Virat Kohli: ವಿಶ್ವ ಕ್ರಿಕೆಟ್​​ನಲ್ಲೂ ಕೊಹ್ಲಿಯೇ ಕಿಂಗ್​! ಯಾವ ರೆಕಾರ್ಡ್​ನೂ ಬಿಡಲ್ಲ, ನುಗ್ಗಿ ಹೊಡಿಯೋ ವಿರಾಟ್​!

Virat Kohli: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ 2-1 ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಸಹ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಫ್​ 2023ರ ಫೈನಲ್​ಗೆ ಲಗ್ಗೆ ಇಟ್ಟಿದೆ. ಇದರ ನಡುವೆ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದಾರೆ.

First published:

 • 18

  Virat Kohli: ವಿಶ್ವ ಕ್ರಿಕೆಟ್​​ನಲ್ಲೂ ಕೊಹ್ಲಿಯೇ ಕಿಂಗ್​! ಯಾವ ರೆಕಾರ್ಡ್​ನೂ ಬಿಡಲ್ಲ, ನುಗ್ಗಿ ಹೊಡಿಯೋ ವಿರಾಟ್​!

  ಆಸೀಸ್​ ವಿರುದ್ಧದ 4ನೇ ಟೆಸ್ಟ್​ ಪಂದ್ಯವನ್ನು ಡ್ರಾ ಮಾಡುವ ಮೂಲಕ ಭಾರತ ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ. ರನ್ ಮಷಿನ್​ ವಿರಾಟ್​ ಕೊಹ್ಲಿ ಬರೋಬ್ಬರಿ 1,205 ದಿನಗಳ ನಂತರ ಅವರ 28ನೇ ಟೆಸ್ಟ್ ಶತಕವನ್ನು ಪೂರೈಸಿದ್ದರು. 364 ಎಸೆತಗಳಲ್ಲಿ 186 ರನ್ ಗಳಿಸಿದ ವಿರಾಟ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

  MORE
  GALLERIES

 • 28

  Virat Kohli: ವಿಶ್ವ ಕ್ರಿಕೆಟ್​​ನಲ್ಲೂ ಕೊಹ್ಲಿಯೇ ಕಿಂಗ್​! ಯಾವ ರೆಕಾರ್ಡ್​ನೂ ಬಿಡಲ್ಲ, ನುಗ್ಗಿ ಹೊಡಿಯೋ ವಿರಾಟ್​!

  ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ 2-1 ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಸಹ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಫ್​ 2023ರ ಫೈನಲ್​ಗೆ ಲಗ್ಗೆ ಇಟ್ಟಿದೆ. ಜೊತೆಗೆ ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡುಸವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನಾರಾಗುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದಾರೆ.

  MORE
  GALLERIES

 • 38

  Virat Kohli: ವಿಶ್ವ ಕ್ರಿಕೆಟ್​​ನಲ್ಲೂ ಕೊಹ್ಲಿಯೇ ಕಿಂಗ್​! ಯಾವ ರೆಕಾರ್ಡ್​ನೂ ಬಿಡಲ್ಲ, ನುಗ್ಗಿ ಹೊಡಿಯೋ ವಿರಾಟ್​!

  ಹೌದು, ವಿರಾಟ್ ಕೊಹ್ಲಿ ಶತಕದ ಕಾರಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಲಭಿಸಿತು. ಇದರೊಂದಿಗೆ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 10ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಮೂಲಕ ಕೊಹ್ಲಿ ಕ್ರಿಕೆಟ್​ನ ಎಲ್ಲಾ ಮೂರು ಮಾದರಿಯಲ್ಲಿ ಕನಿಷ್ಠ 10 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವದ ಏಕೈಕ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

  MORE
  GALLERIES

 • 48

  Virat Kohli: ವಿಶ್ವ ಕ್ರಿಕೆಟ್​​ನಲ್ಲೂ ಕೊಹ್ಲಿಯೇ ಕಿಂಗ್​! ಯಾವ ರೆಕಾರ್ಡ್​ನೂ ಬಿಡಲ್ಲ, ನುಗ್ಗಿ ಹೊಡಿಯೋ ವಿರಾಟ್​!

