IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಬಿಗ್​ ಶಾಕ್​, ಟೂರ್ನಿಯಿಂದ ಕೊಹ್ಲಿ-ರೋಹಿತ್​ ಸೇರಿ 10 ಮಂದಿ ಔಟ್?

IPL 2023: ರೋಹಿತ್ ಶರ್ಮಾರಿಂದ ಹಿಡಿದು ವಿರಾಟ್ ಕೊಹ್ಲಿವರೆಗಿನ ಕೆಲಸದ ಹೊರೆಯತ್ತ ಗಮನ ಹರಿಸಬೇಕು ಎಂದು ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ 2 ದಿಗ್ಗಜರನ್ನು ಹೊರತುಪಡಿಸಿ ಸುಮಾರು 10 ದೊಡ್ಡ ಆಟಗಾರರು ಟಿ20 ಲೀಗ್‌ನ ಎಲ್ಲಾ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ.

First published:

  • 18

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಬಿಗ್​ ಶಾಕ್​, ಟೂರ್ನಿಯಿಂದ ಕೊಹ್ಲಿ-ರೋಹಿತ್​ ಸೇರಿ 10 ಮಂದಿ ಔಟ್?

    ಐಪಿಎಲ್ 2023 ಈ ಬಾರಿ ಹಲವು ವಿಶೆಷತೆಗಳಿಂದ ಕೂಡಿರುತ್ತದೆ. ಒಟ್ಟು 10 ತಂಡಗಳು ಟೂರ್ನಿಗೆ ಪ್ರವೇಶಿಸುತ್ತಿವೆ. ಮೊದಲ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

    MORE
    GALLERIES

  • 28

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಬಿಗ್​ ಶಾಕ್​, ಟೂರ್ನಿಯಿಂದ ಕೊಹ್ಲಿ-ರೋಹಿತ್​ ಸೇರಿ 10 ಮಂದಿ ಔಟ್?

    ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಕೆಲಸದ ಹೊರೆ ಬಗ್ಗೆ ಗಮನ ಹರಿಸುವಂತೆ ಬಿಸಿಸಿಐ ಮತ್ತು ಎನ್‌ಸಿಎ ಎಲ್ಲಾ ಫ್ರಾಂಚೈಸಿಗಳಿಗೆ ಸೂಚಿಸಿವೆ. ಹೀಗಿರುವಾಗ ರೋಹಿತ್ ಶರ್ಮಾರಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ ಕೆಲ ಪಂದ್ಯಗಳಲ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಇದರಲ್ಲಿ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಸಹ ಸೇರಿದ್ದಾರೆ.

    MORE
    GALLERIES

  • 38

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಬಿಗ್​ ಶಾಕ್​, ಟೂರ್ನಿಯಿಂದ ಕೊಹ್ಲಿ-ರೋಹಿತ್​ ಸೇರಿ 10 ಮಂದಿ ಔಟ್?

    ಐಪಿಎಲ್ 16ನೇ ಸೀಸನ್ ಮೇ 28ಕ್ಕೆ ಕೊನೆಗೊಳ್ಳಲಿದೆ. ಜೂನ್ 7 ರಿಂದ, ಪಂದ್ಯಾವಳಿ ಮುಗಿದ 9 ದಿನಗಳ ನಂತರ, ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಟಗಾರರ ಆಯಾಸ ಹಾಗೂ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ಪ್ಲಾನ್ ಮಾಡಿದೆ.

    MORE
    GALLERIES

  • 48

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಬಿಗ್​ ಶಾಕ್​, ಟೂರ್ನಿಯಿಂದ ಕೊಹ್ಲಿ-ರೋಹಿತ್​ ಸೇರಿ 10 ಮಂದಿ ಔಟ್?

    ಐಪಿಎಲ್ 2023 ರ ಋತುವಿನ ಅಂತ್ಯದ ಒಂದು ವಾರದ ನಂತರ, ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ನ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ಆಡಲಿದೆ. ಈ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಈ ಮೆಗಾ ಟೂರ್ನಿಗಳ ಹಿನ್ನೆಲೆಯಲ್ಲಿ ಆಟಗಾರರಿಗೆ ವಿಶ್ರಾಂತಿಗಾಗಿ ಬಿಸಿಸಿಐ ಈ ನಿರ್ಧಾರಕ್ಕೆ ಮುಮದಾಗಿದೆ.

    MORE
    GALLERIES

  • 58

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಬಿಗ್​ ಶಾಕ್​, ಟೂರ್ನಿಯಿಂದ ಕೊಹ್ಲಿ-ರೋಹಿತ್​ ಸೇರಿ 10 ಮಂದಿ ಔಟ್?

    ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ವಿಶ್ವಕಪ್‌ನಲ್ಲಿ ಆಡುವ ಪ್ರತಿಯೊಬ್ಬ ಆಟಗಾರನ ಕೆಲಸದ ಹೊರೆಯನ್ನು ತಂಡದ ನಿರ್ವಹಣೆ ಪರಿಗಣಿಸುತ್ತದೆ ಮತ್ತು ಫ್ರಾಂಚೈಸಿಗಳು ಆಯಾ ಆಟಗಾರರ ಕೆಲಸದ ಹೊರೆಯನ್ನು ಸಮನ್ವಯಗೊಳಿಸಬೇಕು ಎಂದು ಬಿಸಿಸಿಐ ತಿಳಿಸಿದೆ.

    MORE
    GALLERIES

  • 68

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಬಿಗ್​ ಶಾಕ್​, ಟೂರ್ನಿಯಿಂದ ಕೊಹ್ಲಿ-ರೋಹಿತ್​ ಸೇರಿ 10 ಮಂದಿ ಔಟ್?

    ಟೀಂ ಇಂಡಿಯಾ ಆಟಗಾರರ ತಯಾರಿ ಬಿಸಿಸಿಐ ಪ್ರಕಾರ ಇರುತ್ತದೆ. ಅದಕ್ಕಾಗಿಯೇ ನಾಯಕರಾಗಿರುವ ರೋಹಿತ್ ಮತ್ತು ವಿರಾಟ್​ ಕೊಹ್ಲಿ ಇತರ ಆಟಗಾರರಿಗೆ ಸ್ಫೂರ್ತಿ ನೀಡಲು ಐಪಿಎಲ್ 2023ರಲ್ಲಿ ಕೆಲವು ಪಂದ್ಯಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

    MORE
    GALLERIES

  • 78

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಬಿಗ್​ ಶಾಕ್​, ಟೂರ್ನಿಯಿಂದ ಕೊಹ್ಲಿ-ರೋಹಿತ್​ ಸೇರಿ 10 ಮಂದಿ ಔಟ್?

    ಹೀಗಾಗಿ ಕೇವಲ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ ಜೊತೆಗೆ, ಶ್ರೇಯಸ್​ ಅಯ್ಯರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್​, ಆರ್​.ಅಶ್ವಿನ್, ರವೀಮದ್ರ ಜಡೇಜಾ, ಅಕ್ಷರ್​ ಪಟೇಲ್​, ಶುಭ್​ಮನ್ ಗಿಲ್, ಸಂಜು ಸ್ಯಾಮ್ಸನ್ ಮತ್ತು ಕೆಎಲ್ ರಾಹುಲ್​ ಸೇರಿಂದತೆ ಭಾರತದ 10 ಆಟಗಾರರು ಕನಿಷ್ಠ 5ರಿಂದ 7 ಪಂದ್ಯಗಳಲ್ಲಿ ಹೊರಗುಳಿಯುವ ಸಾಧ್ಯತೆ ಇದೆ.

    MORE
    GALLERIES

  • 88

    IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಬಿಗ್​ ಶಾಕ್​, ಟೂರ್ನಿಯಿಂದ ಕೊಹ್ಲಿ-ರೋಹಿತ್​ ಸೇರಿ 10 ಮಂದಿ ಔಟ್?

    ಬಿಸಿಸಿಐನಿಂದ ಎಲ್ಲ ಫ್ರಾಂಚೈಸಿಗಳಿಗೂ ಸ್ಪಷ್ಟ ಸೂಚನೆ ನೀಡಲಾಗಿದೆ. ರೋಹಿತ್ ಶರ್ಮಾರಿಂದ ಹಿಡಿದು ವಿರಾಟ್ ಕೊಹ್ಲಿವರೆಗಿನ ಕೆಲಸದ ಹೊರೆಯತ್ತ ಗಮನ ಹರಿಸುವುದರ ಜೊತೆಗೆ ಕೋಚ್​ ದ್ರಾವಿಡ್​ ಸೇರಿದಂತೆ ಅನೇಕರಿಗೆ ಮುಂಬರಲಿರುವ WTC ಕುರಿತು ಈಗಿನಿಂದಲೇ ತಯಾರಿ ನಡೆಸುವಂತೆ ಬಿಸಿಸಿಐ ಸೂಚಿಸಿದೆ ಎಂದು ಹೇಳಲಾಗಿದೆ.

    MORE
    GALLERIES