Virat Kohli: ಕಿಂಗ್ ಕೊಹ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆಯೋಕೆ ಇದೇ ಕಾರಣವಂತೆ! ವಿರಾಟ್ ಬ್ಯಾಟ್ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!
Virat Kohli: ಎಂಆರ್ಎಫ್ ವಿರಾಟ್ ಕೊಹ್ಲಿಯ ಬ್ಯಾಟ್ನಲ್ಲಿ ಕಂಡುಬರುವ ಬ್ರಾಂಡ್ ಆಗಿದೆ. ಒಂದಲ್ಲ ಎರಡಲ್ಲ ಕಳೆದ ಕೆಲ ವರ್ಷಗಳಿಂದ ಕಿಂಗ್ ಕೊಹ್ಲಿ ಬ್ಯಾಟ್ ಮೇಲೆ ಈ ಬ್ರ್ಯಾಂಡ್ ಸ್ಟಿಕ್ಕರ್ ಕಾಣಸಿಗುತ್ತಿದೆ. ಇಲ್ಲಿಯವರೆಗೆ ಕೊಹ್ಲಿ ಒಟ್ಟು 74 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ಸಚಿನ್ ಅವರ ಶತಕಗಳ ಶತಕದ ದಾಖಲೆಯನ್ನು ಯಾರಾದರೂ ಮುರಿಯಲು ಸಾಧ್ಯವಾಗುತ್ತದೆ ಅದು ವಿರಾಟ್ ಕೊಹ್ಲಿಯಿಂದ ಮಾತ್ರ ಎಂಬ ಮಾತುಗಳು ಕಳೆದ ಅನೇಕ ವರ್ಷಗಳಿಂದ ಕೇಳಿಬರುತ್ತಿದೆ,.
2/ 8
ಇದಕ್ಕೆ ತಕ್ಕಂತೆ ಕೊಹ್ಲಿಯ ಬ್ಯಾಟ್ ಸಹ ಅಬ್ಬರಿಸುತ್ತಲೇ ಇರುತ್ತದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳನ್ನು ಆಡಿರುವ ಕೊಹ್ಲಿ ಎರಡರಲ್ಲಿ ಅಮೋಘ ಶತಕ ಬಾರಿಸಿದ್ದರು. ಅದರಲ್ಲಿಯೂ ಕೊನೆಯ ಏಕದಿನ ಪಂದ್ಯದಲ್ಲಿ ರನ್ ಮಳೆಯನ್ನೇ ಸುರಿಸಿದರು. ಅವರು 13 ಬೌಂಡರಿ ಮತ್ತು 8 ಸಿಕ್ಸರ್ಗಳೊಂದಿಗೆ 166 ರನ್ ಗಳಿಸಿ ಅಜೇಯರಾಗುಳಿದರು.
3/ 8
ಇನ್ನು, MRF ವಿರಾಟ್ ಕೊಹ್ಲಿ ಅವರ ಬ್ಯಾಟ್ನಲ್ಲಿ ಕಂಡುಬರುವ ಬ್ರಾಂಡ್ ಆಗಿದೆ. ಒಂದಲ್ಲ ಎರಡಲ್ಲ ಕಳೆದ ಕೆಲ ವರ್ಷಗಳಿಂದ ಕಿಂಗ್ ಕೊಹ್ಲಿ ಬ್ಯಾಟ್ ಮೇಲೆ ಈ ಬ್ರ್ಯಾಂಡ್ ಸ್ಟಿಕ್ಕರ್ ಕಾಣಸಿಗುತ್ತಿದೆ. ಇಲ್ಲಿಯವರೆಗೆ ಕೊಹ್ಲಿ ಒಟ್ಟು 74 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ.