  ವಿರಾಟ್ ಕೊಹ್ಲಿ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಎಲ್ಲಾ 3 ಮಾದರಿ ಸೇರಿಸಿ ಒಟ್ಟು 63 ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇದರಲ್ಲಿ 10 ಬಾರಿ ಟೆಸ್ಟ್​ನಲ್ಲಿ, 38 ಸಲ ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ 15 ಬಾರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  MORE
  GALLERIES

 • 58

  Virat Kohli: ವಿಶ್ವ ಕ್ರಿಕೆಟ್​​ನಲ್ಲೂ ಕೊಹ್ಲಿಯೇ ಕಿಂಗ್​! ಯಾವ ರೆಕಾರ್ಡ್​ನೂ ಬಿಡಲ್ಲ, ನುಗ್ಗಿ ಹೊಡಿಯೋ ವಿರಾಟ್​!

  ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಈ ಸಾಧನೆ ವಿಶ್ವದ ಯಾವ ಕ್ರಿಕೆಟ್​ರ್​ ಸಹ ಮಾಡಿಲ್ಲ. ಈ ಮೂಲಕ ಪ್ರಶಸ್ತಿಗಳ ವಿಷಯದಲ್ಲಿಯೂ ಕೊಹ್ಲಿ ಹೊಸ ವಿಶ್ವ ದಾಖಲೆ ನಿರ್ಮಾಸಿದ್ದಾರೆ.

  MORE
  GALLERIES

 • 68

  Virat Kohli: ವಿಶ್ವ ಕ್ರಿಕೆಟ್​​ನಲ್ಲೂ ಕೊಹ್ಲಿಯೇ ಕಿಂಗ್​! ಯಾವ ರೆಕಾರ್ಡ್​ನೂ ಬಿಡಲ್ಲ, ನುಗ್ಗಿ ಹೊಡಿಯೋ ವಿರಾಟ್​!

  ಇನ್ನು, ಅತೀ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ನೋಡುವುದಾದರೆ, ಸಚಿನ್ ಒಟ್ಟು 664 ಪಂದ್ಯಗಳ ಮೂಲಕ 76 ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ. ಆದರೆ ಸಚಿನ್​ ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ ಈ ಪ್ರಶಸ್ತಿ ಪಡೆದಿದ್ದು, ಟಿ20 ಕ್ರಿಕೆಟ್​ನಲ್ಲಿ ಏಕೈಕ ಪಂದ್ಯವಾಡಿದ ಕಾರಣ ಅವರಿಗೆ ಈ ಮಾದರಿಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ದೊರಕಲಿಲ್ಲ.

  MORE
  GALLERIES

 • 78

  Virat Kohli: ವಿಶ್ವ ಕ್ರಿಕೆಟ್​​ನಲ್ಲೂ ಕೊಹ್ಲಿಯೇ ಕಿಂಗ್​! ಯಾವ ರೆಕಾರ್ಡ್​ನೂ ಬಿಡಲ್ಲ, ನುಗ್ಗಿ ಹೊಡಿಯೋ ವಿರಾಟ್​!

  ನಾಲ್ಕನೇ ಟೆಸ್ಟ್‌ನಲ್ಲಿ ಕೊಹ್ಲಿ ತಮ್ಮ 28ನೇ ಶತಕವನ್ನು ಗಳಿಸಿದ್ದರು. ಅಲ್ಲದೆ ಒಟ್ಟಾರೆ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಭಾರತ ಪರ ವೇಗವಾಗಿ 75ನೇ ಶತಕ ಸಿಡಿಸಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಭಾರತ ಪರ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ವಿರಾಟ್​ ಕೊಹ್ಲಿ ಆಗಿದ್ದಾರೆ.

  MORE
  GALLERIES

 • 88

  Virat Kohli: ವಿಶ್ವ ಕ್ರಿಕೆಟ್​​ನಲ್ಲೂ ಕೊಹ್ಲಿಯೇ ಕಿಂಗ್​! ಯಾವ ರೆಕಾರ್ಡ್​ನೂ ಬಿಡಲ್ಲ, ನುಗ್ಗಿ ಹೊಡಿಯೋ ವಿರಾಟ್​!

  ಕೊಹ್ಲಿ ತವರಿನಲ್ಲಿ 11,000 ರನ್ ಗಳಿಸಿದ್ದು, ವೇಗವಾಗಿ ಅಂದರೆ ಕೇವಲ 224 ಇನ್ನಿಂಗ್ಸ್‌ಗಳಲ್ಲಿ ದಾಖಲೆಯನ್ನು ನಿರ್ಮಿಸಿದ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ

  MORE
  GALLERIES