಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.
ಜೊತೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2019ರಲ್ಲಿ ರನ್ಗಳ ಮಹಾಪೂರವನ್ನೇ ಹರಿಸಿದ್ದರು. ಅವರು ಏಕದಿನ ವಿಶ್ವಕಪ್ನಲ್ಲಿಯೇ 5 ಅದ್ಭುತ ಶತಕಗಳನ್ನು ಗಳಿಸಿದ್ದರು. ಆ ವರ್ಷದಲ್ಲಿ ಹಿಟ್ಮ್ಯಾನ್ ಒಟ್ಟು 7 ಶತಕಗಳ ಇನ್ನಿಂಗ್ಸ್ಗಳನ್ನು ಆಡಿದ್ದರು. ರೋಹಿತ್ ಶರ್ಮಾ ಕೇವಲ 27 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದೀಗ ಕೊಹ್ಲಿ ಈವರ್ಷ ಈ ಸಾಧನೆ ಮಾಡಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.
2019ರಲ್ಲಿ ರೋಹಿತ್ ಶರ್ಮಾ 57.30ರ ಸರಾಸರಿಯಲ್ಲಿ 1490 ರನ್ ಗಳಿಸಿದ್ದರು. ಆ ಸಮಯದಲ್ಲಿ, 7 ಶತಕಗಳ ಜೊತೆಗೆ, ಹಿಟ್ಮ್ಯಾನ್ 6 ಅರ್ಧಶತಕಗಳ ಇನ್ನಿಂಗ್ಸ್ಗಳನ್ನು ಸಹ ಆಡಿದ್ದರು. ವಿರಾಟ್ ಕೊಹ್ಲಿ 2023ರಲ್ಲಿ ಶತಕ ಬಾರಿಸುವ ಮೂಲಕ ಆರಂಭಿಸಿದ್ದಾರೆ. ಈ ವರ್ಷ ವಿಶ್ವಕಪ್ ಕೂಡ ಇದೆ. ಇದರೊಂದಿಗೆ ರೋಹಿತ್ ದಾಖಲೆಯನ್ನು ಕೊಹ್ಲಿ ಮುರಿಯುತ್ತಾರೆಯೇ ಎಂದು ಕಾದು ನೋಡಬೇಕಿದೆ.