4/ 8
ಕೊಹ್ಲಿಯ ಬ್ಯಾಟ್ನಿಂದ ಬರುವ ಪ್ರತಿಯೊಂದು ಶತಕದ ಹಿಂದೆ ಅವರ ಬ್ಯಾಟ್ ಪವರ್ ಸಹ ಇದೆ. ಈ ಸೂಪರ್ಸ್ಟಾರ್ ಬ್ಯಾಟ್ನ ಬೆಲೆಯನ್ನು ತಿಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಚಕಿತರಾಗುತ್ತೀರಾ.
5/ 8
MRF ಕಂಪನಿ ತಯಾರಿಸಿರುವ ಈ ಬ್ಯಾಟ್ ಅನ್ನು ಅತ್ಯಂತ ದುಬಾರಿ ಇಂಗ್ಲಿಷ್ ವಿಲೋ ಮರದ ಮರದಿಂದ ತಯಾರಿಸಲಾಗುತ್ತದೆ. ಕಂಪನಿಯು ಈ ಬ್ಯಾಟ್ಗೆ ಗೋಲ್ಡ್ ವಿಝಾರ್ಡ್ ಎಂದು ಹೆಸರಿಸಿದೆ. ಈ ಬ್ಯಾಟ್ಗೆ 10 ರಿಂದ 12 ಗೇಜ್ ಇಂಗ್ಲಿಷ್ ವಿಲೋ ಮರವನ್ನು ಬಳಸಲಾಗುತ್ತದೆ.
6/ 8
ಇನ್ನು, ಕೊಹ್ಲಿ ಅಷ್ಟು ಸುಲಭವಾಗಿ ಫೋರ್ ಮತ್ತು ಸಿಕ್ಸ್ ಸಿಡಿಸುವ ಬ್ಯಾಟ್ ಎಷ್ಟು ತೂಕವಿರುತ್ತದೆ ಎಂದು ನೋಡುವುದಾದರೆ, ಕೊಹ್ಲಿ ಬ್ಯಾಟ್ ತೂಕ ಸರಿಸುಮಾರು 1.1 ಕೆಜಿಯಿಂದ 1.26 ಕೆಜಿವರೆಗೆ ಇರುತ್ತದೆ. ಈ ಬ್ಯಾಟ್ ರೂ.25 ಸಾವಿರದಿಂದ ರೂ.30 ಸಾವಿರದವರೆಗೆ ಇದೆ.
7/ 8
ಇಂಗ್ಲಿಷ್ ವಿಲೋ ಕ್ರಿಕೆಟ್ ಬ್ಯಾಟ್ನಲ್ಲಿ ಬಳಸುವ ಧಾನ್ಯದ ಆಧಾರದ ಮೇಲೆ ಅದರ ಬೆಲೆ ನಿರ್ಧಾರವಾಗುತ್ತದೆ. ಧಾನ್ಯವು ಇಂಗ್ಲಿಷ್ ವಿಲೋ ಮರದ ವಯಸ್ಸಿಗೆ ಸಂಬಂಧಿಸಿದೆ. ವಿರಾಟ್ ತಮ್ಮ ಬ್ಯಾಟ್ನಲ್ಲಿ 10 ರಿಂದ 12 ಧಾನ್ಯಗಳನ್ನು ಬಳಸುತ್ತಾರೆ.
8/ 8
ವಿರಾಟ್ ಕೊಹ್ಲಿ ಮೈದಾನದಲ್ಲಿ ಆಡಲು ಬಳಸುವ ಬ್ಯಾಟ್ನ ಬೆಲೆ 17 ಸಾವಿರದಿಂದ ಪ್ರಾರಂಭವಾಗುತ್ತದೆ. ಇದರ ಬೆಲೆ 25 ರಿಂದ 30 ಸಾವಿರದವರೆಗೂ ಹೋಗಬಹುದು. ವಿರಾಟ್ ಕೊಹ್ಲಿ ಅವರ ಬ್ಯಾಟ್ನ ತೂಕ 1.1 ಕೆಜಿಯಿಂದ 1.26 ಕೆಜಿ ವರೆಗೆ ಇರುತ್ತದೆ.