ಮೊದಲ ಆವೃತ್ತಿಯ ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾರತದಾದ್ಯಂತ ಟೀಂ ಇಂಡಿಯಾ ಆಟಗಾರರ ಸಾಧನೆಗೆ ಪ್ರಶಂಗೆಗಳ ಸುರಿಮಳೆಯಾಗುತ್ತಿದೆ. ಈ ನಡುವೆ ಕಪ್ ಗೆಲ್ಲುವ ಹಿಂದೆ ಟೀಂ ಇಂಡಿಯಾ ಆಟಗಾರರ ಪರಿಶ್ರಮ, ಕ್ರಿಕೆಟ್ ಮೇಲಿನ ಪ್ರೀತಿ, ಆಟಗಾರರಿಗೆ ಸಿಕ್ಕ ಬೆಂಬಲ ಸೇರಿದಂತೆ ಹಲವು ಅಂಶಗಳ ಬಗ್ಗೆ ವಿಶೇಷ ವರದಿಗಳು ಬರುತ್ತಿವೆ.
ವಿಶ್ವಕಪ್ ಗೆದ್ದ ತಂಡಕ್ಕೆ ಬಿಸಿಸಿಐ ಭಾರೀ ಬಹುಮಾನವನ್ನು ಘೋಷಣೆ ಮಾಡಿದೆ. ಈ ನಡುವೆ ಟೀಂ ಇಂಡಿಯಾದಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದ ತ್ರಿಷಾ ಹೆಸರು ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಹೌದು, ಅಂಡರ್19 ತಂಡದ ವಿಶ್ವಕಪ್ನಲ್ಲಿ ಟಾಪ್ ಸ್ಕೋರರ್ ಆಗಿ ಹೊರ ಹೊಮ್ಮಿರುವ ತ್ರಿಷಾ, 17 ವರ್ಷಕ್ಕೆ ತಮ್ಮ ಸಾಮರ್ಥ್ಯವೇನು ಅಂತ ಸಾಬೀತು ಪಡಿಸಿದ್ದಾರೆ.
ಅಲ್ಲದೇ, ಈಗಾಗಲೇ ಹಿರಿಯ ಆಟಗಾರರೊಂದಿಗೆ ಕ್ಯಾಪ್ಟನ್ ಶಫಾಲಿ ವರ್ಮಾ, ರಿಚಾ ಘೋಷ್ ರಂತಹ ಆಟಗಾರರು ತಂಡದಲ್ಲಿದ್ದ ಕಾರಣ ಹೆಚ್ಚಿನ ಆಗಲಿಲ್ಲ. ಟೂರ್ನಿಯಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಆಡಿದ್ದೇವು. ಫೈನಲ್ ಪಂದ್ಯದಲ್ಲಿ ಔಟ್ ಆಗದೆ ಅಂತಿಮ ಎಸೆತದವರೆಗೂ ಆಡಬೇಕಿತ್ತು. ಕಪ್ ಗೆದ್ದಿರುವ ನನ್ನ ಜೀವನ ಅತ್ಯಂತ ಸಂತಸ ಕ್ಷಣವಾಗಿದೆ ಎಂದು ತನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.